ವಿಜಯಪುರ: ‘ನಗರದಲ್ಲಿ ಇತ್ತೀಚೆಗೆ ನಡೆದ ಈದ್ ಮಿಲಾದ್ ರ್ಯಾಲಿಯಲ್ಲಿ ಪ್ಯಾಲಿಸ್ಟೇನ್ ಧ್ವಜ ಹಾರಾಟ, ಗ್ಯಾಂಗಸ್ಟಾರ್ ಒಬ್ಬನ ಫೋಟೋ ಪ್ರದರ್ಶನ, ಡಿಜೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಕೆಲವು ಮುಸ್ಲಿಂ ಯುವಕರು ಶಾಂತಿ ಕದಡುವ ಯತ್ನ ಮಾಡಿದ್ದಾರೆ’ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರವಾದಿ ಮಹಹ್ಮದ್ ಪೈಗಂಬರ್ ಅವರು ಶಾಂತಿ, ಮಾನವೀಯತೆ ತತ್ವ ಸಾರಿದವರು, ಅಂತಹ ಶ್ರೇಷ್ಠ ವ್ಯಕ್ತಿಯ ಮೆರವಣಿಗೆ ಸಮಯದಲ್ಲಿ ಅನೇಕ ಅಚಾತುರ್ಯಗಳು ಮುಸ್ಲಿಂ ಯುವಕರಿಂದ ನಡೆದಿವೆ. ದಾರಿ ತಪ್ಪುತ್ತಿರುವ ಯುವಕರಿಗೆ ಸಮಾಜದ ಧರ್ಮಗುರುಗಳು ಬುದ್ಧಿವಾದ ಏಕೆ ಹೇಳುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಡಿಜೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದರೂ ಸಹ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನೂ ಕಠಿಣ ಸೆಕ್ಷನ್ಗಳನ್ನು ವಿಧಿಸಿ ಕೇಸ್ ದಾಖಲಿಸಬೇಕಿತ್ತು. ಆದರೆ, ಯಾರ ಒತ್ತಡಕ್ಕೆ ಮಣಿದಿದ್ದಾರೋ ಗೊತ್ತಿಲ್ಲ’ ಎಂದು ಕಾರಜೋಳ ಹೇಳಿದರು.

ಮನೆಯವರಿಗೆ ಕೇಳಿ:

‘ಕಾಂಗ್ರೆಸ್ ನಾಯುಕರು ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಗೆ ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಬೇಕು. ಅಗೌರವ ತೋರಿ ಮಾತನಾಡಿದರೆ ನಾವು ಸಹಿಸುವುದಿಲ್ಲ, ಮೊನ್ನೆ ರಾಷ್ಟ್ರಪತಿಗಳಿಗೆ ಕನ್ನಡ ಬರುತ್ತದೆಯೇ ಎಂದು ಮುಖ್ಯಮಂತ್ರಿಗಳು ಕೇಳಿದ್ದಾರೆ. ಮೊದಲು ಅವರು ತಮ್ಮ ಕುಟುಂಬ ಸದಸ್ಯರಿಗೆ ಸರಿಯಾಗಿ ಕನ್ನಡ ಬರುತ್ತದೆಯೋ, ಇಲ್ಲವೋ ಎಂಬುದನ್ನು ಪ್ರಶ್ನೆ ಮಾಡಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.