ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಜಿಲ್ಲೆಯ ಐದು ಪುರಸಭೆಗಳ ಅಧ್ಯಕ್ಷ–ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ಮುದ್ದೇಬಿಹಾಳ ಪುರಸಭೆ ಕಾಂಗ್ರೆಸ್‌ ಮಡಿಲಿಗೆ
Last Updated 3 ಸೆಪ್ಟೆಂಬರ್ 2018, 16:11 IST
ಅಕ್ಷರ ಗಾತ್ರ

ವಿಜಯಪುರ:ಜಿಲ್ಲೆಯ ಐದು ಪುರಸಭೆಗಳ ಅಧ್ಯಕ್ಷ–ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸಿ, ರಾಜ್ಯ ಸರ್ಕಾರ ತನ್ನ ಸರ್ಕಾರಿ ಪತ್ರದಲ್ಲಿ ಸೋಮವಾರ ಆದೇಶ ಹೊರಡಿಸಿದೆ.

ಅತಂತ್ರ ಫಲಿತಾಂಶ ಹೊಂದಿರುವ ಮುದ್ದೇಬಿಹಾಳ ಪುರಸಭೆಯ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಯ ಮಹಿಳೆಗೆ ನಿಗದಿ ಪಡಿಸಿದ್ದು, 10ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ಏಕೈಕ ಸದಸ್ಯೆ ಸೋನುಬಾಯಿ ನಾಯ್ಕ್‌ ನಿರಾಯಾಸವಾಗಿ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಸಿಂದಗಿ ಪುರಸಭೆ ಅಧ್ಯಕ್ಷ–ಸಾಮಾನ್ಯ, ಉಪಾಧ್ಯಕ್ಷ–ಹಿಂದುಳಿದ ವರ್ಗ, ಇಂಡಿ ಅಧ್ಯಕ್ಷ–ಹಿಂದುಳಿದ ವರ್ಗ, ಉಪಾಧ್ಯಕ್ಷ–ಸಾಮಾನ್ಯ, ಬಸವನಬಾಗೇವಾಡಿ ಅಧ್ಯಕ್ಷ–ಹಿಂದುಳಿದ ವರ್ಗ, ಉಪಾಧ್ಯಕ್ಷ–ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿದ್ದರೆ, ತಾಳಿಕೋಟೆ ಪುರಸಭೆಯ ಅಧ್ಯಕ್ಷ–ಉಪಾಧ್ಯಕ್ಷರ ಸ್ಥಾನಗಳೆರೆಡೂ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT