ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾವ ನೈತಿಕತೆ ಮೇಲೆ ಆರೋಪ ಮಾಡಿದ್ದೀರಿ?: ಆನಂದ ಪ್ರಶ್ನೆ

Published 1 ಮೇ 2024, 13:39 IST
Last Updated 1 ಮೇ 2024, 13:39 IST
ಅಕ್ಷರ ಗಾತ್ರ

ಶಿರಸಿ: ‘ಶಾಸಕ ಭೀಮಣ್ಣ ನಾಯ್ಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಯಾವ ನೈತಿಕತೆ ಮೇಲೆ ಈ ಆರೋಪ ಮಾಡಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಬೇಕು’ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಆನಂದ ಸಾಲೇರ್ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಪರೇಶ ಮೇಸ್ತಾ ಸಾವಿನ ಬಳಿಕ ನಡೆದ ಘಟನೆಗಳಲ್ಲಿ ಭೀಮಣ್ಣ ನಾಯ್ಕ ತಮಗೆ ಬೇಕಾದವರ ಕೇಸ್ ವಾಪಸ್ ತೆಗೆಸಿದ್ದಾರೆ. ಹೇಮಂತ ನಿಂಬಾಳ್ಕರ್ ಅವರನ್ನು ಬಳಸಿಕೊಂಡು ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದೀರಿ. ನೀವು ವಿಧಾನಸಭೆಯಲ್ಲಿ ಆರಿಸಿ ಬಂದಾಗ ಮಾರಿಕಾಂಬಾ ದೇವಾಲಯದ ಎದುರು ನಿಮ್ಮ ಕಾರ್ಯಕರ್ತರು ಪಾಕಿಸ್ತಾನ ಧ್ವಜ ಹಾರಿಸಿದ್ದಾರೆ. ಭಯೋತ್ಪಾದಕರು ಯಾರು ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಹರಿಹಾಯ್ದರು. 

ಕಾಂಗ್ರೆಸ್‌ನ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಸಿಗದ ವಿಷಯಕ್ಕೂ ಕಾಗೇರಿಯವರ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ನಿಮ್ಮದೇ ಪಕ್ಷದ ರವೀಂದ್ರನಾಥ ನಾಯ್ಕ ಅನೇಕ ವರ್ಷಗಳಿಂದ ಅತಿಕ್ರಮಣದಾರರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಸಮಸ್ಯೆಯ ವಾಸ್ತವತೆ ಏನು ಎಂಬುದು ಅವರಿಗೆ ಅರಿವಿದೆ ಎಂದರು.

ನಂದನ ಸಾಗರ ಮಾತನಾಡಿ,  ಪ್ರಬುದ್ಧ ರಾಜಕಾರಣಿ ಕಾಗೇರಿಯವರಿಗೆ ಭಯೋತ್ಪಾದಕರು ಎನ್ನುವ ಭೀಮಣ್ಣ, ಭಯೋತ್ಪಾದಕ ಶಬ್ದದ ಅರ್ಥ ಮೊದಲು ತಿಳಿದುಕೊಳ್ಳಲಿ. ಹೆಗಡೆಕಟ್ಟಾದಲ್ಲಿ ಬಕ್ರಿದ್ ವೇಳೆ ಹಿಂದುಗಳನ್ನು ಹೆದರಿಸಲು ನಡು ರಸ್ತೆಯಲ್ಲಿ ದನದ ತಲೆ ಇಟ್ಟಿದ್ದರೂ ಅವರ ಮೇಲೆ ಭೀಮಣ್ಣ ಕ್ರಮ ಕೈಗೊಂಡಿಲ್ಲ. ಯಾರು ಭಯೋತ್ಪಾದಕರು ಎಂದು ಅವರು ತಿಳಿಸಬೇಕು’ ಎಂದರು.

ಪ್ರಮುಖರಾದ ನಾಗರಾಜ ನಾಯ್ಕ, ಗಣಪತಿ ನಾಯ್ಕ, ರಿತೇಶ್ ಮಹಾಂತೇಶ ಹಾದಿಮನಿ, ವಿಜಯ ಶೆಟ್ಟಿ, ಆನಂದ ಗಾಂವಕರ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT