ಕಾರವಾರ: ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಅಸ್ಮಿತಾ ಅಥ್ಲೆಟಿಕ್ ಲೀಗ್ನಲ್ಲಿ ಬಾಲಕಿಯರು ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಿದರು.

ಅಥ್ಲೆಟಿಕ್ಸ್ ಅಸೋಸಿಯೇಶನ್ನ ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧೆಡೆಯಿಂದ 60ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಓಟ, ಎತ್ತರ ಜಿಗಿತ, ಉದ್ದದ ಜಿಗಿತ, ಗುಂಡು ಎಸೆತ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ 14 ಮತ್ತು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಚಾಕಚಕ್ಯತೆ ಪ್ರದರ್ಶಿಸಿದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ ಮಾತನಾಡಿ, ‘ಕ್ರೀಡೆಗೆ ಪ್ರೋತ್ಸಾಹ ನೀಡುವುದು ಹೆಚ್ಚಿದಷ್ಟು ಕ್ರೀಡಾ ಸಾಧಕರು ಮುನ್ನೆಲೆಗ ಬರಲು ಸಾಧ್ಯವಾಗುತ್ತದೆ’ ಎಂದರು.

ಡಿಡಿಪಿಐ ಲತಾ ನಾಯಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯ್ಕ, ಅಥ್ಲೆಟಿಕ್ಸ್ ಅಸೋಸಿಯೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಸದಾನಂದ ನಾಯ್ಕ, ಕಾರ್ಯದರ್ಶಿ ಕೆ.ಆರ್.ನಾಯಕ, ಪದಾಧಿಕಾರಿಗಳಾದ ಎಸ್.ಜಿ.ಭಟ್, ಮಹಾಂತೇಶ ಓಶಿಮಠ, ಜಿ.ಪಿ.ನಾಯಕ, ತರಬೇತುದಾರ ಪ್ರಕಾಶ ರೇವಣಕರ, ಮಹಾದೇವ ರಾಣೆ, ಇತರರು ಪಾಲ್ಗೊಂಡಿದ್ದರು.

ಕ್ರೀಡಾಕೂಟದ ವಿಜೇತರು:

16 ವರ್ಷದೊಳಗಿನ ಬಾಲಕಿಯರ ವಿಭಾಗ: 60 ಮೀ ಓಟ–ಸಾನಿಕಾ ನಾಯ್ಕ, ಪ್ರಿಯಾ ಪವಾರ್, ಸೌಜನ್ಯ ಹರಿಕಂತ್ರ. 600 ಮೀ ಓಟ–ಕಾಂಚನಾ ಕಾವರೆಕರ, ನಮೃತಾ ದೇಶಭಂಡಾರಿ, ವೈಭವಿ ನಾಯ್ಕ. ಎತ್ತರ ಜಿಗಿತ– ವ್ರಿತಿಕಾ ನಾಯ್ಕ, ಸೆಹಾ ಬೆರಾ, ಉಮಾ ಪಾಟೀಲ್. ಉದ್ದ ಜಿಗಿತ–ಪ್ರಿಯಾ ಪವಾರ, ಸಾನಿಕಾ ನಾಯ್ಕ, ಸಾಕ್ಷಿ ಕೆ.ಬಿ. ಗುಂಡು ಎಸೆತ– ವೆಲೆನಿಕಾ ಎಸ್.ಎ, ಶ್ರದ್ದಾ ಜಿ.ಎಂ, ರಕ್ಷಿತಾ ಗುನಗಿ.

14 ವರ್ಷದೊಳಗಿನ ಬಾಲಿಕಯರ ವಿಭಾಗ: ಟ್ರಯಥ್ಲಾನ್ ಎ ವಿಭಾಗ–ವೈಷ್ಣವಿ ಗಾಡೆಕರ, ದಿವ್ಯಾ ಗೌಡಾ, ಅನನ್ಯಾ ಮುಕ್ರಿ. ಟ್ರಯಥ್ಲಾನ್ ಬಿ ವಿಭಾಗ: ನಯನಾ ವಿ., ಭೂಮಿಕಾ ಡಿ.ಎಂ, ಪ್ರಾರ್ಥಿ ಪರಮಾರ. ಟ್ರಯಥ್ಲಾನ್ ಸಿ ವಿಭಾಗ– ಪೂರ್ವಿ ಹರಿಕಂತ್ರ, ಸುಪ್ರಿತಾ ಚೆನ್ನಯ್ಯಾ, ಕಮಲಾ ಎಂ.ಟಿ. ಕಿರು ಜಾವೆಲಿನ್– ಪ್ರೇರಣಾ ಹೆಗಡೆ, ವೈಷ್ಣವಿ ಗಾಡೆಕರ, ಪೃಥ್ವಿ ನಾಯ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.