ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಜಿ-20 ಸಭೆ ಹಿನ್ನೆಲೆ ಉನ್ನತ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

Published 2 ಜುಲೈ 2023, 5:20 IST
Last Updated 2 ಜುಲೈ 2023, 5:20 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜುಲೈ ತಿಂಗಳ 3ನೇ ವಾರ ನಡೆಯಲಿರುವ ಜಿ-20 ಶೃಂಗಸಭೆಗೆ ಸಂಬಂಧಿಸಿದಂತೆ ವಿಶ್ವವಿಖ್ಯಾತ ಹಂಪಿಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿರುವ ಸ್ಥಳಗಳ ಪರಿಶೀಲನೆಯನ್ನು ಉನ್ನತ ಮಟ್ಟದ ಅಧಿಕಾರಿಗಳು ಭಾನುವಾರ ನಡೆಸಿದರು.

ಬೆಳಿಗ್ಗೆ ವಿಶ್ವಪಾರಪಂರಿಕ ಪ್ರದೇಶ ಹಂಪಿಯ ಚಕ್ರತೀರ್ಥ ಬಳಿಯ ನದಿದಂಡೆಯಲ್ಲಿ ಜಿ-20 ಸಭೆಗೆ ಆಗಮಿಸುವ ಪ್ರತಿನಿಧಿಗಳು ಕೈಗೊಳ್ಳಲಿರುವ ಹರಿಗೋಲು ಸವಾರಿಯ(ಕೊರಾಕಲ್ ರೈಡ್) ಪ್ರಾರಂಭಿಕ ಸ್ಥಳದ ಪರಿಶೀಲನೆ ನಡೆಸಿದರು. ಸುತ್ತಮುತ್ತಲಿನ ಪ್ರದೇಶದ ಮಾಹಿತಿಯನ್ನು ಸ್ಥಳೀಯ ಅಧಿಕಾರಿಗಳಿಂದ ಪಡೆದುಕೊಂಡರು.

ಜಿ-20 ಶೆರ್ಪಾ ಅಮಿತಾಭ್ ಕಾಂತ್ ಸೇರಿದಂತೆ ಜಂಟಿ ಕಾರ್ಯದರ್ಶಿ ಆಶಿಶ್ ಸಿನ್ಹಾ, ಜಂಟಿ ಕಾರ್ಯದರ್ಶಿ (ಭದ್ರತೆ) ಭಾವನಾ ಸಕ್ಸೇನಾ, ಅಧೀನ ಕಾರ್ಯದರ್ಶಿ ಆಸಿಮ್ ಅನ್ವರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮಪ್ರಸಾತ್ ಮನೋಹರ್ ವಿ. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT