ಆಲಮಟ್ಟಿ (ವಿಜಯಪುರ ಜಿಲ್ಲೆ): ಆಲಮಟ್ಟಿ ಜಲಾಶಯದ ಮುಂಭಾಗದಲ್ಲಿ ಕೃಷ್ಣಾ ನದಿಯಲ್ಲಿ ಶುಕ್ರವಾರ ಅರಳದಿನ್ನಿ ಗ್ರಾಮದ ಮೀನುಗಾರರಾದ ಯಲಗೂರದಪ್ಪ ಮಾದರ ಹಾಗೂ ಕೃಷ್ಣಾ ಮಾದರ ಅವರ ಗಾಳಕ್ಕೆ 46 ಕೆಜಿ ತೂಕದ ಹದ್ದು ಜಾತಿಯ ಭಾರಿ ಗಾತ್ರದ ಮೀನು ಸಿಕ್ಕಿದೆ.
‘ಬೃಹತ್ ಗಾತ್ರದ ಮೀನನ್ನು ದಡಕ್ಕೆ ತರಲು ಕಷ್ಟವಾಯಿತು. 18 ವರ್ಷಗಳಿಂದ ಮೀನು ಹಿಡಿಯುತ್ತಿರುವೆ. ಅಪರೂಪದ ಹದ್ದು ಜಾತಿಯ ಇಷ್ಟು ದೊಡ್ಡ ಮೀನು ಇದೇ ಮೊದಲನೇ ಸಲ ನೋಡಿದೆ. ಈ ಮೀನನ್ನು ಸಗಟು ಮೀನು ವ್ಯಾಪಾರಿ ನಿಜಪ್ಪ ಮಾದರ ಕೆಜಿಗೆ ₹ 300ರಂತೆ ಖರೀದಿಸಿದರು’ ಎಂದು ಅರಳದಿನ್ನಿಯ ಇನ್ನೊಬ್ಬ ಮೀನುಗಾರ ಮಹೇಶ ತಿಳಿಸಿದರು.
ಆಲಮಟ್ಟಿ ಜಲಾಶಯದಲ್ಲಿ ಸಿಕ್ಕ 46 ಕೆಜಿ ತೂಕದ ಹದ್ದು ಜಾತಿಯ ಮೀನು