ಕಾರವಾರ: ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ಕಮಾಂಡಿಂಗ್ ಆಗಿ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್ ಅವರು ಗುರುವಾರ ಅಧಿಕಾರ ವಹಿಸಿಕೊಂಡರು.

ರಕ್ಷಣಾ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು, ನೌಕಾದಳದಲ್ಲಿ ಮೂರು ದಶಕಗಳಿಂದ ಇದ್ದಾರೆ. ಅವರು ನವದೆಹಲಿಯಲ್ಲಿ ಮಿಲಿಟರಿ ವ್ಯವಹಾರಗಳ ಇಲಾಖೆಯ ನೌಕಾಪಡೆ ಮತ್ತು ರಕ್ಷಣಾ ಸಿಬ್ಬಂದಿ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

‘ಸೀ ಹ್ಯಾರಿಯರ್’ ವಿಮಾನದಲ್ಲಿ 2 ಸಾವಿರ ಗಂಟೆಗೂ ಹೆಚ್ಚು ಕಾಲ ಹಾರಾಟ ನಡೆಸಿದ ಅನುಭವವುಳ್ಳ ಅವರು, ವಿಕ್ರಮ್ ಯುದ್ಧವಿಮಾನದ ಕ್ಯಾಪ್ಟನ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಐಎನ್ಎಸ್ ವಿರಾಟ್, ಐಎನ್ಎಸ್ ಹಂಸ, ಐಎನ್ಎಸ್ ತಿಲ್ಲಾಂಚಾಂಗ್, ಗಸ್ತುನೌಕೆ ಐಎನ್ಎಸ್ ಶಾರದಾ ಮತ್ತು ಫ್ಲೀಟ್ ಟ್ಯಾಂಕರ್ ಐಎನ್ಎಸ್ ಶಕ್ತಿ ಸೇರಿ ಹಲವಾರು ಯುದ್ಧನೌಕೆ ಮುನ್ನಡೆಸಿದ್ದಾರೆ. ಕ್ಷಿಪಣಿ ವಿಧ್ವಂಸಕ ಐಎನ್ಎಸ್ ರಣವಿಜಯ್ನ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ’ ಎಂದು ನೌಕಾದಳ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.