ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಗಣೇಶ ಆರಾಧನೆಗೆ ಆದ್ಯತೆ, ಕಾಣದ ಅದ್ಧೂರಿ

Last Updated 23 ಆಗಸ್ಟ್ 2020, 14:15 IST
ಅಕ್ಷರ ಗಾತ್ರ

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತಶನಿವಾರ ಗಣೇಶನನ್ನು ಭಕ್ತಿ, ಭಾವದಿಂದ ಸ್ವಾಗತಿಸಲಾಯಿತು. ಎಲ್ಲಿಯೂ ಆಡಂಬರ, ಅದ್ಧೂರಿ, ಸದ್ದು, ಗದ್ದಲ ಇರಲಿಲ್ಲ.

ಶನಿವಾರ ಬೆಳಿಗ್ಗೆ ಮಕ್ಕಳೊಂದಿಗೆ ಮಾರುಕಟ್ಟೆಗೆ ತೆರಳಿದ ಜನರು ವಿವಿಧ ಭಂಗಿಯ ಗಣೇಶ ಮೂರ್ತಿಯನ್ನು ಖರೀದಿಸಿ ಮನೆಗೆ ತಂದು ಪ್ರತಿಷ್ಠಾಪಿಸಿದರು. ವಿವಿಧ ಭಕ್ಷ್ಯಗಳನ್ನು ಗಣೇಶನಿಗೆ ನೈವೇದ್ಯ ಅರ್ಪಿಸಿ, ಶಾಸ್ತ್ರೋಕ್ತವಾಗಿಪೂಜೆ ಸಲ್ಲಿಸಿದರು. ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನನ್ನು ಕೆಲವರು ಶನಿವಾರ ವಿಸರ್ಜಿಸಿದರೆ, ಮತ್ತೆ ಕೆಲವರು ಭಾನುವಾರ ವಿಸರ್ಜಿಸಿದರು.

ನಗರ, ಹಳ್ಳಿ, ಪಟ್ಟಣಗಳಲ್ಲೂ ವಿವಿಧ ಮಹಾ ಮಂಡಳಿಗಳುಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಿಹಬ್ಬಕ್ಕೆ ವಿಶೇಷ ಮೆರುಗು ನೀಡಿದರು. ಭಕ್ತರು ಗಣಪತಿ ದರ್ಶನ ಪಡೆದು, ಪುನೀತರಾದರು.

ಪ್ರತಿ ವರ್ಷದಂತೆ ನಗರದ ಪ್ರಮುಖ ಓಣಿ, ಸ್ಥಳಗಳಲ್ಲಿ ದೊಡ್ಡ ದೊಡ್ಡ ಪೆಂಡಾಲ್‌ಗಳು, ವಿದ್ಯುತ್ ದೀಪಗಳ ಅಲಂಕಾರ ಕಂಡು ಬರಲಿಲ್ಲ. ಗಣೇಶ ಪ್ರತಿಷ್ಠಾಪನೆಗೆಮೊದಲು ನಡೆಯುತ್ತಿದ್ದ ಮೆರವಣಿಗೆ, ಪಟಾಕಿ ಸದ್ದು, ಕೊರೊನಾ ಹಿನ್ನೆಲೆಯಲ್ಲಿ ನಡೆಯಲಿಲ್ಲ. ಬೆರಳಣಿಕೆ ಜನರು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನಾ ಸ್ಥಳಕ್ಕೆ ಕೊಂಡೊಯ್ದು, ಪ್ರತಿಷ್ಠಾಪಿಸುತ್ತಿರುವುದು ಕಂಡು ಬಂದಿತು. ಬೀದಿಗಳಲ್ಲೂ ಗಣೇಶ ಪ್ರತಿಷ್ಠಾಪನೆಗಳಪ್ರಮಾಣವೂ ಸಾಕಷ್ಟು ಇಳಿಕೆಯಾಗಿದೆ.

ಚಿಕ್ಕ ಮೂರ್ತಿಗಳ ಪೂಜೆ:ಪ್ರತಿ ವರ್ಷ ನಗರವೂ ಸೇರಿ ಜಿಲ್ಲೆಯಾದ್ಯಂತ ದೊಡ್ಡ ದೊಡ್ಡ ಗಾತ್ರದ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿದ್ದವು. ಕೊರೊನಾ ಹಿನ್ನೆಲೆ ಸರ್ಕಾರ ಬೀದಿಗಳಲ್ಲಿ ನಾಲ್ಕು ಅಡಿಗಿಂತಹೆಚ್ಚು ಹಾಗೂ ಮನೆಗಳಲ್ಲಿ ಎರಡು ಅಡಿಗಿಂತ ಹೆಚ್ಚು ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ನಿರ್ಬಂಧ ವಿದಿಸಿದ್ಧ ಹಿನ್ನೆಲೆಯಲ್ಲಿ, ಮಧ್ಯಮ ಗಾತ್ರದಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಲಾಗಿದೆ.

ಕಳೆದ ವರ್ಷ ನಗರದಲ್ಲಿಪ್ರತಿಷ್ಠಾಪಿಸಲಾಗಿದ್ದ ವಿಶೇಷ ಆಕೃತಿಯ ಗಣಪತಿ ಮೂರ್ತಿಗಳು ಈ ಬಾರಿ ಕಂಡು ಬರಲಿಲ್ಲ. ಪಿಒಪಿ ಅಬ್ಬರದಲ್ಲಿಯೂ ಹಲವರು ಮನೆಗಳಲ್ಲಿ ಹಾಗೂ ಮಹಾಮಂಡಳಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ವಿಶೇಷವಾಗಿತ್ತು.

ನಡೆಯದ ಮೆರವಣಿಗೆ:ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆಗೆ ಅವಕಾಶ ಇಲ್ಲದಿರುವುದರಿಂದ ಬ್ಯಾಂಜೋ, ಡಿಜೆ, ಪಟಾಕಿ ಸದ್ದಿನ ಅಬ್ಬರ ಎಲ್ಲಿಯೂ ಕಂಡುಬರಲಿಲ್ಲ. ಚಿಕ್ಕ ಮಕ್ಕಳು ಮನೆಯಂಗಳದಲ್ಲಿ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT