ಹೊಸಪೇಟೆ (ವಿಜಯನಗರ): ‘ರೋಗಿಗಳೊಂದಿಗೆ ಸಮಾಲೋಚನೆಗೂ ಒಂದಿಷ್ಟು ಸಮಯ ಮೀಸಲಿಡಿ, ಹೆಚ್ಚಿನ ಸಮಸ್ಯೆಗಳು ಇದರಿಂದಲೇ ನಿವಾರಣೆಯಾಗಿಬಿಡುತ್ತವೆ. ಇದು ನಾನು 49 ವರ್ಷಗಳ ವೈದ್ಯವೃತ್ತಿಯಲ್ಲಿ ಕಂಡುಕೊಂಡ ಅನುಭವ ಎಂದರೆ ಇದೇ...

ನಗರದ ಹಿರಿಯ ವೈದ್ಯ ಹಾಗೂ ಮಕ್ಕಳ ತಜ್ಞ ಅಶೋಕ್ ದಾತಾರ್ ಅವರು ವೈದ್ಯರ ದಿನಾಚರಣೆ ಪ್ರಯುಕ್ತ ‘ಪ್ರಜಾವಾಣಿ’ಯೊಂದಿಗೆ ಮಾತನಾಡುವ ವೇಳೆ ಒತ್ತು ಕೊಟ್ಟು ಹೇಳಿದ ಅಂಶ ಇದು.

‘ಮಗುವಿಗೆ ಕಿವಿನೋವು ಆಗಿದೆ ಎಂದಿಟ್ಟುಕೊಳ್ಳಿ, ಅದು ನೆಗಡಿಯಿಂದಲೇ ಆಗಿರುತ್ತದೆ. ಆ ಸೋಂಕು ನಿವಾರಣೆಗೆ ಕೆಲವೊಮ್ಮೆ 10 ದಿನ ಬೇಕಾಗಬಹುದು. ಅದನ್ನು ಪೋಷಕರಿಗೆ ಹೇಳಲು ಎರಡು ನಿಮಿಷ ಸಾಕು. ಅದುವೇ ಸಮಾಲೋಚನೆ. ವೈದ್ಯರು ಇರುವ ಸತ್ಯವನ್ನು ಹೀಗೆ ತಿಳಿಸುವ ಕೆಲಸ ಮಾಡಿದ್ದೇ ಆದರೆ ಪೋಷಕರಿಗೆ ಸಹ ಮರುದಿನವೇ ಮಗು ಏಕೆ ಗುಣಮುಖವಾಗಿಲ್ಲ ಎಂಬುದು ಅರಿವಿಗೆ ಬರುತ್ತದೆ, ತಾಳ್ಮೆಯಿಂದ ವೈದ್ಯೋಪಚಾರ ಮಾಡುವುದು ಸಾಧ್ಯವಾಗುತ್ತದೆ’ ಎಂದು ಅವರು ಉದಾಹರಣೆ ನೀಡಿ ವಿವರಿಸಿದರು.

ಅತ್ಯುನ್ನತ ವ್ಯಾಸಂಗದ ಫಲ: ಡಾ.ದಾತಾರ್ ಅವರು ಮಕ್ಕಳ ತಜ್ಞರಾಗಿದ್ದುಕೊಂಡೇ, ಮಗುವಿನ ಬೆಳವಣಿಗೆಯ ಕುರಿತೇ ವಿಶೇಷವಾಗಿ ತರಬೇತಿ (ಡೆವಲಪ್ಮೆಂಟ್ ಪೀಡಿಯಾಟ್ರಿಷಿಯನ್) ಪಡೆದ ವೈದ್ಯರು. ವಿಜಯನಗರ, ಕೊಪ್ಪಳ, ಬಳ್ಳಾರಿ, ಗದಗ ಭಾಗದಲ್ಲಿ ಇಂತಹ ಅಧ್ಯಯನ ಮಾಡಿದ ತಜ್ಞರು ವಿರಳ. ಹೀಗಾಗಿಯೇ ಅವರ ಮಾತು ಹೆಚ್ಚು ಪ್ರಾಮುಖ್ಯ ಪಡೆಯುತ್ತದೆ.

