ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದ ವಚನ ಶಿಲಾಮಂಟಪದ ಸ್ಥಾಪಕರಾಗಿದ್ದ ಚನ್ನಬಸವ ಸ್ವಾಮೀಜಿ (94)ಗುರುವಾರ ಶ್ರೀಮಠದಲ್ಲಿ ಲಿಂಗೈಕ್ಯರಾಗಿದರು.

ಲಿಂಗೈಕ್ಯ ಶ್ರೀಗಳ ಅಂತಿಮ ಧಾರ್ಮಿಕ ವಿಧಿ ವಿಧಾನವು ಡಿ. 12ರಂದು ಇಂಗಳೇಶ್ವರ ಗ್ರಾಮದಲ್ಲಿ ಮೆರವಣಿಗೆ ಬಳಿಕ ಮಧ್ಯಾಹ್ನ 2 ಗಂಟೆಗೆ ವಚನಶಿಲಾ ಮಂಟಪದಲ್ಲಿ ಕ್ರಿಯಾ ಸಮಾಧಿ ಮಾಡಲಾಗುವುದು ಎಂದು ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ವಚನಶಿಲಾ ಮಂಟಪದ ಸ್ಥಾಪಕ:

ಚನ್ನಬಸವ ಸ್ವಾಮೀಜಿಯವರು ಬಸವಣ್ಣನವರ ತಾಯಿ ತವರೂರು ಇಂಗಳೇಶ್ವರ ಗ್ರಾಮದ ವಿರಕ್ತಮಠದಲ್ಲಿ 1967ರಲ್ಲಿ ವಚನ ಶಿಲಾಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಈ ಕಾರ್ಯ ಅರ್ಧ ಶತಮಾನದ ಬಳಿಕ ಸಾಕಾರಗೊಂಡಿದೆ. ಕಲ್ಲಿನಲ್ಲಿ ಬರೆದ ವಚನಗಳು ಯುಗ ಯುಗ ಕಳೆದರೂ ಶಾಶ್ವತವಾಗಿ ಓದಲು ಸಾಧ್ಯವಾಗುವಂತೆ ಷಟ್ಕೋನಾಕೃತಿಯ ವಚನಶಿಲಾ ಮಂಟಪದಲ್ಲಿ ಬಸವಣ್ಣನವರ 1300 ವಚನಗಳು ಸೇರಿ ಸುಮಾರು 1700ಕ್ಕೂ ಅಧಿಕ ಬಸವಾದಿ ಶರಣರ ವಚನಗಳನ್ನು ಶಿಲೆಗಳಲ್ಲಿ ಕೆತ್ತಿಸಿದ್ದಾರೆ. ಚನ್ನಬಸವ ಸ್ವಾಮೀಜಿಯವರು ಜೋಳಿಗೆ ಹಿಡಿದು ನಾಡಿನಾದ್ಯಂತ ಪಾದಯಾತ್ರೆ ಮೂಲಕ ಸಂಚರಿಸಿ, ಸಂಗ್ರಹಿಸಿದ ಹಣದಲ್ಲಿ ಈ ಮಹತ್ಕಾರ್ಯ ಸಲ್ಲಿಸಿದ್ದು, ಗಿನ್ನಿಸ್ ದಾಖಲೆ ಸೇರ್ಪಡೆಯಾಗಿದೆ.

2022ರ ಜೂನ್ನಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಲೋಕಾರ್ಪಣೆಗೊಳಿಸಿದರು. ಶರಣ ಸಾಹಿತ್ಯ ಪ್ರಚಾರ ಕಾರ್ಯಕ್ಕೆ ವಚನಶಿಲಾ ಮಂಟಪ ದೊಡ್ಡ ಕೊಡುಗೆಯಾಗಿದೆ.

ಪಾದಯಾತ್ರೆ ಮೂಲಕ ಪುಣ್ಯಕ್ಷೇತ್ರಗಳ ದರ್ಶನ:

‘ದಾಸೋಹಮೂರ್ತಿ’ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಸಂತ ಚನ್ನಬಸವ ಸ್ವಾಮಿಗಳು 1948 ರಲ್ಲಿ ಇಂಗಳೇಶ್ವರ ವಿರಕ್ತಮಠದ ಅಧಿಕಾರ ವಹಿಸಿಕೊಂಡರು. ಬಳಿಕ ಸುಮಾರು 37 ವರ್ಷ ಪಾದಯಾತ್ರೆ ಮೂಲಕವೇ ಕಾಶಿ, ರಾಮೇಶ್ವರ, ಕೇದಾರನಾಥ, ಯಡಿಯೂರು, ಅಥಣಿ ಹೀಗೆ ನಾನಾ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿದ್ದಾರೆ. ಸುಮಾರು 32 ವರ್ಷ ಯುಗಾದಿ ಸಮಯದಲ್ಲಿ ಪ್ರತಿವರ್ಷ ಉಳವಿಗೆ ಪಾದಯಾತ್ರೆ ತೆರಳಿ ಕ್ಷೇತ್ರ ದರ್ಶನ ಮಾಡಿದ್ದಾರೆ.

‘ತುಪ್ಪದ ಸ್ವಾಮೀಜಿ’ ಎಂದೇ ಪ್ರಸಿದ್ಧಿ :

ಲಿಂಗೈಕ್ಯ ಚನ್ನಬಸವ ಸ್ವಾಮಿಗಳು ತಾವು ಶ್ರೀಮಠದ ಅಧಿಕಾರವಹಿಸಿಕೊಂಡ ದಿನದಿಂದ ಲಿಂಗೈಕ್ಯರಾಗುವವರೆಗೂ ಶ್ರೀಮಠದಲ್ಲಿ ಪ್ರತಿನಿತ್ಯ ದಾಸೋಹ ಸೇವೆ ಮಾಡುತ್ತಿದ್ದರು. ಬರುವ ಭಕ್ತರಿಗೆ ವಿಶೇಷವಾಗಿ ತುಪ್ಪ ಹಾಗೂ ಸಜ್ಜಕ ಪ್ರಸಾದ ನೀಡುತ್ತಿದರು. ಯಾವುದೇ ಪ್ರಸಾದ ವ್ಯವಸ್ಥೆ ಇದ್ದರೂ ತುಪ್ಪದ ವ್ಯವಸ್ಥೆ ಇರಲೇಬೇಕೆಂಬುದು ಕಡ್ಡಾಯವಾಗಿತ್ತು. ಹಾಗಾಗಿ ಭಕ್ತರು ಅವರನ್ನು ‘ತುಪ್ಪದ ಸ್ವಾಮೀಜಿ’ ಎಂತಲೂ ಭಕ್ತಿ, ಪ್ರೀತಿಯಿಂದ ಕರೆಯುತ್ತಿದ್ದರು.

ಪ್ರವಚನದಲ್ಲಿ ಎತ್ತಿದ ಕೈ:

ಪ್ರತಿ ಹಳ್ಳಿಗಳಲ್ಲಿ ಬಸವಾದಿ ಶರಣರ ಪ್ರವಚನಗಳನ್ನು ಆಕರ್ಷಕವಾಗಿ ಹೇಳುವ ಮೂಲಕ ದೊಡ್ಡ ಭಕ್ತ ಬಳಗವನ್ನು ಗಳಿಸಿಕೊಂಡಿದ್ದರು. ವಿಶೇಷವಾಗಿ ಇಂಗಳೇಶ್ವರ ಗ್ರಾಮದಲ್ಲಿ ಸುಮಾರು 3 ತಿಂಗಳು ‘ಬಸವಪುರಾಣ’ ಹಾಗೂ ಸುಮಾರು 6 ತಿಂಗಳ ‘ಭೂಮಂತ್ರ ಪುರಾಣ’ ಹೇಳಿದ್ದರು.

