ಹೊಸಪೇಟೆ (ವಿಜಯನಗರ): ನಗರದ ಜಂಬುನಾಥ ರಸ್ತೆಯಲ್ಲಿ ಸಾಧ್ಯ ಟ್ರಸ್ಟ್ ಫಾರ್ ಸೋಷ್ಯಲ್ ಡೆವಲಪ್ಮೆಂಟ್ ನಡೆಸುತ್ತಿರುವ ವಿಶೇಷ ಶಾಲೆಗೆ ಸಂಪೂರ್ಣ ದಾನಿಗಳಿಂದಲೇ ನಿರ್ಮಾಣವಾದ ₹ 9 ಕೋಟಿ ವೆಚ್ಚದ ಸುಸಜ್ಜಿತ ಶಾಲಾ ಕಟ್ಟಡ ಸೋಮವಾರ ಲೋಕಾರ್ಪಣೆಗೊಂಡಿತು.

ಸಾಧ್ಯ ಟ್ರಸ್ಟ್ನ ಸಂಸ್ಥಾಪಕಿ ಹಾಗೂ ವ್ಯವಸ್ಥಾಪಕಿ ಆರತಿ ಕೆ.ಟಿ. ಅವರು ವಿಶೇಷ ಕಾಳಜಿಯಿಂದ ಶಾಲೆ ನಡೆಸಿ ತೋರಿಸಿದ ಕಾರಣಕ್ಕೇ ಹಲವಾರು ಉದ್ಯಮಿಗಳು, ಜನಸಾಮಾನ್ಯರು ದೇಣಿಗೆ ನೀಡಲು ಮುಂದೆ ಬಂದರು. ಒಂದು ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿದರೆ ಇಂತಹ ಇನ್ನಷ್ಟು ಸಂಸ್ಥೆಗಳನ್ನು ನಡೆಸಲು ಸಮಾಜದಲ್ಲಿ ದಾನಿಗಳಿಗೆ ಕೊರತೆ ಇಲ್ಲ ಎಂಬ ಸಂದೇಶವನ್ನು ಸಂಡೂರಿನ ಬಿಕೆಜಿ ಗಣಿ ಕಂಪನಿಯ ನಿರ್ದೇಶಕ ಬಿ.ನಾಗನ ಗೌಡ ಹೇಳಿದರು.

ಸಂಡೂರಿನ ಬಿಕೆಜಿ ಕಂಪನಿ ಮಾತ್ರವಲ್ಲದೆ, ಎಸ್ಕೆಎಂಇಪಿಎಲ್, ವೆಸ್ಕೊ, ಹೊಸಪೇಟೆಯ ಆರ್ಬಿಎಸ್ಎಸ್ಎನ್, ಲಿಂಡೆ, ಹೊಸಪೇಟೆಯ ಭಾರತಿ ಪತ್ತಿಕೊಂಡ, ಸಂತೋಷ್ನಾಗ್ ಪತ್ತಿಕೊಂಡ, ಪಿ.ಬಾಲಸುಬ್ಬ ಶೆಟ್ಟಿ ಮೊದಲಾದ ಕಂಪನಿಗಳು ಮತ್ತು ಕುಟುಂಬಗಳು ಪ್ರಮುಖ ದೇಣಿಗೆ ನೀಡಿದರೆ, ಸರ್ಕಾರಿ ಸ್ವಾಮ್ಯದ ಎಲ್ಐಸಿ ಮತ್ತು ಕರ್ನಾಟಕ ರಾಜ್ಯ ಗಣಿ ನಿಗಮದಿಂದ ಮಾತ್ರ ದೇಣಿಗೆ ದೊರೆತಿದೆ ಎಂದು ಸಮಾರಂಭದಲ್ಲಿ ತಿಳಿಸಲಾಯಿತು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ಎಸ್ಪಿ ಅರುಣಾಂಗ್ಶುಗಿರಿ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ರಾಮಾಂಜನೇಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.