ಮುಂಡಗೋಡ: ‘ಟಿಬೆಟ್ನ ಪರಂಪರೆಯನ್ನು ಚೀನಾ ಹಾಳು ಮಾಡಲು ಪ್ರಯತ್ನಿಸಿತು. ಆದರೆ, ಭಾರತದಲ್ಲಿ ಬೌದ್ಧ ಅಧ್ಯಯನವನ್ನು ನಿರಂತರವಾಗಿ ಮಾಡುತ್ತ, ಟಿಬೆಟ್ ಪರಂಪರೆಯನ್ನು ಜೀವಂತವಾಗಿಡಲು ಸಾಧ್ಯವಾಗಿದೆ’ ಎಂದು ಟಿಬೆಟಿಯನ್ ಧಾರ್ಮಿಕ ನಾಯಕ 14ನೇ ದಲೈ ಲಾಮಾ ಹೇಳಿದರು.

ಇಲ್ಲಿನ ಟಿಬೆಟ್ ಕ್ಯಾಂಪ್ಗೆ ಶುಕ್ರವಾರ ಆಗಮಿಸಿ ಬೌದ್ಧ ಮಂದಿರದ ಸಭಾಂಗಣದಲ್ಲಿ ಬಿಕ್ಕುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಳಂದಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು, ಬಿಕ್ಕುಗಳು ನಿರಂತರ ಅಧ್ಯಯನ ಮಾಡಬೇಕು’ ಎಂದರು.

‘ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಬೌದ್ಧ ಅಧ್ಯಯನ ಅವಶ್ಯ. ಬೌದ್ಧ ತತ್ವ ಮತ್ತು ವಿಜ್ಞಾನ ನಡುವೆ ಸಂಬಂಧವಿದೆ. ಬೌದ್ಧ ಅಧ್ಯಯನದಲ್ಲಿ ಹಲವು ವಿಜ್ಞಾನಿಗಳು ಆಸಕ್ತಿ ತೋರುತ್ತಿರುವುದು ಇದಕ್ಕೆ ಸಾಕ್ಷಿ. ನಾನು 130 ವರ್ಷಗಳವರೆಗೆ ಬದುಕುತ್ತೇನೆ’ ಎಂದರು.

ಇದಕ್ಕೂ ಮುನ್ನ ಆರು ವರ್ಷಗಳ ಬಳಿಕ ಭೇಟಿ ನೀಡಿದ ದಲೈ ಲಾಮಾ ಅವರನ್ನು ಬೌದ್ಧ ಮುಖಂಡರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಕೈಯಲ್ಲಿ ಬಿಳಿ ರುಮಾಲು (ಖತಾ) ಹಿಡಿದು ಬಿಕ್ಕುಗಳು ನಮಸ್ಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.