ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವನಬಾಗೇವಾಡಿ: ವಿಪಿಕೆಪಿಎಸ್‌ಗೆ ₹76.62 ಲಕ್ಷ ಲಾಭ

Published : 18 ಆಗಸ್ಟ್ 2024, 13:57 IST
Last Updated : 18 ಆಗಸ್ಟ್ 2024, 13:57 IST
ಫಾಲೋ ಮಾಡಿ
Comments

ಬಸವನಬಾಗೇವಾಡಿ: ನಮ್ಮ ಸಂಘವು 2023 –24ನೇ ಸಾಲಿನಲ್ಲಿ ‘ಅ’ ವರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸದಸ್ಯರ ಹಾಗೂ ಸಿಬ್ಬಂದಿಯವರ ಸಹಕಾರದಿಂದ ₹76.62 ಲಕ್ಷ ನಿವ್ವಳ ಲಾಭದಲ್ಲಿ ದಾಖಲೆ ಮಾಡಿದೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸಿ ರೈತರ ಜೀವನಾಡಿಯಾಗಿ ಹೆಚ್ಚಿನ ಸೇವೆ ನೀಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ’ ಎಂದು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹೇಳಿದರು.

ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಜರುಗಿದ ಸಂಘದ 80ನೇ ವಾರ್ಷಿಕ ಸರ್ವಸಾಧಾರಣ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ 3 –4 ವರ್ಷಗಳ ಸತತ ಬರಗಾಲದ ಪರಿಸ್ಥಿತಿಯಲ್ಲಯೂ ನಿರೀಕ್ಷಿತ ಮಟ್ಟದಲ್ಲಿ ಸಾಲ ವಸೂಲಾತಿಯಾಗಿದೆ. ಸಾಲ ವ್ಯವಹಾರ ನಿರ್ವಹಣೆ ಮತ್ತು ಸಂಪನ್ಮೂಲಗಳ ಸಮಯೋಚಿತ ಹೂಡಿಕೆಗಳಿಂದ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಲಾಭ ಗಳಿಕೆ ಕಂಡಿದೆ. ಬ್ಯಾಂಕ್ ಅಭಿವೃದ್ಧಿ ಕ್ರಿಯಾ ಯೋಜನೆಯನ್ನು ರೂಪಿಸಿಕೊಂಡು ಕಾರ್ಯ ನಿರ್ವಹಿಸಿದ್ದರಿಂದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಾಗಲು ಸಾಧ್ಯವಾಗಿದೆ ಎಂದು ಹೇಳಿದರು.

ಸಂಘವು ಅಭಿವೃದ್ದಿ ಪರ ಚಟುವಟಿಕೆಗಳಾದ ಜೀವ ವಿಮೆ ಯೋಜನೆ , ವ್ಯಾಪಾರ ಅಭಿವೃದ್ದಿ ಯೋಜನೆ, ಕಿಸಾನ ಕಾರ್ಡ ಯೋಜನೆ, ಸ್ವ ಸಹಾಯ ಗುಂಪುಗಳ ಜಂಟಿ ಬಾಧ್ಯತಾ ಗುಂಪು ಹಾಗೂ ಯಶಸ್ವಿನಿ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು, 2024-25 ರಲ್ಲೂ ಈ ಯೋಜನೆಗಳನ್ನು ಮುಂದುವರಿಸಲಾಗುವದು. ರೈತರ ಹಾಗೂ ಜನತೆಯ ಆರೋಗ್ಯದ ಹಿತದೃಷ್ಠಿಯಿಂದ ಶೇ.15 ರಿಂದ ಶೇ.40 ರಿಯಾಯಿತಿ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ನೀಡಲು ಮಳಿಗೆಯನ್ನು ತೆರೆಯಲಾಗಿದೆ ಎಂದು ಹೇಳಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರವೀಣ ಚಿಕ್ಕೊಂಡ ವಾರ್ಷಿಕ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಮಲ್ಲೇಶಿ ಕಡಕೋಳ, ನಿರ್ದೇಶಕರಾದ ನಿಂಗಪ್ಪ ಅವಟಿ, ಮಹಾಂತೇಶ ಹಾರಿವಾಳ, ನಿಂಗಪ್ಪ ಕುಳಗೇರಿ, ಶ್ರೀಶೈಲ ಪರಮಗೊಂಡ, ಈರಣ್ಣ ವಂದಾಲ, ಸುರೇಶ ನಾಯಕ, ಗಂಗೂಬಾಯಿ ಕಡ್ಲಿಮಟ್ಟಿ, ಮಾದೇವಿ ಮೈಲೇಶ್ವರ, ವಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ ಶಹಪೂರ ಇದ್ದರು.

ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು, ಸಮಾಜ ಸೇವಕರು, ಪ್ರಗತಿಪರ ರೈತರು, ಎಸ್‌ಎಸ್‌ಎಲ್‌ಸಿ, ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT