ಪ್ರವಾಸೋದ್ಯಮ ಇಲಾಖೆಗೆ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಮೊದಲು ಬಳಸುತ್ತಿದ್ದ ಕಟ್ಟಡ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ
ಕೆ. ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ
ಆರ್‌ಟಿಒ ಸ್ಥಳಾಂತರವೂ ಅನುಮಾನ ಕ್ರಿಮ್ಸ್‌ನ ಕ್ರಿಟಿಕಲ್ ಕೇರ್ ಸೆಂಟರ್ ಸ್ಥಾಪನೆಗೆ ಹೆದ್ದಾರಿ ಪಕ್ಕದಲ್ಲಿನ ಜಾಗ ಅನುಕೂಲವಾಗಲಿದ್ದು ಆರ್‌ಟಿಒ ಕಚೇರಿ ಸೇರಿದಂತೆ ಇಲ್ಲಿರುವ ಕೆಲ ಕಟ್ಟಡ ತೆರವುಗೊಳಿಸಬೇಕು. ಆರ್‌ಟಿಒಗೆ ಬಿಣಗಾ ಬಳಿ ಪ್ರತ್ಯೇಕ ಜಾಗ ಒದಗಿಸಬೇಕು ಎಂದು ಶಾಸಕ ಸತೀಶ ಸೈಲ್ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದರು. ಸದ್ಯ ಪ್ರವಾಸೋದ್ಯಮ ಇಲಾಖೆ ಕಚೇರಿ ಮುಂಚಿದ್ದ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದು ಅದರ ಪಕ್ಕದಲ್ಲೇ ಇರುವ ಆರ್‌ಟಿಒ ಕಚೇರಿ ಸ್ಥಳಾಂತರ ಆಗುವ ಸಾಧ್ಯತೆ ಕಡಿಮೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ‘ಕಚೇರಿ ಸ್ಥಳಾಂತರಕ್ಕೆ ಹೊಸ ಜಾಗಕ್ಕೆ ಹುಡುಕಾಟ ನಡೆಸಲಾಗಿದೆ. ಆದರೆ ಸೂಕ್ತ ಎನಿಸುವ ಸ್ಥಳ ಈವರೆಗೆ ಸಿಕ್ಕಿಲ್ಲ’ ಎಂದು ಆರ್‌ಟಿಒ ಕಚೇರಿ ಮೂಲಗಳು ತಿಳಿಸಿವೆ.