ಹೊಸಪೇಟೆ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನ ಆಹಾರ ಧಾನ್ಯ ಖರೀದಿ ಸಂಬಂಧ ವೇಳಾಪಟ್ಟಿ, ಖರೀದಿ ಪ್ರಮಾಣ ಮತ್ತು ದರ ನಿಗದಿಪಡಿಸಿ ಜಿಲ್ಲಾ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಆದೇಶ ಹೊರಡಿಸಿದ್ದಾರೆ.

ಮುಂಗಾರು ಋತುವಿನಲ್ಲಿ ಭತ್ತ, ರಾಗಿ ಕಿರು ಧಾನ್ಯ (ಸಾಮೆ ಮತ್ತು ನವಣೆ), ಬಿಳಿಜೋಳಗಳಿಗೆ (ಮುಂಗಾರು ಮತ್ತು ಹಿಂಗಾರು) ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ವಯ ಎಫ್ಎಕ್ಯು ಗುಣಮಟ್ಟದ ಆಹಾರ ಧಾನ್ಯವನ್ನು ರೈತರಿಂದ ನೇರವಾಗಿ ಖರೀದಿಸಲು ದರಗಳನ್ನು ನಿಗದಿಪಡಿಸಲಾಗಿದೆ.

ಭತ್ತ (ಸಾಮಾನ್ಯ ಗ್ರೇಡ್-ಎ) ಖರೀದಿಯನ್ನು ಫೆ.2ರವರೆಗೆ ಮಾಡಬಹುದು. ಭತ್ತವನ್ನು ಪ್ರತಿ ರೈತರಿಂದ ಎಕರೆಗೆ 25 ಕ್ವಿಂಟಲ್ನಂತೆ ಪ್ರತಿ ಕ್ವಿಂಟಲ್ಗೆ ₹2,369 ಮೊತ್ತ ಮತ್ತು ಗರಿಷ್ಠ 50 ಕ್ವಿಂಟಲ್ನಂತೆ ಪ್ರತಿ ಕ್ವಿಂಟಲ್ಗೆ ₹2,389 ದರದಲ್ಲಿ ಖರೀದಿಸಬೇಕು.

ರಾಗಿ, ಕಿರು ಸಿರಿಧಾನ್ಯಗಳ ಸಾಮೆ ಮತ್ತು ನವಣೆ ಖರೀದಿಯನ್ನು ಮಾರ್ಚ್ 31ರವರೆಗೆ ಪ್ರತಿ ರೈತರಿಂದ ಎಕರೆಗೆ 10 ಕ್ವಿಂಟಲ್ನಂತೆ ಗರಿಷ್ಠ 50 ಕ್ವಿಂಟಲ್ಗೆ ₹4,886 ದರದಲ್ಲಿ ಖರೀದಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಬಿಳಿಜೋಳ ಖರೀದಿ ಅವಧಿ ಡಿ.1ರಿಂದ ಜ.31ರವರೆಗೆ ಮುಂಗಾರು ಮತ್ತು ಫೆ.1ರಿಂದ ಏ.4ರವರೆಗೆ ಹಿಂಗಾರು ಇರುತ್ತದೆ. ನ.15ರಿಂದ ಮಾರ್ಚ್ 31ರವರೆಗೆ ನೋಂದಣಿ ಅವಧಿಯಾಗಿದೆ. ಬಿಳಿಜೋಳವನ್ನು ಪ್ರತಿ ರೈತರಿಂದ ಎಕರೆಗೆ 15 ಕ್ವಿಂಟಲ್ನಂತೆ ಪ್ರತಿ ಕ್ವಿಂಟಲ್ಗೆ ₹3,699 ಮೊತ್ತ ಮತ್ತು ಗರಿಷ್ಠ 50 ಕ್ವಿಂಟಲ್ನಂತೆ ಪ್ರತಿ ಕ್ವಿಂಟಲ್ಗೆ ₹3,749 ದರದಲ್ಲಿ ಬಿಳಿಜೋಳ ಖರೀದಿಸಬೇಕು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಹೊಸಪೇಟೆ ತಾಲ್ಲೂಕಿನವರು 74831 84576, ಹಗರಿಬೊಮ್ಮನಹಳ್ಳಿ ತಾಲ್ಲೂಕಿನವರು 99002 36100, ಕೂಡ್ಲಿಗಿ ತಾಲ್ಲೂಕಿನವರು 96320 32224, 97409 42059, ಕೊಟ್ಟೂರು ತಾಲ್ಲೂಕಿನವರು 78296 26177 ಮತ್ತು 63631 44145, ಹರಪನಹಳ್ಳಿ ತಾಲ್ಲೂಕಿನವರು 77603 10203 ಮತ್ತು ಅರಸೀಕೆರೆಯಲ್ಲಿ 77690 014043 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.