ಇಂಡಿ: ಕಳೆದ ಐದು ತಿಂಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಬೆಳೆಗಳು ಹಾಳಾಗಿವೆ. ಸರ್ಕಾರ ಜಂಟಿ ಸಮೀಕ್ಷೆ ನೆಪದಲ್ಲಿ ಸಮಯ ವ್ಯರ್ಥ ಮಾಡದೇ ಒಣ ಬೇಸಾಯಕ್ಕೆ ₹50 ಸಾವಿರ ಹಾಗೂ ನೀರಾವರಿ ಭೂಮಿಗೆ ₹1 ಲಕ್ಷ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹2 ಲಕ್ಷ ಪರಿಹಾರ ಕೊಡಬೇಕೆಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂಡಿ ತಾಲ್ಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

‘ಸಮಸ್ತ ಬೆಳೆಗಳು ಕೂಡ ನಷ್ಟಗೊಂಡಿರುವ ಹಿನ್ನೆಲೆಯಲ್ಲಿ ಯಾರಿಗೂ ತಾರತಮ್ಯ ಮಾಡದೆ ಎಲ್ಲರಿಗೂ ನಷ್ಟ ಪರಿಹಾರವನ್ನು ಹಾಕಬೇಕು. ಅದೇ ರೀತಿಯಾಗಿ ಫಸಲು ಭೀಮಾ ಯೋಜನೆಯ ವಿಮೆಯೂ ಆದಷ್ಟು ಬೇಗ ಕೊಡಬೇಕು’ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಮಾಳು ಪೂಜಾರಿ ಮಾತನಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್, ‘ಈಗಾಗಲೇ ಮೊದಲನೇ ಹಂತದಲ್ಲಿ ನಷ್ಟಗೊಂಡ ರೈತರಿಗೆ ಪರಿಹಾರಕ್ಕೆ ಗುರುತಿಸಲಾಗಿತ್ತು. ಮತ್ತೆ ಇತ್ತೀಚಿಗೆ ಹೆಚ್ಚಿನ ಮಳೆ ಉಂಟಾಗಿ ಅನೇಕ ರೈತರ ಜಮೀನುಗಳಲ್ಲಿ ನೀರು ನಿಂತು ನಷ್ಟಗೊಂಡಿರುವ ಕುರಿತು ಪ್ರಥಮ ವರದಿಯನ್ನು ಆಯಾ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಅಂಟಿಸಲಾಗಿದೆ. ಇನ್ನೂ ಯಾವುದೇ ರೈತರು ನಷ್ಟಗೊಂಡು ಉಳಿದಿದ್ದರೆ ಅಂಥವರು ದಾಖಲೆಗಳನ್ನು ನೀಡಬೇಕು’ ಎಂದು ತಿಳಿಸಿದರು.

ಮುರಘೇಂದ್ರ ಸಿಂಪಿ, ಮಹಾದೇವ ಬನಸೋಡೆ, ಗೇನಪ್ಪ ಬಿರಾದಾರ, ಗಂಗಾಧರ್ ಮಾನೆ, ಶ್ರೀಶೈಲ ಪೈಕರ್, ಶಂಕ್ರಪ್ಪ ಸಾಲೋಟಗಿ, ಸೋಮನಿಂಗ್ ನಿಂಗಾರಿ, ಧರ್ಮರಾಜ್ ಪಾಟೀಲ್, ಮಾಳಪ್ಪ ಹಿರೇಕುರಬರ, ಮಾಂತೇಶ ಬಡಿಗೇರ್, ನಾಗಪ್ಪ ಗುಡ್ಲ, ದತ್ತು ಹೇಳವಾರ, ಸಂಜು ಹಿರೇಕುರಬರ, ಹನಮಂತ ಹೂಗಾರ, ಚಂದು ಬೆನೂರ, ಮಮ್ಮದ ಮುಲ್ಲಾ, ಸಂತೋಷ್ ಟೆಂಗಳೆ, ಅಮ್ಮಸಿದ್ಧ ಆಸಂಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.