ಸಿರುಗುಪ್ಪ (ಬಳ್ಳಾರಿ ಜಿಲ್ಲೆ): ಗಡಿಭಾಗದ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ದೇವರಗಟ್ಟ (ದೇವರಗಟ್ಟು) ಮಾಳ ಮಲ್ಲೇಶ್ವರಸ್ವಾಮಿ ದೇವಸ್ಥಾನ ಬಳಿ ಬಡಿಗೆ ಬಡಿದಾಟದಲ್ಲಿ ಗಾಯ
ಗೊಂಡವರ ಪೈಕಿ ಐವರನ್ನು ಹೊರತುಪಡಿಸಿ ಉಳಿದವರು ಚೇತರಿಸಿಕೊಂಡಿದ್ದಾರೆ.

ತೀವ್ರ ಗಾಯಗೊಂಡಿರುವ ಐವರು ಕರ್ನೂಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಡಿಗೆ ಬಡಿದಾಟದ ವೇಳೆ ಒಬ್ಬ ವ್ಯಕ್ತಿ ಹೃದಯಾಘಾತದಿಂದ ಮ್ಯತಪಟ್ಟಿದ್ದಾರೆ, ಇನ್ನೊಬ್ಬ ವ್ಯಕ್ತಿಯ ಸಾವಿನ ಕುರಿತು ಸಿ.ಸಿ.ಟಿ.ವಿ.ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನೂಲು ಎಸ್ಪಿ ವಿಕ್ರಾಂತ್ ಪಾಟೀಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುರುವಾರ ರಾತ್ರಿ ದೇವರ ಮೂರ್ತಿಗಾಗಿ ನಡೆದ ಬಡಿಗೆ ಕಾಳಗದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಆಲೂರು, ಆದೋನಿ ಹಾಗೂ ಕರ್ನೂಲು ಆಸ್ಪತ್ರೆಗಳಿಗೆ ಗಾಯಾಳುಗಳನ್ನು ದಾಖಲಿಸಲಾಗಿತ್ತು.

ಮುಂದುವರಿದ ಧಾರ್ಮಿಕ ಕ್ರಿಯೆ: ಶನಿವಾರ ದೇವಸ್ಥಾನದಲ್ಲಿ ಮಾಳ ಮಲ್ಲೇಶ್ವರ ರಥೋತ್ಸವ ಜರುಗಿತು. ಭಾನುವಾರ ಗೊರವಯ್ಯನವರ ಆಟ, ಸಂಜೆ ವಸಂತೋತ್ಸವ ಮತ್ತು ಕಂಕಣ ವಿಸರ್ಜನೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.