
‘ನಮ್ಮ ಕ್ಲಿನಿಕ್’ನಲ್ಲಿ ಕಾಯಂ ಆಗಿ ಕಾರ್ಯನಿರ್ವಹಿಸಲು ವೈದ್ಯರ ನೇಮಕಕ್ಕೆ ಪ್ರಯತ್ನ ಸಾಗಿದೆ. ಸರ್ಕಾರದ ಸೂಚನೆ ಆಧರಿಸಿ ಹಂತ ಹಂತವಾಗಿ ಸೌಲಭ್ಯಗಳನ್ನೂ ವಿಸ್ತರಿಸಲಾಗುವುದು.
ಡಾ.ನೀರಜ್ ಬಿ.ವಿ, ಜಿಲ್ಲಾ ಆರೋಗ್ಯಾಧಿಕಾರಿ
ಬಡರೋಗಿಗಳ ರಕ್ತದೊತ್ತಡ ಮಧುಮೇಹ ಜ್ವರ ಕೆಮ್ಮು ಸೇರಿದಂತೆ ಇತರ ರೋಗಗಳಿಗೆ ಉಚಿತ ಆರೋಗ್ಯ ಸೌಲಭ್ಯ ಸಿಗುತ್ತಿದೆ. ಕಟ್ಟಡದಲ್ಲಿ ಕಿಟಕಿ ಬಾಗಿಲುಗಳ ದುರಸ್ತಿ ಸ್ವಚ್ಛತೆಗೆ ಸ್ಥಳೀಯರ ಇನ್ನಷ್ಟು ಸಹಕಾರ ಸಿಕ್ಕರೆ ನಮ್ಮ ಕ್ಲಿನಿಕ್ ಮತ್ತಷ್ಟು ಆರೋಗ್ಯಯುತವಾಗಲಿದೆ.
ಅಶೋಕ ಚಲವಾದಿ, ಮುಂಡಗೋಡ ಪ.ಪಂ ಸದ
ಅಂಕೋಲಾದಲ್ಲಿನ ‘ನಮ್ಮ ಕ್ಲಿನಿಕ್’ಗೆ ಒಂದು ತಿಂಗಳು ವೈದ್ಯರು ಬಂದರೆ ಪುನಃ ಅವರು ಬರುವುದಿಲ್ಲ. ಈ ಭಾಗದ ಜನರಿಗೆ ಕ್ಲಿನಿಕ್ ಇರುವುದೇ ಮರೆತು ಹೋಗಿದೆ.
ವಿನಾಯಕ ನಾಯ್ಕ, ಪುರಲಕ್ಕಿಬೇಣದ ನಿವಾಸಿ
‘ನಮ್ಮ ಕ್ಲಿನಿಕ್’ ಸ್ಥಾಪನೆಯಿಂದಾಗಿ ಸಣ್ಣ ಸಣ್ಣ ಕಾಯಿಲೆಗೂ ಧಾರವಾಡ ಹುಬ್ಬಳ್ಳಿ ಬೆಳಗಾವಿ ಚಿಕಿತ್ಸೆಗೆ ತೆರಳುವುದು ತಪ್ಪಿದ್ದು ಸಮಯ ಮತ್ತು ಹಣ ಉಳಿತಾಯವಾಗುತ್ತಿದೆ
ಫರವಿಜ್ ಅಹ್ಮದ ಬಸರಿಕಟ್ಟಿ, ಹಳಿಯಾಳ ನಿವಾಸಿಹಳಿಯಾಳದ ಹುಲ್ಲಟ್ಟಿಯಲ್ಲಿರುವ ‘ನಮ್ಮ ಕ್ಲಿನಿಕ್’ನಲ್ಲಿ ಶುಶ್ರೂಷಕಿಯರು ಆರೋಗ್ಯ ತಪಾಸಣೆ ಮಾಡುತ್ತಿದ್ದರೆ ಮಹಿಳೆಯರು ಚಿಕಿತ್ಸೆ ಪಡೆಯಲು ಸರತಿಯಲ್ಲಿ ಕುಳಿತಿದ್ದರು
ಮುಂಡಗೋಡ ಪಟ್ಟಣದಲ್ಲಿನ ಗಾಂಧಿ ನಗರದಲ್ಲಿರುವ ಅಂಬೇಡ್ಕರ್ ಭವನದ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ‘ನಮ್ಮ ಕ್ಲಿನಿಕ್’
ಅಂಕೋಲಾ ಪಟ್ಟಣದ ಹೊರವಲಯದ ಪುರಲಕ್ಕಿಬೇಣದಲ್ಲಿನ ಸಮುದಾಯ ಭವನ ಕಟ್ಟಡದಲ್ಲಿ ‘ನಮ್ಮ ಕ್ಲಿನಿಕ್’ ನಡೆಯುತ್ತಿದೆ