ಕಾರವಾರ: ಕಾನೇರಿ ನದಿಯ ಪ್ರವಾಹದಿಂದ ಜೊಯಿಡಾ ತಾಲ್ಲೂಕಿನ ಕೆಲೋಲಿ ಗ್ರಾಮದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಪರದಾಡಿದ ಘಟನೆ ಗುರುವಾರ ನಡೆಯಿತು.
ಕೆಲೋಲಿ ಗ್ರಾಮದ ಮಾಬಳು ನಾರಾಯಣ ಗಾವಡಾ (46) ಎಂಬುವವರಿಗೆ ಹೃದಯಾಘಾತ ಉಂಟಾಗಿತ್ತು. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ನದಿ ನೀರಿನಲ್ಲಿ ಮುಳುಗಡೆಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲು ಅಡ್ಡಿಯಾಗಿತ್ತು. ವಾಟರ್ ರ್‍ಯಾಫ್ಟಿಂಗ್ ಬೋಟ್ ತಂದು ಅದರಲ್ಲಿ ಅವರನ್ನು ನದಿ ದಾಟಿಸಿ ಬಳಿಕ ಜೊಯಿಡಾದ ಆಸ್ಪತ್ರೆಗೆ ದಾಖಲಿಸಲಾಯಿತು.
ಕಾತೇಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕೆಲೋಲಿ ಗ್ರಾಮ ಕಾಳಿನದಿಯ ಉಪನದಿ ಕಾನೇರಿ ಉಕ್ಕಿ ಹರಿಯುತ್ತಿರುವ ಪರಿಣಾಮ ಕೆಲವು ದಿನಗಳಿಂದ ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.