ಬಸವನಬಾಗೇವಾಡಿ: ಸ್ಥಳೀಯ ಪುರಸಭೆಯ ಮುಂದೂಡಲಾದ ಸಾಮಾನ್ಯ ಸಭೆಯು ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಅವರ ಅಧ್ಯಕ್ಷತೆಯಲ್ಲಿ ಸಭಾಭವನದಲ್ಲಿ ಮಂಗಳವಾರ ಜರುಗಿತು.

ಸಭೆಯಲ್ಲಿ ಪುರಸಭೆ ವ್ಯಾಪ್ತಿಯ ಗಡಿ ವಿಸ್ತರಣೆ ಹಾಗೂ ಮಹಾಯೋಜನೆ -2011-2041 (ತಾತ್ಕಾಲಿಕ) ಕ್ಕೆ ಅನುಮೋದನೆ ಪಡೆಯಲಾಯಿತು.

ಸಾಮಾನ್ಯ ಸಭೆಯಲ್ಲಿ ಬಸವನಬಾಗೇವಾಡಿ ಸ್ಥಳೀಯ ಯೋಜನಾ ಪ್ರದೇಶದ ಪ್ರಸ್ತುತ ಒಟ್ಟು ವಿಸ್ತೀರ್ಣ 10.76 ಚ.ಕಿ.ಮೀಟರ್ ಇದ್ದು, ಸದ್ಯದ 33 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಗಡಿ ವ್ಯಾಪ್ತಿಯನ್ನು 27 ಚ.ಕಿ.ಮೀ ವ್ಯಾಪ್ತಿಗೆ ವಿಸ್ತರಿಸಲು ಸಭೆಯಲ್ಲಿ ಸದಸ್ಯರೊಂದಿಗೆ ಚರ್ಚಿಸಿ ಅನುಮೋದನೆ ಪಡೆಯಲಾಯಿತು.

ಇದೇ ವೇಳೆ ಪುರಸಭೆಯಿಂದ ನೀಡಲಾಗುವ ಬೋಜಾ ದಾಖಲು, ವಿವಿಧ ನಿರಕ್ಷೇಪಣಾ ಪ್ರಮಾಣ ಪತ್ರಗಳು ಹಾಗೂ ಇತರೆ ಪ್ರಮಾಣ ಪತ್ರಗಳನ್ನು ನೀಡಲು ಶುಲ್ಕ ವಿಧಿಸಲು ಸಭೆಯಲ್ಲಿ ದರ ಪ್ರಸ್ತಾಪಿಸಲಾಯಿತು.

ಬೋಜಾ ದಾಖಲಿಸಲು ಪ್ರಸ್ತಾಪಿಸಲಾದ ಪ್ರತಿ ಒಂದು ಲಕ್ಷಕ್ಕೆ ₹500 ಶುಲ್ಕವನ್ನು ಹಿರಿಯ ಸದಸ್ಯ ನೀಲಪ್ಪ ನಾಯಕ, ಪ್ರವೀಣ ಪವಾರ ಸೇರಿದಂತೆ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿ ಜನಸಾಮಾನ್ಯರ ಹಿತದೃಷ್ಠಿಯಿಂದ ಬೋಜಾ ಶುಲ್ಕವನ್ನು ₹200ಗೆ ನಿಗದಿಪಡಿಸಲು ತಿಳಿಸಿದರು.

ಬೋಜಾ ದಾಖಲಿಗೆ ಪ್ರತಿ ಒಂದು ಲಕ್ಷ ಮೊತ್ತಕ್ಕೆ ₹200, ಬಾಕಿ ಪ್ರಮಾಣಪತ್ರಕ್ಕೆ ₹100, ಕೊಳವೆಬಾವಿ ಕೊರೆಸಲು ₹500, ವಿದ್ಯುತ್ ಅನುಮತಿಗೆ ಗೃಹಬಳಕೆಗೆ ₹100 ಹಾಗೂ ವಾಣಿಜ್ಯ ಬಳಕೆಗೆ ₹500 ಸೇರಿದಂತೆ ಇತರೆ ಎಲ್ಲಾ ಪ್ರಮಾಣಪತ್ರ ನೀಡಲು ₹100 ಶುಲ್ಕ ನಿಗದಿಪಡಿಸಲಾಯಿತು.

