ವಿಜಯಪುರ ನಗರದ ಗಾಂಧಿ ಚೌಕಿಯಲ್ಲಿ ಗುರುವಾರ ಅಳವಡಿಸಿರುವ ಹಳೆಯ ಹಸಿರಿನ ಪರದೆ ತೂತು ಬಿದ್ದಿದೆ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ನೆರಳಿನ ವ್ಯವಸ್ಥೆಗಾಗಿ ₹15 ಲಕ್ಷ ವೆಚ್ಚ ಪ್ರಮುಖ ವೃತ್ತಗಳಲ್ಲಿ ನೆರಳಿನ ಪರದೆ ಗುತ್ತಿಗೆದಾರನ ಕರಾಮತ್ತು; ಕಾಟಾಚಾರಕ್ಕೆ ಅಳವಡಿಕೆ
ಕ್ರಮ ಕೈಗೊಳ್ಳುವೆ: ಮೆಕ್ಕಳಕಿ
ಕಳಪೆ ಗುಣಮಟ್ಟದ ಹಸಿರು ಪರದೆಗಳನ್ನು ಅಳವಡಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಒಂದು ವೇಳೆ ಕಳಪೆಯಾಗಿದ್ದರೆ ಬದಲಿಸಲು ಗುತ್ತಿಗೆದಾರರಿಗೆ ಸೂಚಿಸುತ್ತೇನೆ’ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ವಿಜಯಪುರ ನಗರದ ಕೋರ್ಟ್ ಸರ್ಕಲ್ ಕೇಂದ್ರ ಬಸ್ ನಿಲ್ದಾಣ ಗಾಂಧಿಚೌಕಿ ಬಸವೇಶ್ವರ ವೃತ್ತ ವಾಟರ್ ಟ್ಯಾಂಕ್ ಇಟಗಿ ಪೆಟ್ರೋಲ್ ಪಂಪ್ ಸರ್ಕಲ್‌ಗಳಲ್ಲಿ ಈ ಬೇಸಿಗೆಯಲ್ಲಿ ವಾಹನ ಸವಾರರಿಗೆ ಬಿಸಿಲಿನಿಂದ ರಕ್ಷಣೆ ಒದಗಿಸುವುದಕ್ಕಾಗಿ ₹15 ಲಕ್ಷ ಮೊತ್ತದ ಟೆಂಡರ್ ಅನ್ನು ತುಪ್ಪದ ಎಂಬುವವರಿಗೆ ಟೆಂಡರ್ ನೀಡಲಾಗಿದೆ’ ಎಂದರು. ‘ಕಳೆದ ವರ್ಷವೂ ತುಪ್ಪದ ಅವರೇ ನೆರಳಿನ ವ್ಯವಸ್ಥೆ ಮಾಡಿದ್ದರು. ಬಹಳ ಅಚ್ಚುಕಟ್ಟಾಗಿತ್ತು. ಹೀಗಾಗಿ ಈ ವರ್ಷವೂ ಅವರಿಗೆ ನೀಡಲಾಗಿದೆ. ಕಳಪೆಯಾಗಿದ್ದರೆ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.