ವಿಜಯಪುರ: ‘ಸಮಾಜವಾದ, ಜಾತ್ಯತೀತ ಎರಡೂ ಭಾರತೀಯ ಸಂವಿಧಾನದಲ್ಲಿ ಅಂತರ್ಗತವಾಗಿವೆ. ಇಡೀ ಸಂವಿಧಾನವನ್ನು ಓದಿ ಅರ್ಥಮಾಡಿಕೊಳ್ಳದವರು, ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳದವರು, ಭಾರತೀಯ ಸಮಾಜವನ್ನು ಅರ್ಥ ಮಾಡಿಕೊಳ್ಳದವರು, ಸಮಾನತೆ ಬಯಸದವರು, ಸಂವಿಧಾನ ವಿರೋಧಿಗಳು ಈ ಪದಗಳನ್ನು ತೆಗೆಯಲು ಹುನ್ನಾರ ನಡೆಸಿದ್ದಾರೆ’ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತೀಯ ಸಮಾಜ ಜಾತಿ ತಾರತಮ್ಯದಿಂದ ಕೂಡಿದೆ. ಭೇದಭಾವದಿಂದ ಕೂಡಿದೆ, ಇದು ಸಮಾನ ಭಾರತವಲ್ಲ, ಅಸಮಾನ ಭಾರತವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಜಾತಿ ತಾರತಮ್ಯ ಹೋಗಲಾಡಿಸಲು ಸಂವಿಧಾನದಲ್ಲಿ ಸಮಾಜವಾದ, ಜಾತ್ಯತೀತ ಪದಗಳನ್ನು ಸೇರಿಸಲಾಗಿದೆ’ ಎಂದರು.

‘ತಾರತಾಮ್ಯವನ್ನೇ ತಮ್ಮ ಆದರ್ಶ ಎಂದು ನಂಬಿಕೊಂಡವರು, ತಾರತಮ್ಯವನ್ನು ಸಮರ್ಥಿಸುವ ಮನುಸ್ಮೃತಿಯಂಥ ಗ್ರಂಥಗಳನ್ನು ಆದರ್ಶವಾಗಿಟ್ಟುಕೊಂಡವರು, ಹೊಸ ಸಂವಿಧಾನ ಬರೆಯಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಜಾತ್ಯತೀತ ಮತ್ತು ಸಮಾಜವಾದ ಪದಗಳು ಬೇಡವಾಗಿವೆ’ ಎಂದು ಹೇಳಿದರು.

‘ಸಂವಿಧಾನ ರಚನೆಯಾದ ಬಳಿಕ ಆಗಿರುವ 108 ತಿದ್ದುಪಡಿಗಳಲ್ಲಿ ಜಾತ್ಯತೀತ ಮತ್ತು ಸಮಾಜವಾದ ಎಂಬ ಎರಡು ಪದಗಳು ಮಾತ್ರವಲ್ಲ, 29 ಸಾವಿರಕ್ಕೂ ಹೆಚ್ಚು ಪದಗಳು ಸೇರ್ಪಡೆಯಾಗಿವೆ. ಆದರೆ, ಈ ಎರಡು ಪದಗಳ ಬಗ್ಗೆ ಮಾತ್ರ ಆಕ್ಷೇಪ ಏಕೆ’ ಎಂದು ಪ್ರಶ್ನಿಸಿದರು.

‘ಸಮಾಜವಾದ, ಜಾತ್ಯತೀತ ಪದಗಳನ್ನು ಅಂಬೇಡ್ಕರ್ ಬಯಸಿರಲಿಲ್ಲ ಎಂಬುದು ಖಂಡನೀಯ. ಸಂವಿಧಾನ ಮೂಲ ಆಶಯಕ್ಕೆ ಧಕ್ಕೆಯಾಗದಂತೆ, ಜನತೆಯ ಮತ್ತು ದೇಶದ ಹಿತಾಸಕ್ತಿಗೆ ಅನುಗುಣವಾಗಿ ತಿದ್ದುಪಡಿ ಮಾಡಲು ಸಂವಿಧಾನದಲ್ಲೇ ಅವಕಾಶ ಇದೆ. ಇಡೀ ಸಂವಿಧಾನದ ತಾತ್ವಿಕತೆಗೆ ಸಮಾಜವಾದ, ಜಾತ್ಯತೀತ ಪದಗಳು ವಿರೋಧವಾಗಿಲ್ಲ, ಜಾತ್ಯತೀತ ಮತ್ತು ಸಮಾಜವಾದವನ್ನು ಪ್ರತಿಪಾದಿಸುವ ಅನೇಕ ಅಂಶಗಳು ಸಂವಿಧಾನದ ಆಂತರ್ಯದಲ್ಲಿ ಇವೆ’ ಎಂದು ಹೇಳಿದರು.

ಬೌದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ, ಮುಖಂಡರಾದ ಅಭಿಷೇಕ ಚಕ್ರವರ್ತಿ, ಅಡಿವೆಪ್ಪ ಸಾಲಗಲ್ಲ, ಚಿನ್ನು ಹೊಸಮನಿ, ನಾಗರಾಜ ಲಂಬು, ಶ್ರೀನಾಥ ಪೂಜಾರಿ, ಪ್ರಭುಗೌಡ ಪಾಟೀಲ, ವಾಸುದೇವ ಕಾಳೆ, ಯಮನಪ್ಪ ಗುಣಕಿ, ರಾಜೇಶ ತೊರವಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಅನಿಲ ಹೊಸಮನಿಗೆ ಅಭಿನಂದನೆ 14ಕ್ಕೆ

ವಿಜಯಪುರ: ಸಾಹಿತಿ ಪತ್ರಕರ್ತ ಅನಿಲ ಹೊಸಮನಿ ಅವರಿಗೆ ಜುಲೈ 13ರಂದು ಬೆಳಿಗ್ಗೆ 10.30ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಬಸವರಾಜ ಸೂಳಿಭಾವಿ ತಿಳಿಸಿದರು. ‘ಅನಿಲ ಹೊಸಮನಿ ಎಂಬ ಸಂಘರ್ಷದ ಒಡನಾಡಿಯೊಂದಿಗೆ ಬಿಜಾಪುರದಲ್ಲಿ ಒಂದು ದಿನ’ ಎಂಬ ಅಭಿನಂದನಾ ಸಮಾರಂಭವನ್ನು ಮುಂಬೈನ ವಿಜಯ ಸುರ್ವಾಡೆ ಉದ್ಘಾಟಿಸುವರು. ಹೊಸಮನಿ ಅನುವಾದಿಸಿರುವ ‘ಡಾ.ಅಂಬೇಡ್ಕರ್ ಸಹವಾಸದಲ್ಲಿ’ ಪುಸ್ತಕದ 2ನೇ ಆವೃತ್ತಿಯನ್ನು ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 1ಕ್ಕೆ ‘ಅನಿಲ ಹೊಸಮನಿಯವರ ಸಾಹಿತ್ಯ’ ಕುರಿತು ಗೋಷ್ಠಿ 1 ಮಧ್ಯಾಹ್ನ 2.30ಕ್ಕೆ ‘ವಿಜಯಪುರ ಜಿಲ್ಲೆಯ ದಲಿತ ಚಳವಳಿ ಮತ್ತು ಅನಿಲ ಹೊಸಮನಿ’ ವಿಷಯ ಕುರಿತು ಗೋಷ್ಠಿ 2 ಸಂಜೆ 4ಕ್ಕೆ ‘ಅನಿಲ ಹೊಸಮನಿ ಅವರೊಂದಿಗೆ ಸಂವಾದ’ ಗೋಷ್ಠಿ 3 ನಡೆಯಲಿದೆ. ಸಂಜೆ 5.30ಕ್ಕೆ ಹೊಸಮನಿ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಮನೆ ಸಮರ್ಪಣೆ: ಅನಿಲ ಹೊಸಮನಿ ಅವರ ಸ್ನೇಹ ಬಳಗದವರು ಸೇರಿಕೊಂಡು ಅವರಿಗೆ ಮನೆ ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ. ಮನೆ ನಿರ್ಮಾಣಕ್ಕೆ ಅಗತ್ಯ ಹಣವನ್ನು ಯಾವುದೇ ಸರ್ಕಾರ ರಾಜಕಾರಣಿಗಳಿಂದ ಪಡೆಯದೇ ಸ್ನೇಹಿತರ ಬಳಗ ಮೇ ಸಾಹಿತ್ಯ ಬಳಗ ದಲಿತ ಸಂಘಟನೆಯ ಬಳಗ ಬೌದ್ಧ ವಿಹಾರ ನಿರ್ಮಾಣ ಸಮಿತಿಯ ಗೆಳೆಯರು ಕೂಡಿಕೊಂಡು ಸುಮಾರು ₹18 ಲಕ್ಷ ಮೊತ್ತದಲ್ಲಿ ಮನೆ ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.