ಬುಧವಾರ, ಜೂನ್ 29, 2022
26 °C

ಕಾಂಗ್ರೆಸ್‌ನಿಂದ ರಾಜೀವ್‌ ಪುಣ್ಯತಿಥಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಅವರ 31ನೇ ಪುಣ್ಯತಿಥಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವುದರೊಂದಿಗೆ ಆಚರಿಸಲಾಯಿತು.

ಕಾಂಗ್ರೆಸ್ ಮುಖಂಡ ಅಬ್ದುಲ್‍ಹಮೀದ್‌ ಮುಶ್ರೀಫ್ ಮಾತನಾಡಿ, ರಾಜೀವ್‌ ಗಾಂಧಿ ಅವರು ದೇಶದಲ್ಲಿ ಪಂಚಾಯತ್‌ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದವರು, 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ನೀಡಿದವರು, ಇಡೀ ದೇಶದಲ್ಲಿ ಕಂಪ್ಯೂಟರ್‌ ಯುಗವನ್ನು ಆರಂಭಿಸಿದವರು ಎಂದು ಶ್ಲಾಘಿಸಿದರು.

ಯುವ ಪ್ರಧಾನಿಯಾದ್ದ ರಾಜೀವ್‌ ಎಲ್‌ಟಿಟಿಇ ಉಗ್ರರ ಮಾನವ ಬಾಂಬ್‌ ದಾಳಿಗೆ ತುತ್ತಾಗಿ, ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅವರ ಆದರ್ಶಗಳನ್ನು ನಾವೆಲ್ಲ ಪಾಲಿಸೋಣ, ನಮ್ಮನ್ನು ಅಗಲಿದ ಅವರ ಆತ್ಮಕ್ಕೆ ಭಗವಂತನು ಚಿರಕಾಲ ಶಾಂತಿ ನೀಡಲಿ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಸುಭಾಷ್‌ ಕಾಲೇಬಾಗ, ಹಿರಿಯ ಮುಖಂಡರಾದ ಡಿ.ಎಚ್. ಕಲಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಕಾರ್ಯದರ್ಶಿ ಶರಣಪ್ಪ ಯಕ್ಕುಂಡಿ, ಹಾಜಿಲಾಲ ದಳವಾಯಿ, ಎಂ.ಎ. ಬಕ್ಷಿ, ರಜಾಕಸಾಬ ಕಾಖಂಡಕಿ, ತಾಜುದ್ದೀನ ಖಲೀಫಾ, ನಿಂಗಪ್ಪ ಸಂಗಾಪೂರ, ಸುಂದರಲಾಲ ರಾಠೋಡ, ಮಲ್ಲಿಕಾರ್ಜುನ ಪರಸಣ್ಣವರ, ರವೀಂದ್ರ ಜಾಧವ, ಮಹಾದೇವ, ರಾಜ್ಯ ಓ.ಬಿ.ಸಿ. ಪ್ರಧಾನ ಕಾರ್ಯದರ್ಶಿ ಅಂಬಣ್ಣ ಕಲಮನಿ, ಕಲ್ಲಪ್ಪ ಎಸ್. ಪರಶೆಟ್ಟಿ, ವಸಂತ ಹೊನಮೊಡೆ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.