ಗಣ್ಯರಿಂದ ಸಂತಾಪ:

‘ಇಂಗಳೇಶ್ವರದ ಚನ್ನಬಸವ ಸ್ವಾಮೀಜಿಯವರು ಜೀವನದುದ್ದಕ್ಕೂ ದಾಸೋಹಮೂರ್ತಿಯಾಗಿ, ಬಸವವಾದಿ ಶರಣರ ತತ್ವಾದರ್ಶಗಳಂತೆ ಬಾಳಿ ಬದುಕಿದವರು. ಅಖಂಡ ವಿಜಯಪುರ ಜಿಲ್ಲೆಯ ಎಲ್ಲಾ ವಿರಕ್ತ ಪರಂಪರೆಯ ಮಠಾಧೀಶರಿಗೆ, ಸಂತರಿಗೆ ಮಾರ್ಗದರ್ಶನ ನೀಡುತ್ತಾ ದೊಡ್ಡ ಶಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ಇಡೀ ಸಂತಕುಲಕ್ಕೆ ದೊಡ್ಡ ನಷ್ಟವಾಗಿದ್ದು, ಬಸವನಾಡು ಬರಿದಾಗಿದೆ’ ಎಂದು ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಇಂಗಳೇಶ್ವರ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರೀಗಳು ಸದಾ ಮುಂಚೂಣಿಯಲ್ಲಿದ್ದು, ನಾಡಿನ ಆಧ್ಯಾತ್ಮಿಕ–ಸಾಮಾಜಿಕ ಚಟುವಟಿಕೆಗಳಿಗೆ ದಿಕ್ಕುನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸರ್ಕಾರದ ನೆರವಿಲ್ಲದೆ , ಬಸವಾದಿ ಶರಣರ ವಚನಗಳನ್ನು, ಮಾನವೀಯತೆ ಮತ್ತು ಸಮಾನತೆಯ ಸಂದೇಶಗಳನ್ನು ಶಿಲೆಯಲ್ಲಿ ಕೆತ್ತಿಸಿ, ಇಲ್ಲಿನ ವಚನ ಶಿಲಾಮಂಟಪದಲ್ಲಿ ಪ್ರತಿಷ್ಠಾಪಿಸುವ ಕಾರ್ಯದಲ್ಲಿ ಪೂಜ್ಯರು ಪ್ರಮುಖ ಪಾತ್ರವಹಿಸಿದ್ದರು’ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

‘ಪ್ರತಿವರ್ಷ ಇಂಗಳೇಶ್ವರದಿಂದ ಶ್ರೀಕ್ಷೇತ್ರ ಉಳವಿಯವರೆಗೂ ದೀರ್ಘ ಪಾದಯಾತ್ರೆ ನಡೆಸಿ ವಚನಗಳ ಸಾರವನ್ನು ಜನಮನದಲ್ಲಿ ಬಿತ್ತುತ್ತಿದ್ದರು. ತಮ್ಮ ಸತ್ಯಶುದ್ಧ ಕಾಯಕ, ಶಿಸ್ತು, ಆತ್ಮನಿಷ್ಠೆ, ಸರಳತೆ, ಜಾತಿ-ಧರ್ಮಗಳ ಮೀರಿ ಬಾಳುವ ವಿಶಾಲತೆಗಳಿಂದ ಪೂಜ್ಯರು ನಾಡಿನ ಸ್ವಾಮಿಗಳಲ್ಲಿ ಶ್ರೇಷ್ಠರೆನಿಸಿಕೊಂಡಿದ್ದರು’ ಎಂದು ಸಚಿವರು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

‘ಸರಳತೆ, ಸೇವಾಭಾವ ಮತ್ತು ಶರಣ ತತ್ವದ ಬದುಕಿಗೆ ಮಾದರಿಯಾಗಿದ್ದ ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ ಅಗಲಿಕೆ ನಮ್ಮೆಲ್ಲರಿಗೂ ದೊಡ್ಡ ನಷ್ಟ. ಶರಣರ ವಚನಗಳ ಬಗ್ಗೆ ನೀಡಿದ ವಿಸ್ತೃತವಾದ ಉಪದೇಶಗಳು, ಸಮಾಜಮುಖಿ ಚಿಂತನೆಗಳು ಹಾಗೂ ಮನುಕುಲದ ಒಳಿತಿಗಾಗಿ ನೀಡಿದ ಸಂದೇಶಗಳು ಇಂದಿಗೂ ಮನಸ್ಸಿನಲ್ಲಿ ಹಚ್ಚಹಸಿರಾಗಿವೆ’ ಎಂದು ಮಾಜಿ ಸಚಿವ ಎಸ್. ಆರ್. ಪಾಟೀಲ ಕಂಬನಿ ಮಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.