ಹೊಸಪೇಟೆ (ವಿಜಯನಗರ): ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಸರ್ಕಾರದಿಂದ ಆಗುತ್ತಿದೆ, ಇಂಗಳಗಿಯಲ್ಲಿ 220 ಕೆ.ವಿ ವಿದ್ಯುತ್ ಸ್ಟೇಷನ್ ಸಹ ನಿರ್ಮಾಣವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ತಾಲ್ಲೂಕಿನ ಬೈಲವದ್ದಿಗೇರಿಯಲ್ಲಿ ಮಂಗಳವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ (ಕೆಪಿಟಿಸಿಎಲ್) ₹9.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 110/11 ಕೆವಿ ವಿದ್ಯುತ್ ಉಪಕೇಂದ್ರ ಉದ್ಘಾಟಿಸಿ ಹಾಗೂ ನಾಗೇನಹಳ್ಳಿಯಲ್ಲಿ ಸ್ಥಾಪಿಸಲಾಗುವ ₹22 ಕೋಟಿ ವೆಚ್ಚದ 110 ಕೆವಿ ಉಪಕೇಂದ್ರ, ಜಿಲ್ಲಾಧಿಕಾರಿ ಕಚೇರಿ ಸಮೀಪ ಸ್ಥಾಪಿಸಲಿರುವ ₹27 ಕೋಟಿ ವೆಚ್ಚದ 110 ಕೆವಿ ಉಪಕೇಂದ್ರ ಹಾಗೂ ಕೂಡ್ಲಿಗಿ ತಾಲ್ಲೂಕಿನ ನರಸಿಂಹಗಿರಿಯಲ್ಲಿ ₹22 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ 66 ಕೆವಿ ಉಪಕೇಂದ್ರಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

‘ಶಾಸಕ ಎಚ್.ಆರ್.ಗವಿಯಪ್ಪ ಅವರು ಕೇಳಿದ್ದಕ್ಕೆ ಇಲ್ಲ ಎನ್ನದೆ ನಾವು ಯೋಜನೆಗಳನ್ನು ಕೊಟ್ಟಿದ್ದೇವೆ. ಈ ಮೂರು ಯೋಜನೆಗಳಿಗೆ ₹60 ಕೋಟಿ ವೆಚ್ಚವಾಗುತ್ತಿದ್ದು, ಸರ್ಕಾರ ಇನ್ನಷ್ಟು ರೀತಿಯಲ್ಲಿ ಕ್ಷೇತ್ರದ, ಜಿಲ್ಲೆಯ ಅಗತ್ಯಗಳಿಗೆ ಸ್ಪಂದಿಸಲಿದೆ. ಇಂಗಳಗಿಯಲ್ಲಿ ಜಾಗ ಗುರುತಿಸಲಾಗಿದೆ, ಸದ್ಯ ಬೈಲವದ್ದಿಕೇರಿಯಲ್ಲಿ ಉಪಕೇಂದ್ರ ನಿರ್ಮಾಣವಾಗಿರುವುದರಿಂದ ಈ ಭಾಗದ ರೈತರಿಗೆ ಇನ್ನು ಮುಂದೆ ಗುಣಮಟ್ಟದ ವಿದ್ಯುತ್ ಲಭಿಸಲಿದೆ’ ಎಂದು ಸಚಿವರು ಹೇಳಿದರು.

ಬೈಲುವದ್ದಿಗೇರಿ ಉಪಕೇಂದ್ರದ ವ್ಯಾಪ್ತಿಯಲ್ಲಿ 40 ಎಕರೆ ಭೂಮಿ ನೀಡಿದರೆ ಸೋಲಾರ್ ಪ್ಯಾನೆಲ್ ಅಳವಡಿಕೆ ಮೂಲಕ 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಇದೇ ಗ್ರಿಡ್ಗೆ ಸರಬರಾಜು ಮಾಡಲಾಗುತ್ತದೆ. ಇದರಿಂದ ವಿದ್ಯುತ್ ಉತ್ಪಾದನೆ ಜತೆಗೆ ಬೇಡಿಕೆ ಕಡಿಮೆಯಾಗಲಿದೆ ಎಂದರು.

ರಾಜ್ಯದಲ್ಲಿ ₹20 ಸಾವಿರ ಕೋಟಿ ಸಬ್ಸಿಡಿಯನ್ನು ಕೃಷಿ ಪಂಪಸೆಟ್ಗಳಿಗೆ ನೀಡಲಾಗುತ್ತಿದೆ. ರೈತರಿಗೆ ನೀಡುತ್ತಿರುವ ವಿದ್ಯುತ್ನಿಂದ ನಷ್ಟವೇನಿಲ್ಲ. ಅಷ್ಟೇ ಪ್ರಮಾಣದಲ್ಲಿ ಅನ್ನ, ಅಹಾರೋತ್ಪಾನೆ ಹೆಚ್ಚುತ್ತಿದೆ. ರೈತರಿಗೆ ಅನುಕೂಲವಾಗಬೇಕು. ಗೃಹಜ್ಯೋತಿಯಲ್ಲಿ ₹9 ಸಾವಿರ ಕೋಟಿ ಸಬ್ಸಿಡಿ ನೀಡಲಾಗುತ್ತಿದ್ದು, ಇದರಿಂದ ಸಾಮಾನ್ಯ ಜನರಿಗೆ ಸಹಾಯವಾಗುತ್ತಿದೆ ಎಂದರು.

ಸತತ ಪ್ರಯತ್ನದ ಫಲ: ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಬೈಲವದ್ದಿಗೇರಿ ಉಪಕೇಂದ್ರದಿಂದ 22 ಸಾವಿರ ಎಕರೆಯಲ್ಲಿ ಕೃಷಿ ಮಾಡುವ ರೈತರಿಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ ಬಹುತೇಕ ಪಂಪ್ಸೆಟ್ ಆಧರಿಸಿ ಬೆಳೆ ತೆಗೆಯಲಾಗುತ್ತಿದೆ. ಶಾಸಕನಾಗಿ ಆಯ್ಕೆಯಾದ ತಕ್ಷಣ ಸತತ ಪ್ರಯತ್ನ ಮಾಡಿದ್ದರ ಫಲವಾಗಿ ಈ ಉಪಕೇಂದ್ರ ಆರಂಭವಾಗಿದೆ, ಸುಮಾರು 9 ಕಿ.ಮೀ.ವಿದ್ಯುತ್ ತಂತಿ ಮಾರ್ಗ ಕಾಡಿನ ಪ್ರದೇಶದಲ್ಲಿ ಸಾಗಿ ಬರಬೇಕಾಗಿದ್ದ ಕಾರಣ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯುವುದು ಹಾಗೂ ಗುತ್ತಿಗೆದಾರರ ಸಮಸ್ಯೆಯಿಂದ ಯೋಜನೆ ಒಂದು ವರ್ಷ ವಿಳಂಬವಾಗಿದೆ ಎಂದರು.

220 ಕೆ.ವಿ ವಿದ್ಯುತ್ ಕೇಂದ್ರ ಸ್ಥಾಪನೆಯಾದ ಬಳಿಕ ವಿಜಯನಗರ ಕ್ಷೇತ್ರದ ಎಲ್ಲ ರೀತಿಯ ವಿದ್ಯುತ್ ಸಮಸ್ಯೆಗಳು ನಿವಾರಣೆಯಾಗಲಿದೆ, ಸಚಿವರು ಈ ನಿಟ್ಟಿನಲ್ಲಿ ತ್ವರಿತವಾಗಿ ಸ್ಥಾಪನೆಗೆ ಸಹಕಾರ ನೀಡಬೇಕು ಎಂದರು.

