ಸಿಂದಗಿ: ಸಿಂದಗಿ ಪಟ್ಟಣ ಕುಸ್ತಿ ತವರೂರು. ರಾಷ್ಟ್ರಮಟ್ಟದ ಕುಸ್ತಿ ಆಟಗಾರರಾಗಿದ್ದ ದಿವಂಗತ ಆರ್.ಬಿ.ಬೂದಿಹಾಳ ಅವರು ಗರಡಿಮನಿ ಸ್ಥಾಪಿಸಿ ಹಲವಾರು ಕುಸ್ತಿ ಪಟುಗಳನ್ನು ತಯಾರಿಸಿದ್ದರು. ಹೀಗಾಗಿ ದೇಸಿ ಕ್ರೀಡೆ ಕುಸ್ತಿಯನ್ನು ಉಳಿಸಿ- ಬೆಳೆಸಬೇಕಾಗಿದೆ. ಅಂತೆಯೇ ರಾಜ್ಯಮಟ್ಟದ ಕುಸ್ತಿ ಟೂರ್ನಿ ಇಲ್ಲಿ ಆಯೋಜನೆ ಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪಿಯು ಕಾಲೇಜಿನ ಆವರಣದಲ್ಲಿ ಆಧುನಿಕ ಭಗೀರಥ ಎಂ.ಸಿ.ಮನಗೂಳಿ ವೇದಿಕೆಯಲ್ಲಿ ಆಯೋಜನೆ ಮಾಡಲಾಗಿದ್ದ ರಾಜ್ಯಮಟ್ಟದ ಪಿಯು ಕಾಲೇಜುಗಳ ಬಾಲಕ/ಬಾಲಕಿಯರ ಕುಸ್ತಿ ಟೂರ್ನಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಇದೇ ಮೈದಾನದಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯನ್ನು ಆಯೋಜನೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ಟೂರ್ನಿ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿದ್ದ ಸಿಂದಗಿ ಸಾರಂಗಮಠದ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಅವರು, ಯುವ ಪೀಳಿಗೆ ಮೊಬೈಲ್ ಬಿಟ್ಟು ಆಟದ ಮೈದಾನಕ್ಕೆ ಬರಬೇಕು ಎಂದು ಹೇಳಿದರು.

ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ವಿಜಯಪುರ ಉಪನಿರ್ದೇಶಕ ಸಿ.ಕೆ.ಹೊಸಮನಿ, ಕರ್ನಾಟಕ ರಾಜ್ಯ ಪಿಯು ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಆರ್.ಬಸವರಾಜ್, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ವಿಜಯಪುರ ಜಿಲ್ಲಾ ಪಿಯು ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಶಾಂತೇಶ ದುರ್ಗಿ, ಉಪನ್ಯಾಸಕ ಸಿದ್ಧಲಿಂಗ ಕಿಣಗಿ, ಪೂಜಾ ಹಿರೇಮಠ ಮಾತನಾಡಿದರು.

ರಾಜ್ಯಮಟ್ಟದ ಕ್ರಿಕೆಟ್ ಆಟಗಾರ್ತಿ ಜಯಶ್ರೀ ರಾಜಶೇಖರ ಕೂಚಬಾಳ, ಜುಡೋ ಆಟಗಾರ್ತಿ ಶಿರಿನಾ ಬೆಕಿನಾಳ, ಕಬಡ್ಡಿ ಆಟಗಾರ ಪ್ರಮೋದ ಆನಂದ ಮಾಣಸುಣಗಿ, ಅಂತರರಾಷ್ಟ್ರೀಯ ಜುಡೋ ಆಟಗಾರ ರವಿ ರೆಬಿನಾಳ ಅವರನ್ನು ಹಾಗೂ ಕುಸ್ತಿ ಮಾಜಿ ಪೈಲ್ವಾನರಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರಾದ ಶಿವಪ್ಪಗೌಡ ಬಿರಾದಾರ, ವಿಶ್ವನಾಥ ಕುರಡೆ, ಬಿ.ಜಿ.ನೆಲ್ಲಗಿ, ವಿಶ್ವನಾಥಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಶಾಲಾ ಶಿಕ್ಷಣ(ಪದವಿಪೂರ್ವ) ಇಲಾಖೆ ವಿಜಯಪುರ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ ಸುಂಬಡ, ಬೆಂಗಳೂರಿನ ದೈಹಿಕ ಶಿಕ್ಷಣ ಉಪನ್ಯಾಸಕ ಗಿರೀಶ ಗೋಲಾ, ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕರಾದ ಕೆ.ಎಚ್.ಸೋಮಾಪುರ, ಎಚ್.ಎಂ.ಉತ್ನಾಳ ಹಾಗೂ ಜಿಲ್ಲೆಯ ಪಿಯು ಕಾಲೇಜುಗಳ ಪ್ರಾಚಾರ್ಯರು ವೇದಿಕೆಯಲ್ಲಿ ಇದ್ದರು.

27 ಜಿಲ್ಲೆಗಳ 415 ಬಾಲಕರು, 25 ಜಿಲ್ಲೆಗಳ 250 ಬಾಲಕಿಯರು ಹಾಗೂ ಗದಗ-ಬೆಂಗಳೂರು-ಬೆಳಗಾವಿಯ 22 ಜನ ನಿರ್ಣಾಯಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.