ಶಕ್ತಿನಗರ: ರಾಯಚೂರು ತಾಲ್ಲೂಕಿನ ಗಂಜಳ್ಳಿ ಗ್ರಾಮದ ಕೆರೆಯಲ್ಲಿ ಶನಿವಾರ ಮೊಸಳೆ ಪ್ರತ್ಯೇಕ್ಷವಾಗಿದ್ದು ಗ್ರಾಮಸ್ಥರು ಆತಂಕಪಡುವಂತಾಗಿದೆ.
ಗ್ರಾಮದ ಹುಸೇನಪ್ಪ ದರ್ಗಾದ ಬಳಿ ಇರುವ ಚಿಕ್ಕ ಕೆರೆಯಲ್ಲಿ ಮೊಸಳೆ ಇರುವುದನ್ನು ನೋಡಿ ಗ್ರಾಮಸ್ಥರು ಚಿತ್ರ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೀನುಗಾರರ ಸಹಾಯದಿಂದ ಮೊಸಳೆಯನ್ನು ಸೆರೆ ಹಿಡಿದು ಕೃಷ್ಣಾ ನದಿಗೆ ಬಿಟ್ಟಿದ್ದಾರೆ.
ಕೃಷ್ಣಾನದಿ ಪ್ರವಾಹದಲ್ಲಿ ಬಂದ ಮೊಸಳೆ ಕೆರೆಗೆ ಸೇರಿರಬಹುದು ಎಂದು ಶಂಕಿಸಲಾಗಿದೆ.
ಶಕ್ತಿನಗರ ಬಳಿಯ ಗಂಜಳ್ಳಿ ಗ್ರಾಮದಲ್ಲಿ ಶನಿವಾರ ಮೊಸಳೆ ಪ್ರತ್ಯೇಕ್ಷ