ಗೇರುಸೊಪ್ಪ (ಉತ್ತರ ಕನ್ನಡ): ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯ ಕೇಳಿದರೂ ಕೊಡದ ಸರ್ಕಾರ ಉತ್ತರ ಕನ್ನಡದ ಸೂಕ್ಷ್ಮ ಪರಿಸರದ ಮೇಲೆ ಪ್ರಹಾರ ಮಾಡುವ ಯೋಜನೆಯನ್ನು ಯಾಕೆ ಹೇರುತ್ತಿದೆ’ ಎಂಬ ಪ್ರಶ್ನೆ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪರಿಸರ ಸಾರ್ವಜನಿಕ ಅಹಾವಲು ಸಭೆಯಲ್ಲಿ ವ್ಯಕ್ತವಾಯಿತು.

ಇಲ್ಲಿನ ಗುತ್ತಿ ಕನ್ನಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಯೋಜನೆ ವಿರುದ್ಧ 10 ಸಾವಿರ ಅಹವಾಲುಗಳು ಸಲ್ಲಿಕೆಯಾದವು. ಯಾರೂ ಸಹ ಯೋಜನೆಯ ಪರ ಧ್ವನಿ ಎತ್ತಲಿಲ್ಲ.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಕ್ಷಿಪ್ತವಾಗಿ ಸಲಹೆ ನೀಡುವಂತೆ ಸೂಚಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು. ‘ಜನರ ಅಹವಾಲನ್ನು ತಾಳ್ಮೆಯಿಂದ ಕೇಳುವ ವ್ಯವಧಾನ ಇರಬೇಕು. ಸಭೆ ಕರೆದು, ಸಂಕ್ಷಿಪ್ತವಾಗಿ ಮಾತನಾಡಿ ಎನ್ನುವುದು ಸರಿಯಲ್ಲ’ ಎಂದು ಬಂಗಾರಮಕ್ಕಿಯ ಮಾರುತಿ ಗುರೂಜಿ ಅಸಮಾಧಾನ ವ್ಯಕ್ತಪಡಿಸಿದರು.

‘ಯೋಜನೆಯ ವಿಸ್ತೃತ ಯೋಜನಾ ವರದಿ ಬಹಿರಂಗಪಡಿಸಲಾಗಿಲ್ಲ. ಅಹವಾಲು ಸಭೆಗೂ ಮುನ್ನವೇ ಟೆಂಡರ್ ಪ್ರಕ್ರಿಯೆ ನಡೆದು, ಶಿವಮೊಗ್ಗ ಭಾಗದಲ್ಲಿ ಯೋಜನೆಯ ಕೆಲಸಗಳು ಪ್ರಾರಂಭವಾದ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಸ್ಪಷ್ಟಪಡಿಸಿ’ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಒತ್ತಾಯಿಸಿದರು.

‘ಪರಿಸರ ಅನುಮತಿ ಪತ್ರ ಸಿಗದೆ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅಹವಾಲು ಸಭೆ ನಡೆಯುತ್ತಿದೆ’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಪರಿಸರ ಅಧಿಕಾರಿ ಬಿ.ಕೆ.ಸಂತೋಷ್ ಸ್ಪಷ್ಟನೆ ನೀಡಿದರು.

‘ಪಶ್ಚಿಮ ಘಟ್ಟದಲ್ಲಿ ಸುರಂಗ ಕೊರೆದರೆ ವನ್ಯಜೀವಿಗಳು ನೂರಾರು ಕಿ.ಮೀ ದೂರ ವಲಸೆ ಹೋಗಬಹುದು. ಯೋಜನೆ ಜಾರಿಗೆ ಮುಂದಾದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ಕೆಪಿಸಿ ಮುಖ್ಯ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ ವಿ.ಎಂ. ಯೋಜನೆ ಕುರಿತ ಮಾಹಿತಿ ನೀಡಿದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಕೀರ್ತಿಕುಮಾರ್ ಇದ್ದರು.

ಬೆಂಗಳೂರಿಗೆ ನೀರು ಸಾಗಿಸುವ ಯೋಜನೆ

‘ಗೇರುಸೊಪ್ಪದಿಂದ ತಳಕಳಲೆ ಜಲಾಶಯಕ್ಕೆ ನೀರು ಸಾಗಿಸಿ ವಿದ್ಯುತ್ ಉತ್ಪಾದಿಸುವುದು ತೋರಿಕೆಗೆ ಮಾತ್ರ. ಅಲ್ಲಿಂದ ಭವಿಷ್ಯದಲ್ಲಿ ಬೆಂಗಳೂರಿಗೆ ನೀರು ಸಾಗಿಸುವ ಯೋಜನೆ ಇದಾಗಲಿದೆ. ಶರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದರೆ ಹೊನ್ನಾವರ ಭಾಗದಲ್ಲಿನ 1.60 ಲಕ್ಷ ಎಕರೆಯಷ್ಟು ಕೃಷಿಭೂಮಿ ನಾಶವಾಗಲಿದೆ’ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.