ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮಶ್ರೀ ಜೋಗತಿಗೆ ಗೌರವ ಸಲ್ಲಿಸಲು ಹೋಗಿ ಸಾರಿಗೆ ಇಲಾಖೆ ಯಡವಟ್ಟು

Last Updated 16 ನವೆಂಬರ್ 2021, 15:50 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಅವರಿಗೆ ಗೌರವ ಸಲ್ಲಿಸಲು ಹೋಗಿ ಸಾರಿಗೆ ಇಲಾಖೆ ಯಡವಟ್ಟು ಮಾಡಿಕೊಂಡಿದೆ.

ಕಲ್ಯಾಣ ಕರ್ನಾಟಕ ಸಾರಿಗೆಯ ಸಂಡೂರು ಘಟಕದಲ್ಲಿ ಸಂಚರಿಸುವ ಬಸ್‌ನಲ್ಲಿ ವಿತರಿಸುವ ಟಿಕೆಟ್‌ಗಳ ಮೇಲೆ ಪದ್ಮಶ್ರೀ ಪುರಸ್ಕೃತ ‘ಜಯನಗರ ಜಿಲ್ಲೆಯ ತೃತೀಯ ಲಿಂಗಿ ಮಾತ ಮಂಜಮ್ಮ ಜೋಗತಿರವರಿಗೆ ಸಾರಿಗೆ ಇಲಾಖೆಯಿಂದ’ ಎಂದು ಅಪೂರ್ಣ ಸಾಲುಗಳನ್ನು ಮುದ್ರಿಸಿ ಪ್ರಯಾಣಿಕರಿಗೆ ವಿತರಿಸಲಾಗುತ್ತಿದೆ. ಇದಕ್ಕೆ ಅನೇಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಪದ್ಮಶ್ರೀ ಪ್ರಶಸ್ತಿ ಪಡೆದವರ ಬಗ್ಗೆ ಈ ರೀತಿ ಅಪೂರ್ಣವಾದ ವಿವರ ಪ್ರಕಟಿಸಿ ಅವರಿಗೆ ಅಗೌರವ ಸೂಚಿಸುತ್ತಿರುವುದು ಸರಿಯಲ್ಲ’ ಎಂದು ಪ್ರಯಾಣಿಕ ರಮೇಶ ಆಕ್ಷೇಪಿಸಿದ್ದಾರೆ.

ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಟಿಕೆಟ್ ಮೂಲಕ ಅಭಿನಂದನೆ ಸೂಚಿಸಲು ಸರ್ಕಾರದ ಯಾವುದೇ ಆದೇಶ ಬಂದಿಲ್ಲ. ಘಟಕದ ಕಿರಿಯ ಸಹಾಯಕನ ಅಜಾಗರೂಕತೆಯಿಂದ ಟಿಕೆಟ್ ಮೇಲೆ ಅಪೂರ್ಣ ಸಾಲುಗಳು ಮುದ್ರಣಗೊಂಡಿವೆ. ಹೀಗಾಗದಂತೆ ಕ್ರಮ ವಹಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT