ಹಗರಿಬೊಮ್ಮನಹಳ್ಳಿ: ‘ದಾನದಲ್ಲಿ ದೈವತ್ವವನ್ನು ಕಾಣಬೇಕು, ನಾವು ನೀಡಿದ್ದು ಮತ್ತೊಬ್ಬರಿಗೆ ತಿಳಿಯದಂತಿರಬೇಕು’ ಎಂದು ಮರಿಯಮ್ಮನಹಳ್ಳಿಯ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕೋಗಳಿ ತಾಂಡಾದಲ್ಲಿ ಬುಧವಾರ ₹2ಕೋಟಿ ವೆಚ್ಚದ ಅಜ್ಜಮ್ಮದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

‘ರೈತರು ನಿಜವಾದ ದಾನಿಗಳಾಗಿದ್ದಾರೆ, ತಾವು ಬಿತ್ತುವ ಅಂಶದಲ್ಲಿಯೂ ಪ್ರಾಣಿ ಪಕ್ಷಿಗಳಿಗಾಗಿ ಮುಡಿಪಾಗಿಡುವ ಮೂಲಕ ಧನ್ಯತೆ ಮೆರೆಯುತ್ತಾರೆ’ ಎಂದರು.

ಬಂಜಾರ ಗುರುಪೀಠದ ಸರ್ದಾರ ಸೇವಲಾಲ್ ಸ್ವಾಮೀಜಿ, ‘ಸಮುದಾಯದ ಸಹಭಾಗಿತ್ವದಲ್ಲಿ ವರ್ಷದೊಳಗೆ ದೇವಸ್ಥಾನ ನಿರ್ಮಿಸಲಾಗುವುದು. ಉಡುಪಿಯ ನುರಿತ ಕಾರ್ಮಿಕರಿಗೆ ದೇವಸ್ಥಾನ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ’ ಎಂದರು.

ನಂದಿಪುರದ ಮಹೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಗವಿಮಠದ ಮಹೇಶ್ವರ ಆನಂದ ಗುರೂಜಿ, ಆದರಳ್ಳಿಯ ಕುಮಾರಸ್ವಾಮೀಜಿ, ಶಿವಪ್ರಕಾಶ್ ಸ್ವಾಮೀಜಿ ಮಾತನಾಡಿದರು. ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಿದ ಸೋನುನಾಯ್ಕ ಸೇರಿದಂತೆ ಗ್ರಾಮದ ಮುಖಂಡರನ್ನು ಸನ್ಮಾನಿಸಲಾಯಿತು.

ಬಿಸಿಎಂ ವ್ಯವಸ್ಥಾಪಕ ದೇವೇಂದ್ರನಾಯ್ಕ, ವಿಜಯಕುಮಾರನಾಯ್ಕ, ಉಮಾಪತಿ, ಮುಖಂಡರಾದ ಗುಂಡನಾಯ್ಕ, ಸಂತೋಷನಾಯ್ಕ, ಪ್ರಕಾಶನಾಯ್ಕ, ಚಂದುನಾಯ್ಕ, ಎಸ್.ಮಲ್ಲೇಶನಾಯ್ಕ, ಬಿ. ಮೈಲಾರಸ್ವಾಮಿ, ಉಮಾನಾಯ್ಕ, ಹೂವಿನಹಡಗಲಿಯ ವೆಂಕನಾಯ್ಕ, ಪಿಡಿಒ ಶ್ರೀಕಾಂತ್, ಕೊಟ್ರಯ್ಯ, ಜೆ.ಎಂ.ವಿನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.