ವಿಜಯನಗರ ಕ್ಷೇತ್ರದ ಮೇಲೆ ಕಣ್ಣು?
ಜನಾರ್ದನ ರೆಡ್ಡಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದ ಮೇಲೆ ಕಣ್ಣಿಟ್ಟೇ ಈ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಮಾಜಿ ಸಚಿವರು ಪಕ್ಷದಲ್ಲಿ ಸಕ್ರಿಯವಾಗಿಲ್ಲ ನಾಯಕತ್ವ ಕೊರತೆ ಎದ್ದು ಕಾಣುತ್ತಿದೆ ವರಿಷ್ಠರು ನಾಯಕತ್ವ ಕೊರತೆ ತುಂಬುವಂತೆ ರಡ್ಡಿ ಅವರಿಗೆ ಸೂಚಿಸುವ ಸಾಧ್ಯತೆ ಇದೆ. ಮತ್ತೊಂದೆಡೆಯಲ್ಲಿ ಗಂಗಾವತಿಯಲ್ಲಿ ಪಕ್ಷದೊಳಗೆ ಬಹಳಷ್ಟು ಭಿನ್ನಮತ ಇದೆ. ಇದೆಲ್ಲವನ್ನೂ ಲೆಕ್ಕಹಾಕಿಕೊಂಡೇ ರೆಡ್ಡಿ ಅವರು ಹೊಸ ದಾಳ ಉರುಳಿಸಲು ಸಜ್ಜಾಗಿದ್ದಾರೆ. ನ್ಯಾಯಾಲಯ ಪ್ರಕರಣಗಳಿಂದಾಗಿ ತಮಗೆ ಸ್ಪರ್ಧಿಸಲು ಸಾಧ್ಯವಾಗದಿದ್ದರೆ ತಮ್ಮ ಪತ್ನಿ ಅಥವಾ ಪುತ್ರನನ್ನೇ ಕಣಕ್ಕೆ ಇಳಿಸುವ ವಿಚಾರವನ್ನೂ ಅವರು ಮಾಡುತ್ತಿರಬೇಕು ಎಂದು ಹೇಳಲಾಗುತ್ತಿದೆ.