ವಿಜಯಪುರ: ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಸಮಾವೇಶಕ್ಕೆ ನೂರು ವರ್ಷ ತುಂಬಿದ ಸ್ಮರಣೆಗಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ನಗರದಲ್ಲಿ ಪಾದಯಾತ್ರೆ ಮಾಡಲಾಯಿತು.
ವಿಜಯಪುರ ಜಿಲ್ಲಾ ಪಂಚಾಯಿತಿ ಗೇಟ್, ವಜ್ರಹನುಮಾನ್ ರೈಲ್ವೆ ಗೇಟ್, ಬಬಲೇಶ್ವರ ನಾಕಾ ಹತ್ತಿರ ಬಿದನೂರ ಪಂಪ್‌ನಿಂದ, ಕಾಂಗ್ರೆಸ್ ಮುಖಂಡ ಹಮೀದ ಮುಶ್ರೀಫ್ ಅವರ ಕಚೇರಿಯಿಂದ ಹಾಗೂ ಮನಗೂಳಿ ಅಗಸಿಯಿಂದ ಬೆಳಿಗ್ಗೆ ಆರಂಭವಾದ ಪಾದಯಾತ್ರೆಯು ಜಿಲ್ಲಾ ಕಾಂಗ್ರೆಸ್ ಕಚೇರಿ ತಲುಪಿತು.
ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಮತ್ತು ಶಾಸ್ತ್ರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಮುಖಂಡರು, ಕಾರ್ಯಕರ್ತರು ಗಾಂಧಿ ವೃತ್ತದ ವರೆಗೆ ಪಾದಯಾತ್ರೆ ಮುಂದುವರಿಸಿದರು.
ಬೆಂಗಳೂರಿನ ಕೆ.ಪಿ.ಸಿ.ಸಿ ಕಚೇರಿಯಲ್ಲಿ ಆಚರಿಸಲಾದ ಗಾಂಧಿ ಜಯಂತಿ ಕಾರ್ಯಕ್ರಮದ ನೇರ ಪ್ರಸಾರವನ್ನು ಎಲ್.ಸಿ.ಡಿ. ಪರದೆಯ ಮುಖಾಂತರ ಕಾರ್ಯಕರ್ತರು ವೀಕ್ಷಿಸಲು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ರಾಜ್ಯ ಕೌಶಲಾಭಿವೃದ್ಧಿ ಅಧ್ಯಕ್ಷೆ ಕಾಂತಾ ನಾಯಕ, ಕಾಂಗ್ರೆಸ್ ಮುಖಂಡರಾದ ಹಮೀದ್ ಮುಶ್ರೀಫ್, ಡಿ. ಎಲ್. ಚವ್ಹಾಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ವಿದ್ಯಾರಾಣಿ ತುಂಗಳ, ಅಬ್ದುಲ್ ರಜಾಕ ಹೊರ್ತಿ, ಮೇಯರ್ ಮಾಹೆಜಬೀನ್ ಅಬ್ದುಲ್ ರಜಾಕ ಹೊರ್ತಿ, ಉಪ ಮೇಯರ್ ದಿನೇಶ ಹಳ್ಳಿ, ಬಿ.ಡಿ.ಎ. ಅಧ್ಯಕ್ಷ ಕನ್ನಾನ ಮುಶ್ರೀಫ್, ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ ಕಾಲೇಬಾಗ, ಗಂಗಾಧರ ಸಂಬಣ್ಣಿ, ಜಾಕೀರ ಮುಲ್ಲಾ, ವಸಂತ ಹೊನಮೋಡೆ, ಎಂ.ಎಂ. ಮುಲ್ಲಾ, ಜಮೀರಅಹ್ಮದ ಬಕ್ಷಿ, ಆರತಿ ಶಾಹಪೂರ, ಅಶ್ಪಾಕ ಮನಗೂಳಿ, ಕಾಶಿಬಾಯಿ ಹಡಪದ, ರುಕ್ಮಿಣಿ ಲಮಾಣಿ, ಮಂಜುಳಾ ಗಾಯಕವಾಡ, ಸ್ನೇಹಲತಾ ಶೆಟ್ಟಿ ಇದ್ದರು.