ಬಸವನಬಾಗೇವಾಡಿ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಸೆ.1ರಿಂದ ಒಂದು ತಿಂಗಳ ಕಾಲ ರಾಜ್ಯದಾದ್ಯಂತ ಸಂಚರಿಸಲಿರುವ ‘ಬಸವ ಸಂಸ್ಕೃತಿ ಅಭಿಯಾನ’ಕ್ಕೆ ಬಸವ ಜನ್ಮಸ್ಥಳ ಬಸವನ ಬಾಗೇವಾಡಿ ಸಕಲ ರೀತಿಯಲ್ಲೂ ಸಜ್ಜಾಗಿದೆ.

ಬಸವ ಸಂಸ್ಕೃತಿ ಅಭಿಯಾನಕ್ಕೆ ಸಚಿವ ಶಿವಾನಂದ ಪಾಟೀಲರ ನೇತೃತ್ವದಲ್ಲಿ ನಾಡಿನ ವಿವಿಧ ಮಠಾಧಿಪತಿಗಳು, ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಅಧಿಕೃತ ಚಾಲನೆ ದೊರೆಯಲಿದೆ.

ಐತಿಹಾಸಿಕ ಬಸವೇಶ್ವರ ದೇವಾಲಯ ಹಿಂಭಾಗದಲ್ಲಿರುವ ಬಸವೇಶ್ವರ ಸಿಬಿಎಸ್ಇ ಶಾಲೆಯ ವಿಶಾಲ ಆವರಣದಲ್ಲಿ ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.

ವೇದಿಕೆಗೆ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ, ದಾಸೋಹ ಮನೆಗೆ ಶಿವಲಿಂಗೇಶ್ವರ ಶಿವಯೋಗಿ, ಮಹಾದ್ವಾರಕ್ಕೆ ಲಿಂ. ಮಲ್ಲಪ್ಪ ಸಿಂಹಾಸನ ಮಾಮಲೇದಾರ ಹಾಗೂ ಶಿವಾನುಭವ ಮಂಟಪಕ್ಕೆ ಶರಣ ಹರ್ಡೇಕರ್ ಮಂಜಪ್ಪನವರ ಹೆಸರನ್ನು ನಾಮಕರಣ ಮಾಡಿ, ಗೌರವ ಸಮರ್ಪಿಸಲಾಗಿದೆ.

ಅಭಿಯಾನದ ಉದ್ಘಾಟನಾ ಸಮಾರಂಭಕ್ಕೆ ಸಾವಿರಾರು ಬಸವಭಕ್ತರು ಸೇರುವ ನಿರೀಕ್ಷೆ ಇದ್ದು, ಎಲ್ಲರಿಗೂ ಆಸನ ವ್ಯವಸ್ಥೆ, ಪ್ರಸಾದ, ಕುಡಿಯುವ ನೀರು, ಮೊಬೈಲ್ ಶೌಚಾಲಯ, ವಾಹನಗಳ ನಿಲುಗಡೆ ಸೌಕರ್ಯ ಮಾಡಲಾಗಿದೆ.

ಅಭಿಯಾನಕ್ಕೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸುವ ಬಸವಭಕ್ತರಿಗೆ ಭವ್ಯ ಸ್ವಾಗತ ಕೋರಲು ಪಟ್ಟಣದ ಎಲ್ಲಾ ದಿಕ್ಕುಗಳಲ್ಲಿ ಸ್ವಾಗತ ಕಮಾನುಗಳು, ಶುಭಾಶಯಗಳ ಫ್ಲೆಕ್ಸ್, ಬ್ಯಾನರ್ಗಳು ರಾರಾಜಿಸುತ್ತಿವೆ.

ಬಸವೇಶ್ವರ ಜಾತ್ರೋತ್ಸವ ವೇಳೆ ಅಥಣಿ ಮೋಟಗಿಮಠದ ಪೂಜ್ಯರು ತಿಂಗಳ ಕಾಲ ಬಸವ ಸಂಸ್ಕೃತಿ ಪ್ರವಚನಗೈದಿದ್ದಾರೆ. ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಶ್ರೀಗಳ ನೇತೃತ್ವದ ಶರಣ ಬಳಗ ತಿಂಗಳ ಕಾಲ ಪಟ್ಟಣದ ಎಲ್ಲಾ ವಾರ್ಡ್ಗಳು, ಓಣಿಗಳಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ಸೇವೆಗೈದಿದೆ.

ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ನಾನಾ ಬಸವಪರ ಸಂಘಸಂಸ್ಥೆಗಳು ಜಿಲ್ಲಾದ್ಯಂತ ಪ್ರಚಾರ ಸಭೆಗಳನ್ನು ಮಾಡಿದೆ. ಅಲ್ಲದೇ, ಸ್ಥಳೀಯ ಬಸವೇಶ್ವರ ಸೇವಾ ಸಮಿತಿ, ಬಸವೇಶ್ವರ ಜಾತ್ರಾ ಸಮಿತಿ, ವಿವಿಧ ಬಸವಪರ ಸಂಘಸಂಸ್ಥೆಗಳು ಒಗ್ಗೂಡಿ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಕಾರ್ಯಕ್ರಮಕ್ಕೆ ತಿಂಗಳಿಂದ ಭರದ ಸಿದ್ದತೆ ಮಾಡಿಕೊಂಡು ಬಸವ ಸೇವೆಗೈದಿವೆ.

ಬಸವ ಸಂಸ್ಕೃತಿ ಅಭಿಯಾನಕ್ಕೆ ಬರುವ ಸಹಸ್ರಾರು ಬಸವ ಭಕ್ತರಿಗೆ ಯಾವುದೇ ಕೊರತೆಗಳಾಗದಂತೆ ಎಲ್ಲಾ ರೀತಿಯಲ್ಲಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಸಚಿವ ಶಿವಾನಂದ ಪಾಟೀಲರು ಪೂರ್ಣ ಸಹಕಾರ ನೀಡಿದ್ದಾರೆ
ಈರಣ್ಣ ಚ. ಪಟ್ಟಣಶೆಟ್ಟಿ, ಅಧ್ಯಕ್ಷ, ಬಸವೇಶ್ವರ ಸೇವಾ ಸಮಿತಿ, ಬಸವನಬಾಗೇವಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.