‘ಕಳೆದ 10–15 ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಬಹಳ ಬದಲಾವಣೆ ಆಗಿದೆ. ಜನರ ಬಳಿ ದುಡ್ಡಿದೆ, ಅವರಿಗೆ ಅರ್ಥವಾಗುವ ರೀತಿಯಲ್ಲಿ ಕಾಯಿಲೆ, ಚಿಕಿತ್ಸೆಯ ಬಗ್ಗೆ ಹೇಳಿದರೆ ಅವರ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿರುತ್ತದೆ. ಆದರೆ ಇಂತಹ ಸಮಾಲೋಚನೆ ವಿಚಾರ ವೈದ್ಯಕೀಯ ಪಠ್ಯದಲ್ಲಿ ಇಲ್ಲ. ಅದುವೇ ಸಮಸ್ಯೆ. ಆದರೆ ಈಚಿನ ದಿನಗಳಲ್ಲಿ ವೈದ್ಯರು ಇದನ್ನು ಸ್ವಂತ ಅನುಭವದಿಂದ ಕಲಿತುಕೊಳ್ಳುತ್ತಿದ್ದಾರೆ, ನಾನು ಸಹ ಮೊದಲು ತಪ್ಪು ಮಾಡಿಯೇ ಇದನ್ನು ಕಲಿತುಕೊಂಡೆ’ ಎಂದು ದಾತಾರ್ ಹೇಳಿದರು.

ರೋಗಿಗಳ ಪಾತ್ರ: ‘ರೋಗಿಗಳು ವೈದ್ಯರ ಬಳಿ ಬಂದಾಗ ತಮ್ಮ ಸಮಸ್ಯೆಗಳ ಕುರಿತು ಏನು ಹೇಳಬೇಕೋ, ಅದನ್ನು ಬರೆದುಕೊಂಡು ಬಂದರೆ ಉತ್ತಮ. ರೋಗಿಗಳು ಮಾಡುವ ತಯಾರಿಯಿಂದಲೂ ಚಿಕಿತ್ಸೆ ಸುಲಭವಾಗುತ್ತದೆ’ ಎಂದು ಅವರು ತಿಳಿಸಿದರು.

ಇವರು ಉತ್ತಮ ಛಾಯಾಗ್ರಾಹಕ...

ಡಾ.ಅಶೋಕ್ ದಾತಾರ್ ಅವರು ಮೊದಲಿಗೆ ಹಂಪಿಯ ಕಲ್ಲುಗಳ ರಚನೆಯ ಕುರಿತು (ಬ್ಯಾಲೆನ್ಸಿಂಗ್ ರಾಕ್) ಛಾಯಾಗ್ರಹಣ ಮಾಡುತ್ತಿದ್ದರು. ಬಳಿಕ ಪಕ್ಷಿಗಳ ಛಾಯಾಗ್ರಹಣಕ್ಕೆ ಮುಂದಾದರು. ಅದಕ್ಕಾಗಿ ಅವರು ಅರ್ಧ ಜಗತ್ತನ್ನೇ ಸುತ್ತಿಬಿಟ್ಟಿದ್ದಾರೆ. ರಾಜ್ಯದ ಅತ್ಯುತ್ತಮ ಪಕ್ಷಿ ಛಾಯಾಗ್ರಾಹಕರಲ್ಲಿ ಇವರೂ ಒಬ್ಬರು.

‘ವೈದ್ಯರು ಛಾಯಾಗ್ರಹಣದಂತಹ ಒಂದಿಲ್ಲೊಂದು ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು, ಅದರಿಂದ ಬಹಳಷ್ಟು ವರ್ಷ ಉತ್ಸಾಹದಿಂದ ವೈದ್ಯವೃತ್ತಿ ಮುಂದುವರಿಸುವುದು ಸಾಧ್ಯ’ ಎಂಬುದು ದಾತಾರ್ ಅವರ ಅನುಭವದ ನುಡಿ.

2021ರಲ್ಲಿ ನಾನು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ನ ರಾಜ್ಯ ಘಟಕದ ಅಧ್ಯಕ್ಷನಾದೆ. ಅದರಿಂದ ದೇಶದ 10 ಸಾವಿರ ಮಕ್ಕಳ ತಜ್ಞರಿಗೆ ಡೆವಲಪ್ಮೆಂಟ್ ಪೀಡಿಯಾಟ್ರಿಕ್ಸ್ ತರಬೇತಿ ನೀಡುವುದು ಸಾಧ್ಯವಾಯಿತು ಡಾ.ಅಶೋಕ್ ದಾತಾರ್, ಮಕ್ಕಳ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.