ಹೊಸಪೇಟೆ (ವಿಜಯನಗರ): ನಗರದಲ್ಲಿ ನಿರ್ಮಾಣವಾಗುತ್ತಿರುವ 200 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ನವೆಂಬರ್ಗೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದ್ದರೂ, ವೈದ್ಯಕೀಯ ಕಾಲೇಜು ಸ್ಥಾಪನೆ ಇನ್ನೂ ಕೆಲವು ವರ್ಷ ಸಾಧ್ಯವಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.

ಕೆಕೆಆರ್ಡಿಬಿ ಅನುದಾನದಡಿಯಲ್ಲಿ ಆಸ್ಪತ್ರೆಗೆ ಸಂಪರ್ಕ ಕಲ್ಲಿಸುವ ರಸ್ತೆಗಳನ್ನು ₹16.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಶಾಸಕ ಎಚ್.ಆರ್.ಗವಿಯಪ್ಪ ಅವರು ಬುಧವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಈ ಸುಳಿವು ನೀಡಿದರು.

‘ಸದ್ಯ 200 ಹಾಸಿಗೆಯ ಆಸ್ಪತ್ರೆ ಆರಂಭಿಸಿ, ಅದಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ವಿವಿಧ ಅನುದಾನಗಳಿಂದ ಪಡೆದುಕೊಳ್ಳಿ, ವೈದ್ಯಕೀಯ ವಿಚಾರ ಆ ಮೇಲಿನದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅದರಂತೆ ಕೆಕೆಆರ್ಡಿಬಿ ಮ್ಯಾಕ್ರೊ ಯೋಜನೆಯಡಿಯಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಂದಿದೆ. ಅದರಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ’ ಎಂದು ಶಾಸಕರು ಹೇಳಿದರು.

‘ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕನಿಷ್ಠ 350 ಹಾಸಿಗೆಗಳ ಆಸ್ಪತ್ರೆಯ ಅಗತ್ಯವಿದೆ. ಹಂತ ಹಂತವಾಗಿ ಹಾಸಿಗೆ ಸಂಖ್ಯೆ ಹೆಚ್ಚಿಸಿಕೊಂಡು ಬಳಿಕ ವೈದ್ಯಕೀಯ ಕಾಲೇಜು ಬೇಡಿಕೆ ಈಡೇರಿಸಿಕೊಳ್ಳಬಹುದು’ ಎಂಬ ಧೋರಣೆಯಲ್ಲಿ ಸರ್ಕಾರ ಇದ್ದಂತಿದ್ದು, ಇದರಿಂದ ಕಾಲೇಜು ಸ್ಥಾಪನೆಗೆ ಬಹಳ ವರ್ಷವೇ ಹಿಡಿಯಬಹುದು’ ಎಂದು ಅನೇಕ ಮಂದಿ ಆತಂಕ ವ್ಯಕ್ತಪಡಿಸಿದರು.

ಶಾಸಕರಿಗೆ ಗೊತ್ತೇ ಇಲ್ಲ: ಆರ್ಬಿಎಸ್ಎಸ್ಎನ್ ಕಂಪನಿಗೆ ಮತ್ತೆ ಸರ್ಕಾರಿ ಜಮೀನು ಲೀಸ್ಗೆ ನೀಡುವ ವಿಚಾರದಂತಹ ಕೆಲವು ಮಹತ್ವದ ವಿಷಯಗಳು ಶಾಸಕರಿಗೆ ಗೊತ್ತೇ ಇಲ್ಲ ಎಂಬುದು ಅವರ ಮಾತಿನಿಂದಲೇ ಸ್ಪಷ್ಟವಾಯಿತು. ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಇನ್ನಷ್ಟು ಸಮಯ ಬೇಕು ಎಂದು ಹೇಳಿಬಿಟ್ಟರು.

ಡಿಸೆಂಬರ್ಗೆ ಮೊದಲು ರಸ್ತೆ ಪೂರ್ಣಕ್ಕೆ ಸೂಚನೆ ನವೆಂಬರ್ನಲ್ಲಿ ಆಸ್ಪತ್ರೆ ಉದ್ಘಾಟನೆ ಸಾಧ್ಯತೆ ಎಚ್ಎಲ್ಸಿ ಕಾಲುವೆಗೆ ಸಮಾನಾಂತರವಾಗಿ ರಸ್ತೆ

ಆಸ್ಪತ್ರೆಗೆ ಎಲ್ಲಿಂದ ರಸ್ತೆ?

ಜಂಬುನಾಥ ರಸ್ತೆಯಿಂದ ಆಸ್ಪತ್ರೆಗೆ ಹಾಗೂ ಆಸ್ಪತ್ರೆಯಿಂದ ಎಚ್ಎಲ್ಸಿ ಕಾಲುವೆವರೆಗೆ ಕಾಂಕ್ರೀಟ್ ರಸ್ತೆ (₹9.80 ಕೋಟಿ) ಬಳ್ಳಾರಿ ಬೈಪಾಸ್ ರಸ್ತೆಯಿಂದ ಆಸ್ಪತ್ರೆವರೆಗೆ ರಸ್ತೆ (₹2.46 ಕೋಟಿ) ಹಾಗೂ ಆಸ್ಪತ್ರೆಯ ಆವರಣದಲ್ಲಿ ಆಂತರಿಕ ರಸ್ತೆಗಳ ಅಭಿವೃದ್ಧಿ (₹4.23 ಕೋಟಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.