ಹೊಸಪೇಟೆ (ವಿಜಯನಗರ): ತಾಲ್ಲೂಕಿನ ವಡ್ಡರಹಳ್ಳಿಯಲ್ಲಿ ಒಂದು ತಿಂಗಳಿನಿಂದ ಹೊಸಪೇಟೆ–ಬಳ್ಳಾರಿ ಬಸ್ಗಳನ್ನು ನಿಲುಗಡೆ ಮಾಡದ ಕಾರಣ ಸ್ಥಳೀಯ ನಿವಾಸಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

‘ವಡ್ಡರಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸ ಬೈಪಾಸ್ ರಸ್ತೆ ಆಗಿದೆ. ಆದರೆ, ಹೆದ್ದಾರಿಯಲ್ಲಿ ಬಸ್ಗಳನ್ನು ನಿಲುಗಡೆ ಮಾಡುತ್ತಿಲ್ಲ. ನಿಲುಗಡೆಗೆ ಅವಕಾಶ ಇದ್ದರೂ ನಿರ್ಲಕ್ಷ್ಯಿಸಲಾಗುತ್ತಿದೆ. ಇದರಿಂದಾಗಿ ಕಾಕುಬಾಳು, ತಾಳೂರು ಬಸ್ಗಳನ್ನಷ್ಟೇ ಊರಿನ ಜನ ಅವಲಂಬಿಸಬೇಕಾಗಿದೆ. ಈ ಬಸ್ಗಳೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ’ ಎಂದು ಸ್ಥಳೀಯ ಅಪ್ಪು ಸುಧಾಕರ ‘ಪ್ರಜಾವಾಣಿ’ಗೆ ತಿಳಿಸಿದರು.

ದಂಡ ಹಾಕಿ: ‘ವಡ್ಡರಹಳ್ಳಿಗೆ ಬಂದು ಹೋಗದ, ಅಲ್ಲಿ ನಿಲುಗಡೆ ಮಾಡದ ಬಸ್ಗಳಿಗೆ ದಂಡ ಹಾಕಿದರೆ ಮಾತ್ರ ಸಮರ್ಪಕ ಸೇವೆ ನೀಡಬಹುದು. ಈ ಹಿಂದೆ ಧರ್ಮಸಾಗರದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ದಂಡ ಹಾಕಿದ ಬಳಿಕ ಎಲ್ಲಾ ಬಸ್ಗಳೂ ಧರ್ಮಸಾಗರದಲ್ಲಿ ನಿಲುಗಡೆ ಮಾಡುತ್ತಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.