ರೈತರು ತಮ್ಮ ಆಧಾರ್ ಕಾರ್ಡ್ ಝರಾಕ್ಸ್, ಪಹಣಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕ್, ಗ್ರಾಮಒನ್ ಕೇಂದ್ರ, ಸಿಎಸ್‍ಸಿ ಸೆಂಟರ್‌ಗಳಲ್ಲಿ ಬೆಳೆವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳುಬಹುದು. ಮುಂಗಾರು ಹಂಗಾಮಿನಲ್ಲಿ ಈಗಾಗಲೇ ದ್ರಾಕ್ಷಿ ಬೆಳೆಗೆ ವಿಮೆಗೆ ಹೆಸರು ನೋಂದಾಯಿಸಿಕೊಳ್ಳದ ರೈತರಿಗೆ ಅವಧಿಯನ್ನು ವಿಸ್ತರಿಸಿದ್ದು, ರೈತರು ಪ್ರತಿ ಹೆಕ್ಟರ್‌ಗೆ ₹14,000 ವಿಮಾ ಕಂತಿನ ಮೊತ್ತ ಪಾವತಿಸಬೇಕು ಎಂದು ತಿಳಿಸಿದ್ದಾರೆ.