ಕಾರವಾರ: ಪರಿಸರ ಸೂಕ್ಷ್ಮ ಪ್ರದೇಶ ಹಲವು ಯೋಜನೆಯ ಭಾರಕ್ಕೆ ನಲುಗಿದೆ, ಮತ್ತೆ ಇಲ್ಲಿ ದೊಡ್ಡ ಯೋಜನೆಯ ಹೇರಿಕೆ ಬೇಡ ಎಂಬ ಒತ್ತಾಯದಿಂದ ಹಿಡಿದು, ಯೋಜನೆ ಜಾರಿಗೊಳ್ಳಲು ಮುಂದಾದರೆ ಎಂತಹ ಹೋರಾಟಕ್ಕೂ ಅಣಿಯಾಗಲಿದ್ದೇವೆ ಎಂಬ ಎಚ್ಚರಿಕೆ ನೀಡುವವರೆಗೆ ಪರಿಸರ ತಜ್ಞರಿಂದ ಬಡ ರೈತರವರೆಗೆ ಒಕ್ಕೊರಲಿನಿಂದ ಕೇಣಿ ಸರ್ವಋತು ಆಳ ಸಮುದ್ರ ಗ್ರೀನ್ಫೀಲ್ಡ್ ಬಂದರು ಯೋಜನೆ ವಿರುದ್ಧ ಧ್ವನಿ ಎತ್ತಲಾಯಿತು. ಯೋಜನೆ ಪರವಾಗಿ ಯಾರೊಬ್ಬರೂ ಮೌಖಿಕ ಅಹವಾಲು ಸಲ್ಲಿಸಲಿಲ್ಲ.

ಯೋಜನೆಯ ಪರಿಸರ ಪರಿಣಾಮ ಮೌಲ್ಯೀಕರಣ (ಇಐಎ) ವರದಿ ಆಧರಿಸಿ ಶುಕ್ರವಾರ ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಆಯೋಜಿಸಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯು ಭಾರಿ ವಿರೋಧಕ್ಕೆ ಸಾಕ್ಷಿಯಾಯಿತು.

ಸಭೆಯ ಆರಂಭದಲ್ಲಿಯೇ ಇಐಎ ವರದಿಯನ್ನು ಕನ್ನಡದಲ್ಲಿ ನೀಡುವಂತೆ ಜನರು ಒತ್ತಾಯಿಸಿದರು. ಕಿರಿದಾದ ಸಭಾಂಗಣದಲ್ಲಿ, ಮಳೆಗಾಲದ ಅವಧಿಯಲ್ಲಿ ಸಭೆ ಆಯೋಜಿಸಲಾಗಿದೆ. ಸರಿಯಾದ ವ್ಯವಸ್ಥೆಯನ್ನೇ ಕಲ್ಪಿಸದೆ ಸಭೆ ನಡೆಸಲಾಗುತ್ತಿದೆ ಎಂದು ವಕೀಲ ಮಹೇಶ ಹರಿಕಂತ್ರ ಆಕ್ಷೇಪಿಸುತ್ತಿದ್ದಂತೆ, ದನಿಗೂಡಿಸಿದ ಜನರು ಸಭೆ ಮುಂದೂಡಿಕೆಗೆ ಒತ್ತಾಯಿಸಿದರು.

‘ಪರಿಸರ ಸಾರ್ವಜನಿಕ ಆಲಿಕೆ ಸಭೆ ಪದೇ ಪದೇ ನಡೆಸಲಾಗದು. ಈ ಸಭೆಯಲ್ಲಿಯೇ ಜನರು ತಮ್ಮ ಅಭಿಪ್ರಾಯ ಹೇಳಿದರೆ ಅದನ್ನು ಚಿತ್ರೀಕರಿಸಿಕೊಂಡು, ಲಿಖಿತ ವರದಿಯೊಂದಿಗೆ ಸಲ್ಲಿಸಲಾಗುತ್ತದೆ. ಆ ಬಳಿಕವೇ ಅಂತಿಮ ಇಐಎ ವರದಿ ಸಿದ್ಧಗೊಳ್ಳುತ್ತದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಹೇಳಿದರು.

