ಶಿರಸಿ: ನರೇಗಾ ಯೋಜನೆಯಡಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಹಾಗೂ ದುಡಿಯುವ ಮಹಿಳೆಯರ ಮಕ್ಕಳಿಗೆ ಸುರಕ್ಷತೆಗಾಗಿ ತಾಲ್ಲೂಕಿನಲ್ಲಿ ಆರಂಭಿಸಿದ್ದ ‘ಕೂಸಿನ ಮನೆ’ ಯೋಜನೆ ಸದ್ಬಳಕೆ ಆಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ 7 ತಿಂಗಳಿಂದ 3 ವರ್ಷದೊಳಗಿನ ಮಗುವನ್ನು ಲಾಲನೆ-ಪಾಲನೆಗೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ ಯೋಜನೆ ಜಾರಿಗೊಳಿಸಿತ್ತು.

ತಾಲ್ಲೂಕಿನಲ್ಲಿ ಹುತ್ಗಾರ, ಬಿಸಲಕೊಪ್ಪ, ಬನವಾಸಿ, ಬಂಕನಾಳ ಹಾಗೂ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಸಿನ ಮನೆ ಪ್ರಾರಂಭ ಮಾಡಲಾಗಿತ್ತು. ಶಿಶುಗಳ ಆರೈಕೆಯನ್ನು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೂ ಮಾಡಬೇಕಿದೆ. ಆರಂಭದಲ್ಲಿ 22 ಮಕ್ಕಳು ನೋಂದಣಿ ಆಗಿದ್ದರು. ಆದರೆ ಸದ್ಯ ಬಹುತೇಕ ಕೇಂದ್ರಗಳಿಗೆ ಮಕ್ಕಳ ಕೊರತೆ ಎದುರಾಗಿದೆ. ಹೀಗಾಗಿ ಬಹುತೇಕ ಕಡೆ ಕೇಂದ್ರಕ್ಕೆ ಬೀಗ ಬಿದ್ದಿದೆ.

‘ಮಳೆಗಾಲದ ಕಾರಣಕ್ಕೆ ನರೇಗಾ ಕಾಮಗಾರಿ ನಡೆಯುತ್ತಿಲ್ಲ. ಹೀಗಾಗಿ ಮಹಿಳೆಯರು ತಮ್ಮ ಮಕ್ಕಳನ್ನು ಕೇಂದ್ರಕ್ಕೆ ಕರೆತರುತ್ತಿಲ್ಲ. ಆರೈಕೆದಾರರಿಗೆ ನರೇಗಾ ಯೋಜನೆಯಿಂದಲೇ ಅನುದಾನ ಬಿಡುಗಡೆ ಆಗಬೇಕು. ಸದ್ಯ ನರೇಗಾ ಕಾಮಗಾರಿ ಇರದ ಕಾರಣ ಅನುದಾನ ಬಿಡುಗಡೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಹೀಗಾಗಿ ಆರೈಕೆದಾರರೂ ಕೂಸಿನ ಮನೆ ಕಡೆ ಬರಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಆರೈಕೆದಾರರೊಬ್ಬರು ಹೇಳಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿ 4 ರಿಂದ 6 ಕಿಲೋ ಮೀಟರ್ ಇದೆ. ಕಾರ್ಮಿಕ ಮಹಿಳೆ ತನ್ನ ಮಗುವನ್ನು ಕೂಸಿನ ಕೇಂದ್ರದಲ್ಲಿ ಬಿಡಲು ಎರಡರಿಂದ ಮೂರು ಕಿ.ಮೀ ಬರಬೇಕು. ಅಲ್ಲಿಂದ ಕೂಲಿಗೆ ಹೋಗಬೇಕು. ಕೆಲಸದ ಮಧ್ಯೆ ಹಾಲುಣಿಸಲು ಮತ್ತೆ ಕೇಂದ್ರಕ್ಕೆ ಬರಬೇಕು. ಇದರಿಂದಾಗಿ ಮಹಿಳಾ ಕಾರ್ಮಿಕರ ಮೇಲೆ ಇನ್ನಿಲ್ಲದ ಒತ್ತಡ ನಿರ್ಮಾಣವಾಗುತ್ತದೆ. ಹಾಗಾಗಿ ಕೇಂದ್ರದತ್ತ ಹೋಗುತ್ತಿಲ್ಲ’ ಎಂದು ಕೂಲಿ ಮಹಿಳೆ ಯಶೋಧಾ ನಾಯ್ಕ ಹೇಳಿದರು.

‘ಕೂಸಿನ ಮನೆಗೆ ಅಡುಗೆ ಮಾಡುವ ಸಲಕರಣೆ, ಶೌಚಾಲಯಗಳ ನಿರ್ಮಾಣ ಸೇರಿ ₹3 ಲಕ್ಷಕ್ಕೂ ಹೆಚ್ಚಿನ ವೆಚ್ಚವಾಗಿದೆ. ಬಹುತೇಕ ಕಡೆ ಮಕ್ಕಳು ಬರುತ್ತಿಲ್ಲ. ಕೆಲವೆಡೆ ಆರೈಕೆದಾರರು ಇಲ್ಲ. ಹೀಗಾದರೆ ಗ್ರಾಮ ಪಂಚಾಯಿತಿ ವತಿಯಿಂದ ಖರ್ಚು ಮಾಡಿದ ಹಣ ವ್ಯರ್ಥವಾದಂತಾಗುತ್ತದೆ. ಆರೈಕೆದಾರರಿಗೆ ಆರ್ಥಿಕ ಭದ್ರತೆ ನೀಡಬೇಕು. ಮಕ್ಕಳನ್ನು ಕೇಂದ್ರಕ್ಕೆ ಕರೆತರಲು ಜಾಗೃತಿ ಮೂಡಿಸಬೇಕು’ ಎನ್ನುತ್ತಾರೆ ಹುತ್ಗಾರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ನಾಯ್ಕ.

ಅತಿಯಾದ ಮಳೆ ಕಾರಣ ಮಕ್ಕಳ ಸಂಖ್ಯೆ ಕಡಿಮೆಯಿದೆ. ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು
ರಾಮಮೂರ್ತಿ ನರೇಗಾ ಯೋಜನೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.