ಪಟ್ಟಣದ ಮೆಗಾ ಮಾರುಕಟ್ಟೆಯಲ್ಲಿ ಪಾದಾಚಾರಿ ಮಾರ್ಗ, ಕಂಬ ಹಾಗೂ ಇತರೆ ಕಾಮಗಾರಿಗಳನ್ನು ಕೈಗೊಳ್ಳಲು ಮತ್ತು ಕೆಳ ಮಹಡಿಯಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಬಹಿರಂಗ ಹರಾಜು ಮೂಲಕ ವಾರ್ಷಿಕ ನಿರ್ವಹಣೆಗೆ ಹೊರಗುತ್ತಿಗೆ ನೀಡಲು, ಪುರಸಭೆ ವ್ಯಾಪ್ತಿಯ 8 ಶುದ್ಧ ಕುಡಿಯುವ ನೀರಿನ ಘಟಕಗಳ ವಾರ್ಷಿಕ ನಿರ್ವಹಣೆಗೆ ಹೊರಗುತ್ತಿಗೆ, 24X7 ನೀರು ಸರಬರಾಜು, ಎಸ್ಟಿಪಿ ಘಟಕಗಳನ್ನು ಹಸ್ತಾತರಿಸಿಕೊಂಡು ನಗರ ನೀರು ಸರಬರಾಜು, ಒಳಚರಂಡಿ ಮಂಡಳಿಗಳಿಗೆ ನಿರ್ವಹಣೆ ನೀಡಲು ಅನುಮತಿ ಪಡೆಯಲಾಯಿತು.

ಕಳೆದ ಸಭೆಯಲ್ಲಿ 15ನೇ ಹಣಕಾಸು ಮತ್ತು ಎಸ್.ಎಫ್.ಸಿ ಯೋಜನೆಗಳ ಕ್ರಿಯಾಯೋಜನೆ ರೂಪಿಸಿ ಟೆಂಡರ್ ಕರೆಯಲಾಗಿದ್ದ ಕಾಮಗಾರಿಗಳ ದರಗಳಿಗೆ ಸಭೆಯಲ್ಲಿ ಅನುಮೋದನೆ ದೊರಕಿತು.

ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಪಟ್ಟಣದ ಸರ್ವೆ ಸಂಖ್ಯೆ 363/*/2 ವಸತಿ ಬಡಾವಣೆಯಲ್ಲಿ ಸಾರ್ವಜನಿಕ ಸೌಲಭ್ಯ ನಿವೇಶನವನ್ನು ನೀಡಲು ಸದಸ್ಯರು ಅನುಮತಿ ಸೂಚಿಸಿದರು.

ಪುರಸಭೆ ಸದಸ್ಯರಾದ ನೀಲಪ್ಪ ನಾಯಕ, ಪ್ರವೀಣ ಪವಾರ, ರಜಾಕಬಿ ಬೊಮ್ಮನಹಳ್ಳಿ, ಪ್ರವೀಣ ಪೂಜಾರಿ, ನಜೀರಹ್ಮದ್ ಗಣಿ, ರೇಖಾ ಬೇಕಿನಾಳ, ರಾಜು ಲಮಾಣಿ, ರೇಖಾ ಸೊನ್ನದ, ಅನ್ನಪೂರ್ಣ ಕಲ್ಯಾಣಿ ಸೇರಿದಂತೆ 18 ಸದಸ್ಯರು, ಪುರಸಭೆ ನಿರ್ವಾಹಕ ಸುರೇಶ ಬಾಗೇವಾಡಿ ಇದ್ದರು.

ಭೂ ಉಪಯೋಗ: ಸುನಿತಾ ಮಾಹಿತಿ

ಮಹಾಯೋಜನೆ -2011-2041ರ ವರೆಗಿನ 30 ವರ್ಷಗಳ ಭವಿಷ್ಯದ ಅಭಿವೃದ್ಧಿ ಹಿತದೃಷ್ಠಿಯಿಂದ ಗಡಿ ವಿಸ್ತರಿಸಿ ಎನ್.ಎ ಲೇಔಟ್ಗಳ ರಸ್ತೆಗಳನ್ನು ಸಂಪರ್ಕಿಸುವುದು, ಹಸಿರು ಹಾಗೂ ಕೆಂಪು ವಲಯಕ್ಕೆ ಜಾಗ ಮೀಸಲಿರಿಸಿ ಪಟ್ಟಣಕ್ಕೆ ಹೊರ ವರ್ತುಲ ರಸ್ತೆ ನಿರ್ಮಿಸಲು ಮಹಾಯೋಜನೆ (ಮಾಸ್ಟರ್ ಪ್ಲಾನ್) ರೂಪಿಸಿಕೊಂಡು ನೀಲನಕ್ಷೆಗಳನ್ನು ಪ್ರದರ್ಶಿಸುವ ಮೂಲಕ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಉಪ ನಿರ್ದೇಶಕಿ ಸುನಿತಾ ಎಲ್. ಲಾಡ್ ಅವರು, ಪ್ರಸ್ತಾವಿತ ಭೂ ಉಪಯೋಗದ ಕುರಿತು ಸದಸ್ಯರಿಗೆ ವಿಶ್ಲೇಷಿಸಿದರು.

ಸಭೆಯಲ್ಲಿ ಮಹಾಯೋಜನೆಗೆ ಅನುಮೋದನೆ ಪಡೆಯಲಾಯಿತು ಎಂದು ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.