‘ಸಮುದ್ರಕ್ಕೆ ಹೊಂದಿಕೊಂಡು ಪಶ್ಚಿಮ ಘಟ್ಟ ಪ್ರದೇಶವಿದೆ. ಆದರೆ ಇಐಎ ವರದಿಯಲ್ಲಿ ಪಶ್ಚಿಮ ಘಟ್ಟದ ಮೇಲಿನ ಪರಿಣಾಮದ ಉಲ್ಲೇಖವಿಲ್ಲ. ಕೇಣಿ ಬಂದರು ಯೋಜನೆಯಿಂದಲೂ ಕಡಲು ಕೊರೆತ, ಪರಿಸರನಾಶ ಹೆಚ್ಚಲಿದೆ’ ಎಂದು ಕಡಲಜೀವ ವಿಜ್ಞಾನಿ ವಿ.ಎನ್.ನಾಯಕ ದೂರಿದರು.

ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶಿವರಾಮ ಗಾಂವ್ಕರ, ‘ಉತ್ತರ ಕನ್ನಡದ ಮೇಲೆ ನಿರಂತರವಾಗಿ ಯೋಜನೆಗಳನ್ನು ಹೇರಲಾಗುತ್ತಿದೆ. ಜಿಲ್ಲೆಗೆ ಒಳಿತು ಮಾಡುವುದಿದ್ದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ತೋಟಗಾರಿಕೆ ವಿಶ್ವವಿದ್ಯಾಲಯ, ಮೀನುಗಾರಿಕೆ ಅಭಿವೃದ್ಧಿಗೆ ಯೋಜನೆ ರೂಪಿಸಿ’ ಎಂದರು.

ವಕೀಲೆ ಶ್ರೀಜಾ ಚಕ್ರವರ್ತಿ, ‘ಪರಿಸರ ಆಲಿಕೆ ಸಭೆಗೆ ಮುನ್ನ ಇಐಎ ವರದಿಯನ್ನು ವ್ಯಾಪಕವಾಗಿ ಜನರಿಗೆ ತಲುಪಿಸಲು ಕೋರ್ಟ್ ಆದೇಶಗಳಿವೆ. ಆದರೆ, ಕೇಣಿ ಬಂದರು ಯೋಜನೆಯ ವರದಿ ಜನರಿಗೆ ತಿಳಿಸದೆ ಸಭೆ ನಡೆಸುವುದು ನಿಯಮಬಾಹೀರ’ ಎಂದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ‘ಜನರನ್ನು ವಿಶ್ವಾಸಕ್ಕೆ ಪಡೆಯುವ ಕೆಲಸ ನಡೆದಿಲ್ಲ. ಜನರ ಸಮಸ್ಯೆಗಳನ್ನು ಆಲಿಸಿಲ್ಲ. ವನ್ಯಜೀವಿಗಳಿಗೆ ಇರುವ ಬೆಲೆ ಮನುಷ್ಯರ ಜೀವಕ್ಕೆ ಇಲ್ಲವೆ?’ ಎಂದು ಪ್ರಶ್ನಿಸಿದರು.

ಯೋಜನೆಗೆ ಸಂಬಂಧಿಸಿದಂತೆ ಕಂಪನಿ ಮತ್ತು ಸರ್ಕಾರದ ನಡುವಿನ ಒಪ್ಪಂದದ ದಾಖಲೆ ಪ್ರದರ್ಶಿಸಿ. ಅಲ್ಲಿಯವರೆಗೆ ಸಭೆ ನಡೆಸಲು ಅವಕಾಶ ಇಲ್ಲ ಎಂದು ಉದ್ಯಮಿ ಪ್ರೀತಮ್ ಮಾಸೂರಕರ ಒತ್ತಾಯಿಸುತ್ತಿದ್ದಂತೆ ಗೊಂದಲಕ್ಕೆ ಒಳಗಾದಂತೆ ಕಂಡುಬಂದ ಅಧಿಕಾರಿಗಳು ಕೆಲವೇ ಹೊತ್ತಿನಲ್ಲಿ ದಾಖಲೆ ಒದಗಿಸುವ ಭರವಸೆ ನೀಡಿದರು.

