ಹೊಸಪೇಟೆ (ವಿಜಯನಗರ): ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡು ವರ್ಷವನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಪಂಚಗ್ಯಾರಂಟಿ ಜಾರಿಗೆ ತಂದ ಖುಷಿ ಹಂಚಿಕೊಳ್ಳುವುದರ ಜತೆಗೆ ಬಡಜನರಿಗೆ 1.11 ಲಕ್ಷ ಹಕ್ಕುಪತ್ರ ಸಮರ್ಪಿಸುವ ಸಮರ್ಪಣಾ ಸಂಕಲ್ಪ ಸಮಾವೇಶ ಮಂಗಳವಾರ ಇಲ್ಲಿನ ಪುನೀತ್ ರಾಜ್ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

‘ಬಡವರಿಗೆ ನೆರವಾದ ಸಂತೃಪ್ತ ಭಾವದೊಂದಿಗೆ, ನುಡಿದಂತೆ ನಡೆದಿದ್ದೇವೆ ಎಂಬ ತೃಪ್ತಿಯೊಂದಿಗೆ ನಾವು ಇಲ್ಲಿ ಸೇರುತ್ತಿದ್ದೇವೆ, ನಾವಿಲ್ಲಿ ಸಂಭ್ರಮ ಆಚರಿಸುತ್ತಿಲ್ಲ, ಬದಲಿಗೆ ಸಮಾಜಕ್ಕೆ ಋಣ ತೀರಿಸಿದ ಖುಷಿಯಲ್ಲಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ದೇಶದ ಬೇರೆ ಯಾವ ರಾಜ್ಯದಲ್ಲೂ ಗ್ಯಾರಂಟಿಗಳ ಜಾರಿ ಆಗಲಿಲ್ಲ, ರಾಜ್ಯದಲ್ಲಿ ಅದು ಆಗಿದೆ, ಇದರ ಜತೆಗೆ ಹಾಡಿ, ಹಟ್ಟಿ, ತಾಂಡಾ, ಕೇರಿಗಳಲ್ಲಿ ವಾಸವಿದ್ದ ಲಕ್ಷಾಂತರ ಕುಟುಂಬಗಳಿಗೆ ಭೂ ದಾಖಲೆಯೇ ಇರಲಿಲ್ಲ. ಅಂತಹ ಕುಟುಂಬಗಳನ್ನು ಹುಡುಕಿ, ತಹಶೀಲ್ದಾರ್ ಅವರಿಂದಲೇ ಉಪನೋಂದಣಿ ಕಚೇರಿಗಳಲ್ಲಿ ನೋಂದಣಿ ಮಾಡಿಸಿ ಹಕ್ಕುಪತ್ರ ನೀಡುವ ಮಹತ್ವದ ಕೆಲಸವನ್ನು ಸರ್ಕಾರ ಮಾಡಿದೆ. ಇದು ಬಡವರ, ಪರಿಶಿಷ್ಟ ಜಾತಿ, ಪಂಗಡದವರ, ಹಿಂದುಳಿದವರ ನೂರಾರು ವರ್ಷಗಳ ಕನನನ್ನು ನನಸು ಮಾಡಿದ ಕ್ಷಣ. ಅದಕ್ಕಾಗಿಯೇ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಬಿಜೆಪಿಯವರು ₹20 ಕೋಟಿ ಖರ್ಚು ಮಾಡಿ, ಪ್ರಧಾನಿಯವರನ್ನು ಕರೆಸಿ ಹಕ್ಕುಪತ್ರ ನೀಡುವ ಘೋಷಣೆ ಮಾಡಿದರೇ ಹೊರತು ಅವರಿಗೆ ಅದನ್ನು ಅನುಷ್ಠಾನಕ್ಕೆ ತರುವುದು ಸಾಧ್ಯವಾಗಲಿಲ್ಲ. ಆದರೆ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಪ್ರಯತ್ನದಿಂದಾಗಿ ಲಕ್ಷಾಂತರ ಕುಟುಂಬಗಳಿಗೆ ಹಕ್ಕುಪತ್ರದ ಜತೆಗೆ ಸರ್ಕಾರದ ಎಲ್ಲಾ ಸೌಲಭ್ಯಗಳೂ ಸಿಗುವಂತಾಗಿದೆ. ಕೆಲವು ಖಾಸಗಿ ಜಮೀನುಗಳಲ್ಲಿ ನೆಲೆಸಿದ್ದವರ ಜಮೀನುಗಳನ್ನೂ ಸರ್ಕಾರ ಸುಪರ್ದಿಗೆ ತೆಗೆದುಕೊಂಡು ಹಕ್ಕುಪತ್ರ ನೀಡಿದೆ, ಕಂದಾಯ ಗ್ರಾಮಗಳನ್ನು ರೂಪಿಸಿದೆ. ಸಮಾವೇಶದಲ್ಲಿ ಇದೆಲ್ಲವನ್ನೂ ರಾಜ್ಯದ ಜನತೆಗೆ ತಿಳಿಸಲಾಗುವುದು’ ಎಂದು ಡಿಸಿಎಂ ಹೇಳಿದರು.

‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಮಾತ್ರ ರಾಜ್ಯ ದೇಶಕ್ಕೆ ಮಾದರಿಯಾದುದಲ್ಲ, ಹಕ್ಕುಪತ್ರ ನೀಡಿಕೆ ವಿಚಾರದಲ್ಲೂ ಮಾದರಿಯಾಗಿದೆ. ನಮ್ಮನ್ನು ಅನುಕರಿಸಿ ಇತರ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಗ್ಯಾರಂಟಿ ಯೋಜನೆ ಜಾರಿಗೆ ತರುವುದು ಸಾಧ್ಯವಾಗುತ್ತಿಲ್ಲ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ನಮ್ಮದು ಬದುಕಿನೊಂದಿಗೆ ಶ್ರಮಿಸುವ ಸರ್ಕಾರವೇ ಹೊರತು ಭಾವನೆಗಳೊಂದಿಗೆ ಆಟವಾಡುವ ಸರ್ಕಾರವಲ್ಲ’ ಎಂದ ಅವರು, ದೇಶಕ್ಕೆ ಕಾಂಗ್ರೆಸ್ ಸರ್ಕಾರ ನೀಡಿದ ಹಲವು ಮಹತ್ವದ, ಬಡವರ ಪರ ಯೋಜನೆಗಳನ್ನು ಉಲ್ಲೇಖಿಸಿದರು.

ಭಾರಿ ಮಳೆ–ಕುಗ್ಗದ ಉತ್ಸಾಹ:

ಭಾನುವಾರ ರಾತ್ರಿ ನಗರದಲ್ಲಿ ಒಂದು ಗಂಟೆ ಬಿರುಸಿನ ಮಳೆ ಸುರಿದಿತ್ತು. ಕೆಲವೆಡೆ ಕಟೌಟ್ಗಳು, ಬ್ಯಾನರ್ಗಳು, ಬಂಟಿಂಗ್ಸ್ಗಳು ನೆಲಕ್ಕುರುಳಿದ್ದವು. ಹೊಸದಾಗಿ ನಿರ್ಮಾಣವಾಗಿರುವ ಇಂದಿರಾ ಗಾಂಧಿ ಕಟ್ಟೆ, ಪ್ರತಿಮೆಯ ಸಮೀಪದಲ್ಲೇ ವಿದ್ಯುತ್ ಕಂಬ ಮುರಿದು ಬಿದ್ದಿತ್ತು. ಆದರೆ ಸೋಮವಾರ ಕಾರ್ಯಕರ್ತರಲ್ಲಿ, ಅಧಿಕಾರಿಗಳಲ್ಲಿ ಉತ್ಸಾಹ ಕುಗ್ಗಿದ ಭಾವನೆ ಕಾಣಿಸಲಿಲ್ಲ.

ಬೈಕ್ ರ್ಯಾಲಿ:

ಸಮರ್ಪಣಾ ಸಂಕಲ್ಪ ಸಮಾವೇಶದ ಕುರಿತು ನಗರದ ಜನತೆಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಿತು. ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಇದಕ್ಕೆ ಚಾಲನೆ ನೀಡಿ ಸ್ವತಃ ದ್ವಿಚಕ್ರ ವಾಹನ ಚಲಾಯಿಸಿದರು. ಶಾಸಕ ಎಚ್.ಆರ್.ಗವಿಯಪ್ಪ ಸಹಿತ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.