ಸಮೀಕ್ಷೆ ಮಾಡಿಯೇ ಪಕ್ಷ ನನಗೆ ಟಿಕೆಟ್ ನೀಡಿತ್ತು. ನನ್ನ ಸೋಲಿಗೆ ಯತ್ನಾಳರ ಬೋಗಸ್ ಮತಗಳೇ ಕಾರಣ. ನಮ್ಮ ಯಾವ ನಾಯಕರು ಯತ್ನಾಳ ಜೊತೆ ಒಳಒಪ್ಪಂದ ಮಾಡಿಕೊಂಡಿಲ್ಲ. ನಾನು ಬಲಿಪಶುವಾಗಿಲ್ಲ ವಿಜುಗೌಡ ಆರೋಪ ಸುಳ್ಳು
-ಅಬ್ದುಲ್ ಹಮೀದ್ ಮುಶ್ರೀಫ್ ಕಾಂಗ್ರೆಸ್ ಮುಖಂಡ
ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ಹಾಗೂ ಲಿಂಗಾಯತ ಧರ್ಮಕ್ಕೆ ವ್ಯತಿರಿಕ್ತವಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಲಿಂಗಾಯತ ಸಮಾಜದಿಂದ ಹೊರಹಾಕಿದೆ ಸಮಾಜಕ್ಕೆ ಕ್ಷೇಮ
–ಎಸ್.ಎಂ.ಪಾಟೀಲ ಗಣಿಹಾರ ಕೆಪಿಸಿಸಿ ವಕ್ತಾರ
ಚಿಂಚೋಳಿಯಿಂದ 25 ಸಾವಿರ ಜನರನ್ನು ಕರೆತಂದು ಬೋಗಸ್ ಮತ ಹಾಕಿಸಿಕೊಂಡಿದ್ದಾರೆ. ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಬ್ಯಾಂಕ್ ಆರಂಭಿಸಿದ್ದಾರೆ. ಹೀಗಾಗಿ ಯತ್ನಾಳ ವಿಜಯಪುರ ಶಾಸಕರಲ್ಲ ಚಿಂಚೋಳಿ ಶಾಸಕ
-ಎಂ.ಸಿ.ಮುಲ್ಲಾ ಮುಸ್ಲಿಂ ಮುಖಂಡ
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದ ಅನೇಕ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿದೆ. ಇದೀಗ ವಕ್ಪ್ ಭೂಮಿಯನ್ನು ಲೂಟಿ ಮಾಡಲು ಹವಣಿಸುತ್ತಿದೆ. ಇದಕ್ಕೆ ನಮ್ಮ ವಿರೋಧ ಇದೆ.
–ಮಹಮ್ಮದ್ ರಫೀಕ್ ಟಪಾಲ್ ಕಾಂಗ್ರೆಸ್ ಮುಖಂಡ
ಮಹಮ್ಮದ್ ಪೈಗಂಬರ್ ಹೆಸರು ಯತ್ನಾಳ ಹೊಸಲು ಬಾಯಲ್ಲಿ ಎಂದಿಗೂ ಬರುವಂತಿಲ್ಲ ಇನ್ನೊಮ್ಮೆ ಏನಾದರೂ ಪ್ರವಾದಿಯರಿಗೆ ಅವಹೇಳನ ಮಾಡಿದರೆ ನಿಮ್ಮ ಮನೆವರೆಗೂ ಬರುತ್ತೇವೆ