ಗೋಪಾಲಕೃಷ್ಣ ನಾಯಕ, ಚಂದ್ರಕಾಂತ ಕೊಚ್ರೇಕರ, ಸೇರಿದಂತೆ ನೂರಾರು ಜನರು ಯೋಜನೆ ವಿರುದ್ಧ ಅಭಿಪ್ರಾಯ ಸಲ್ಲಿಸಿದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಕೀರ್ತಿ ಕುಮಾರ್, ಬಿ.ಕೆ.ಸಂತೋಷ್ ಪಾಲ್ಗೊಂಡಿದ್ದರು.

ಜನರನ್ನು ತಪ್ಪುಗೆಳೆಯುವ ಕೆಲಸ

‘ಕನ್ನಡದಲ್ಲಿರುವ ಇಐಎ ವರದಿಯನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವ ಎಂದು ಉಲ್ಲೇಖಿಸಿದ್ದರೆ ಇಂಗ್ಲಿಷ್ನಲ್ಲಿರುವ ವರದಿಯಲ್ಲಿ ಖಾಸಗಿ ಬಂದರು ಯೋಜನೆ ಎಂಬ ಉಲ್ಲೇಖವಿದೆ. ಬಂದರು ಯೋಜನೆಯು 5 ಕಿ.ಮೀ ವ್ಯಾಪ್ತಿಯ 103 ಹಳ್ಳಿಗಳನ್ನು ಒಳಗೊಳ್ಳಲಿದೆ. ಆದರೆ ಕನ್ನಡದ ವರದಿಯಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಯೋಜನೆ ಜಾರಿಯಾಗುವ ಪ್ರದೇಶದಲ್ಲಿ ಮರಳು ದಿಬ್ಬಗಳಿಲ್ಲ ಕಡಲಾಮೆ ಮೊಟ್ಟೆ ಇಡುವ ಸ್ಥಳವಿಲ್ಲ ಎಂಬುದಾಗಿ ಉಲ್ಲೇಖಿಸಲಾಗಿದೆ. ಬೇಲೆಕೇರಿ ಕಾರವಾರದಲ್ಲಿ ಬಂದರು ಇದ್ದರೂ ಅವುಗಳನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ. ಇಂತಹ ವಾಸ್ತವಕ್ಕೆ ದೂರವಾದ ಮಾಹಿತಿಗಳು ವರದಿಗಳಲ್ಲಿವೆ’ ಎಂದು ಕಡಲಜೀವ ವಿಜ್ಞಾನಿ ವಿ.ಎನ್.ನಾಯಕ ಆಕ್ಷೇಪ ವ್ಯಕ್ತಪಡಿಸಿದರು.

ಬೇಲೆಕೇರಿ ಬಂದರು ಅಭಿವೃದ್ಧಿಪಡಿಸಿ

‘ಕೇಣಿಯಲ್ಲಿ ನೂರಾರು ಕುಟುಂಬಗಳನ್ನು ಬೀದಿಪಾಲು ಮಾಡಿ ಹೊಸದಾಗಿ ಬಂದರು ಸ್ಥಾಪಿಸುವ ಬದಲು ಸಮೀಪದಲ್ಲೇ ಇರುವ ಬೇಲೆಕೇರಿ ಬಂದರು ಅಭಿವೃದ್ಧಿಪಡಿಸಲಿ. ಕೇಣಿ ಬಂದರು ಯೋಜನೆ ಕೈಬಿಡಿ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಒತ್ತಾಯಿಸಿದರು. ‘ನೈಸರ್ಗಿಕವಾಗಿರುವ ಕಾರವಾರ ವಾಣಿಜ್ಯ ಬಂದರು ಅಭಿವೃದ್ಧಿಪಡಿಸಿ. ಜೊತೆಗೆ ಬೇಲೆಕೇರಿ ವಾಣಿಜ್ಯ ಬಂದರನ್ನೂ ಅಭಿವೃದ್ಧಿಪಡಿಸಿ. ಇವುಗಳ ಬಗ್ಗೆ ಯಾವುದೇ ಉಲ್ಲೇಖಿಸದೆ ಜನರಿಗೆ ತಪ್ಪು ಮಾಹಿತಿ ನೀಡಬೇಡಿ’ ಎಂದು ಪ್ರೀತಮ್ ಮಾಸೂರಕರ ಹೇಳಿದರು.

ಮೂರು ಋತುಗಳ ಕಾಲ ಅಧ್ಯಯನ ನಡೆಸಬೇಕಿತ್ತು

‘12 ನಾಟಿಕಲ್ ಮೈಲಿ ದೂರದವರೆಗೆ ಹೂಳೆತ್ತಿ ಅಲ್ಲಿಂದ ತೆಗೆದ ಮರಳನ್ನು 457 ಎಕರೆ ಜಾಗದಲ್ಲಿ ತುಂಬಲಾಗುತ್ತದೆ. ಅವುಗಳಿಂದ ಎದುರಾಗಬಹುದಾದ ಪರಿಣಾಮಗಳ ಬಗ್ಗೆ ಮೂರು ಋತುಗಳವರೆಗೆ ಅಧ್ಯಯನ ನಡೆಸಿ ಇಐಎ ವರದಿ ಸಿದ್ದಪಡಿಸಬೇಕಿತ್ತು. ಆದರೆ ಹಾಗೆ ಮಾಡಿಲ್ಲ. ವರದಿಯಲ್ಲಿ ಅಂಕೋಲಾ ಕಡಲು ಕೊರೆತ ಪ್ರದೇಶ ಅಲ್ಲ ಎಂದು ತಪ್ಪಾಗಿ ನಮೂದಿಸಲಾಗಿದೆ’ ಎಂದು ಪರಿಸರ ತಜ್ಞ ಮಹಾಬಲೇಶ್ವರ ಹೆಗಡೆ ಸಾಯಿಮನೆ ಹೇಳಿದರು. ‘ತ್ವರಿತ ಇಐಎ ವರದಿ ಸಿದ್ದಪಡಿಸಲು ಅನುಮತಿಯೇ ಇಲ್ಲ. ಅನುಮತಿ ಸಿಕ್ಕಿದ್ದರೆ ದಾಖಲೆ ನೀಡಿ’ ಎಂದು ಪಟ್ಟು ಹಿಡಿದ ಅವರು ‘ಇಲ್ಲವಾದರೆ ಇಐಎ ವರದಿ ರದ್ದುಪಡಿಸಿ ಆಲಿಕೆ ಸಭೆ ಅಮಾನ್ಯ ಎಂದು ಘೋಷಿಸಿ’ ಎಂದು ಒತ್ತಾಯಿಸಿದರು. ‘ಸಿಆರ್ಝಡ್ ನಿಯಮಾವಳಿ ಪ್ರಕಾರ ತ್ವರಿತ ಇಐಎ ವರದಿ ಸಿದ್ದಪಡಿಸಿದ್ದೇವೆ. ಇಸ್ರೋದ ಮಾಹಿತಿ ಆಧರಿಸಿ ಈ ವರದಿ ತಯಾರಿಸಲಾಗಿದೆ’ ಎಂದು ಜೆಎಸ್ಡಬ್ಲ್ಯೂ ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದರು. ಇದಕ್ಕೆ ಭಾರಿ ಆಕ್ಷೇಪ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.