ಸಂಸದ ಇ.ತುಕಾರಾಂ ಮಾತನಾಡಿ, ಜಿಲ್ಲೆಯ ಹಲವೆಡೆ ವಿದ್ಯತ್ ತಂತಿಗಳು ಹಳೆಯದಾಗಿದ್ದು, ಅವುಗಳನ್ನು ಬದಲಿಸುವ ಅಗತ್ಯ ಇದೆ ಎಂದರು. ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ರೈತರಿಗ 12 ಗಂಟೆ ವಿದ್ಯತ್ ನೀಡಬೇಕು ಎಂದರು.

ಶಾಸಕಿ ಲತಾ ಮಲ್ಲಿಕಾರ್ಜುನ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಕುಮಾರ್ ಹರನಾಳ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಂಕ್ ಕುಮಾರ್ ಪಾಂಡೆ, ಜೆಸ್ಕಾಂ ಎಂಡಿ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಂ ನಿಯಾಜಿ, ಬೈಲವದ್ದಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ನಿಗಮದ ನಿರ್ದೇಶಕ ಗಿರಿಧರ ಕುಲಕರ್ಣಿ, ನಿಗಮದ ಇಇ ಎಚ್.ಎಂ.ನಟರಾಜ್ ಇತರರು ಇದ್ದರು.

ಬೆಂಗಳೂರಿನಲ್ಲಿ ಬೆಸ್ಕಾಂ ಮಾಡುತ್ತಿರುವಂತೆ ಜಿಲ್ಲೆಯಲ್ಲಿ ಜಾರ್ಜಿಂಗ್ ಪಾಯಿಂಟ್ ನಿರ್ಮಾಣ ಮಾಡುವ ಬಗ್ಗೆ ಜೆಸ್ಕಾಂ ಗಂಭೀರ ಪರಿಶೀಲನೆ ನಡೆಸಲಿದೆ.
ಕೆ.ಜೆ.ಜಾರ್ಜ್ ಇಂಧನ ಸಚಿವ

ಲೋಡ್ ಶೆಡ್ಡಿಂಗ್ ಇರಲ್ಲ ಮುಂದಿನ ಬೇಸಿಗೆಯಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ನಿರಂತರ 7 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜಿಗೆ ಬದ್ಧವಾಗಿದ್ದು ಪರಿಣಾಮಕಾರಿಯಾಗಿ ಕುಸುಮ್ ಬಿ ಮತ್ತು ಸಿ ಅನುಷ್ಠಾನಕ್ಕೆ ತರುವ ಮೂಲಕ ಸ್ಥಳೀಯ ವಿದ್ಯುತ್ ಉತ್ಪಾದನೆ ಮಾಡಿ ಸ್ಥಳೀಯ ಗ್ರಿಡ್ಗೆ ಪೂರೈಸಲಾಗುವುದು ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು. ‘2023ರಲ್ಲಿ ಸರ್ಕಾರ ರಚನೆಯಾದಾಗ ಒಂದು ತಿಂಗಳ ಕಾಲ ಮಾತ್ರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಮುಖ್ಯಮಂತ್ರಿ ಅವರು ಅಧಿಕಾರಿಗಳ ಸಭೆ ಕರೆದು ರೈತರಿಗೆ 7 ತಾಸು ವಿದ್ಯುತ್ ಪೂರೈಕೆ ನೀಡಲು ಸಾಧ್ಯವಿಲ್ಲದಿದ್ದರೆ ಕನಿಷ್ಠ 5 ತಾಸು ವಿದ್ಯುತ್ ನಿರಂತರ ಪೂರೈಕೆ ಮಾಡಲೇಬೇಕು ಎಂದು ತಾಕೀತು ಮಾಡಿದ್ದರು. ಕೇವಲ ಒಂದು ತಿಂಗಳು ಕಾಲಾವಕಾಶ ಪಡೆದು ನಿರಂತರ 7 ತಾಸು ವಿದ್ಯುತ್ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಕಳೆದ ಬೇಸಿಗೆಯಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲದೇ ವಿದ್ಯುತ್ ಸರಬರಾಜು ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.