ಕೋರ್ಟ್ ಸ್ಥಾಪನೆಯಿಂದ ಖುಷಿಯಾಗಿದೆ’
‘ನ್ಯಾಯಾಂಗ ಮತ್ತು ಶಾಸಕಾಂಗಗಳು ಆಡಳಿತ ವ್ಯವಸ್ಥೆಯ ಕಣ್ಣುಗಳಿದ್ದಂತೆ. ನನ್ನ ಕ್ಷೇತ್ರದ ಜನತೆಗಾಗಿ ಹಾಗೂ ಜಿಲ್ಲೆಯ ಸಮಸ್ತ ಜನತೆಗಾಗಿ ಜಿಲ್ಲಾ ನ್ಯಾಯಾಲಯವನ್ನು ತಂದ ಹೆಮ್ಮೆ ನನಗೆ ಇದೆ. ಯಾವ ಕೆಲಸ ಮಾಡಿದರೂ ಸ್ವಾರ್ಥ ಪ್ರಚಾರಕ್ಕಾಗಿ ಮಾಡಬಾರದು. ನನ್ನನ್ನು ನಿರ್ಲಕ್ಷಿಸಲಾಗಿದೆ ಎಂಬ ವಿಚಾರ ಇದ್ದರೂ ಜಿಲ್ಲಾ ನ್ಯಾಯಾಲಯ ಉದ್ಘಾಟನೆಯಿಂದ ನನಗೆ ಸಂತಸವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನನ್ನ ಸಂಬಂಧ ಉತ್ತಮವಾಗಿದೆ. ಶಿಷ್ಟಾಚಾರ ವಿಚಾರ ಶಿಷ್ಟಾಚಾರ ಅಧಿಕಾರಿಗಳಿಗೇ ಕೇಳಬೇಕು’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಪ್ರತಿಕ್ರಿಯಿಸಿದರು.