ಕಾರವಾರ: ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಯಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೊಂಕಣ ರೈಲ್ವೆಯು ವಿಶೇಷ ರೈಲುಗಳ ಸಂಚಾರವನ್ನು ಪ್ರಕಟಿಸಿದೆ.

01079 ಸಂಖ್ಯೆಯ ಲೋಕಮಾನ್ಯ ತಿಲಕ್ (ಟಿ)– ಕೊಚುವೇಲಿ– ಲೋಕಮಾನ್ಯ ತಿಲಕ್ ವಾರಾಂತ್ಯವಿಶೇಷ ರೈಲುಗಳು ಡಿ.21, ಡಿ.28 ಹಾಗೂಜ.4ರಂದು ಸಂಚರಿಸಲಿವೆ. ಅವು ಲೋಕಮಾನ್ಯ ಟರ್ಮಿನಲ್‌ನಿಂದ ರಾತ್ರಿ 12.45ಕ್ಕೆ ಸಂಚಾರ ಆರಂಭಿಸಲಿವೆ. 01080 ಸಂಖ್ಯೆಯರೈಲುಗಳು ಡಿ.22, 29 ಹಾಗೂ ಜ.5ರಂದು ಕೊಚುವೇಲಿಯಿಂದ ಮಧ್ಯಾಹ್ನ2.15ಕ್ಕೆ ಪ್ರಯಾಣಿಸಲಿವೆ.

01467 ಸಂಖ್ಯೆಯ ಪುಣೆ ಜಂಕ್ಷನ್– ಎರ್ನಾಕುಲಂ ಜಂಕ್ಷನ್ ನಡುವೆ ‘ಹಮ್‌ಸಫರ್’ ವಾರಾಂತ್ಯ ವಿಶೇಷ ರೈಲುಗಳು ಡಿ.23, 30 ಹಾಗೂ ಜ.6ರಂದು ಪುಣೆಯಿಂದ ಸಂಜೆ 7.55ಕ್ಕೆಪ್ರಯಾಣಿಸಲಿವೆ. 01468 ಸಂಖ್ಯೆಯ ರೈಲುಗಳು ಡಿ.25, ಜ.1 ಹಾಗೂ 8ರಂದು ಎರ್ನಾಕುಲಂನಿಂದ ಬೆಳಿಗ್ಗೆ 5.30ಕ್ಕೆ ಹೊರಡಲಿದೆ.

ಈ ರೈಲುಗಳಿಗೆ ಕಾರವಾರ, ಕುಮಟಾ, ಮುರ್ಡೇಶ್ವರ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡಿನಲ್ಲಿನಿಲುಗಡೆ ಇದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.