ಮುಂಡಗೋಡ: ಆರು ವರ್ಷಗಳ ನಂತರ ಇಲ್ಲಿಗೆ ಆಗಮಿಸುತ್ತಿರುವ ಟಿಬೆಟ್ನ ಬೌದ್ಧ ಧರ್ಮೀಯರ ಆಧ್ಯಾತ್ಮಿಕ ಗುರು ಸ್ವಾಗತಿಸಲು, ಸಿಂಗಾರಗೊಳ್ಳುತ್ತಿರುವ ಕಾಲೊನಿ ಒಂದೆಡೆ. ಟಿಬೆಟಿಯನ್ನರ ಜೀವನಶೈಲಿ ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರ ದಂಡು ಮತ್ತೊಂದೆಡೆ. ಪುನರ್ವಸತಿಯಲ್ಲಿ ಬದುಕು ಕಟ್ಟಿಕೊಂಡು ಜೊತೆಗೆ ಕಲೆ, ಸಂಸ್ಕೃತಿಯನ್ನು ಪೋಷಿಸಿರುವ ಟಿಬೆಟಿಯನ್ನರು ಹಾಗೂ ಅವರ ಶ್ರದ್ದಾ ಕೇಂದ್ರಗಳು ಪ್ರವಾಸಿಗರಲ್ಲಿ ಕುತೂಹಲ ಮೂಡಿಸುತ್ತಿವೆ.

ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ವಿಶಾಲವಾದ ಮಂದಿರಗಳಿಗೆ ಭೇಟಿ ನೀಡುವ ಪ್ರವಾಸಿಗರು, ಮೌನದಿಂದ ಕುಳಿತಿರುವ ಬುದ್ಧನ ವಿಗ್ರಹಗಳಿಗೆ ನಮಿಸುತ್ತಿದ್ದಾರೆ. ನಿರಾಶ್ರಿತ ಬಿಕ್ಕುಗಳ ತಿಳಿಯದ ಭಾಷೆ ಪ್ರವಾಸಿಗರಿಗೆ ಸಂವಹನಕ್ಕೆ ಅಡ್ಡಿಯಾದರೂ, ಸೂಜಿಗಲ್ಲಿನಂತೆ ಆಕರ್ಷಿಸುವ ವಿಶಾಲ ಮಂದಿರ ವೀಕ್ಷಿಸುತ್ತ ಧ್ಯಾನಸ್ಥ ಸ್ಥಿತಿಗೆ ಸಾಗುತ್ತಿದ್ದಾರೆ.

‘ಬೌದ್ಧ ಧರ್ಮದ ಕಲೆ, ಸಂಸ್ಕೃತಿಯ ಅಧ್ಯಯನಕ್ಕೆ ಬರುವ ಬೌದ್ಧ ಅನುಯಾಯಿಗಳು, ವಾರ್ಷಿಕ ಸಂಚಾರದಂತೆ ಲಡಾಖ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶದಿಂದ ಬರುವ ಟಿಬೆಟಿಯನ್ನರು, ಶೈಕ್ಷಣಿಕ ಪ್ರವಾಸಕ್ಕೆಂದು ಬರುವ ವಿದ್ಯಾರ್ಥಿಗಳು, ವಾರಾಂತ್ಯದಲ್ಲಿ ಗೋವಾದತ್ತ ಪಯಣಿಸುವರು ಎಲ್ಲರೂ ಟಿಬೆಟಿಯನ್ ಕ್ಯಾಂಪ್ಗಳಿಗೆ ಭೇಟಿ ನೀಡುತ್ತಿದ್ದಾರೆ. ಟಿಬೆಟಿಯನ್ ಕ್ಯಾಂಪ್ ನಂ.1ರ ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರಿಗೆ ಇಲ್ಲಿನ ಟಿಬೆಟಿಯನ್ನರ ಜೀವನಶೈಲಿ, ವೇಷಭೂಷಣ, ಭಾಷೆ ಎಲ್ಲವೂ ಕುತೂಹಲ ಮೂಡಿಸುತ್ತದೆ. ಆಹಾರ ಪದ್ಧತಿಯಿಂದ ಹಿಡಿದು, ಟಿಬೆಟಿಯನ್ನರ ಕೆಲಸದ ಬಗ್ಗೆ ಸ್ಥಳೀಯರಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ’ ಎಂದು ಟಿಬೆಟಿಯನ್ ಮುಖಂಡ ಲೋಬ್ಸಂಗ್ ಹೇಳಿದರು.

‘ತಾಲ್ಲೂಕಿನಲ್ಲಿ 10 ಜನವಸತಿ ಕ್ಯಾಂಪ್ ಹಾಗೂ 2 ಲಾಮಾ ಕ್ಯಾಂಪ್ಗಳಲ್ಲಿ ಟಿಬೆಟಿಯನ್ನರ ನೆಲೆ ಕಂಡುಕೊಂಡಿದ್ದಾರೆ. ಲಾಮಾ ಕ್ಯಾಂಪ್ಗಳಲ್ಲಿ ಬೌದ್ಧ ಶಿಕ್ಷಣ ಕಲಿಕಾ ಕೇಂದ್ರಗಳು, ಮಂದಿರಗಳು, ಬಿಕ್ಕುಗಳು ಇರುತ್ತಾರೆ. ಬೌದ್ಧ ಮಂದಿರಗಳೇ ಪ್ರವಾಸಿಗರ ನೆಚ್ಚಿನ ಶ್ರದ್ಧಾ ಕೇಂದ್ರಗಳಾಗಿವೆ’ ಎಂದು ಅವರು ವಿವರಿಸಿದರು.

ಟಿಬೇಟಿಯನ್ ಕಾಲೊನಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದೆ. ಇಲ್ಲಿನ ಕಟ್ಟಡ ಮಂದಿರಗಳು ಒಂದಕ್ಕೊಂದು ಭಿನ್ನವಾಗಿವೆ. ಅಗಲವಾದ ರಸ್ತೆ ಸ್ವಚ್ಛತೆಗೆ ಆದ್ಯತೆ ನೀಡಿರುವುದು ಖುಷಿ ತರುತ್ತದೆ
ಕಿರಣ ಪಾಟೀಲ ಪ್ರವಾಸಿಗ

‘ವರ್ಷಾಂತ್ಯದಲ್ಲಿ ಪ್ರವಾಸಿಗರ ಭೇಟಿ ಹೆಚ್ಚಳ’

‘ಕಳೆದ ಕೆಲವು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕ್ಯಾಂಪ್ಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರು ಬೌದ್ಧ ಮಂದಿರ ವೀಕ್ಷಿಸಲು ಅವಕಾಶವಿದೆ. ಕ್ಯಾಂಪ್ ನಂ.3ರಲ್ಲಿ ಬಟ್ಟೆ ಅಲಂಕಾರಿಕ ವಸ್ತುಗಳ ಅಂಗಡಿಗಳಿವೆ. ನವಂಬರ್ ಮಧ್ಯಭಾಗದಿಂದ ಹಿಡಿದು ಜನವರಿ ಅಂತ್ಯದವರೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ’ ಎಂದು ಸ್ಥಳೀಯ ನಿವಾಸಿ ಸೋನಂ ಸಿರಿಂಗ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.