ಸಿಂದಗಿ: ಪಟ್ಟಣದ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಪುರಸಭೆ ಆಡಳಿತ ಮಂಡಳಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಸಂಜೆ ಬಸವೇಶ್ವರ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಪರಸ್ಪರ ಗುಲಾಲು ಎರಚಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಪಟ್ಟರು. ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹಾಗೂ ಉಪಾಧ್ಯಕ್ಷ ಸಂದೀಪ ಚೌರ ಡೊಳ್ಳು ಬಾರಿಸುತ್ತ ಸಂಭ್ರಮಿಸಿದರು. ಕಾರ್ಯಕರ್ತರು ಶಾಂತವೀರ ಮನಗೂಳಿಯವರನ್ನು ಮೇಲೆತ್ತಿಕೊಂಡು ಕುಣಿದು ಕುಪ್ಪಳಿಸಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಬೀರಗೊಂಡ, ಸದಸ್ಯರಾದ ಬಸವರಾಜ ಯರನಾಳ, ಚನ್ನಪ್ಪ ಗೋಣಿ, ಸದಾಶಿವ ಕುಂಬಾರ, ಸಿದ್ದು ಮಲ್ಲೇದ, ರಹೀಂ ದುದನಿ, ಶರಣಪ್ಪ ಸುಲ್ಪಿ ಹಾಗೂ ಭೀಮೂ ರೋಡಗಿ, ಶಾಂತು ರಾಣಾಗೋಳ, ಪ್ರತಿಭಾ ಚಳ್ಳಗಿ ಮತ್ತು ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರಾಜಶೇಖರ ಎಸ್, ಆರೋಗ್ಯ ನಿರೀಕ್ಷಕ ನಬಿರಸೂಲ ಉಸ್ತಾದ ಅವರು ಶಾಂತವೀರ ಮನಗೂಳಿಯವರನ್ನು ಸನ್ಮಾನಿಸಿದರು.

ಸಿಂದಗಿಯ ಅಭಿವೃದ್ಧಿ ನಾಗಾಲೋಟಕ್ಕೆ ಮತ್ತೊಂದು ಗರಿ ಪುರಸಭೆಯಾಗಿದ್ದ ಸಿಂದಗಿ ಪಟ್ಟಣವು ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ನುಡಿದಂತೆ ನಡೆದಿದ್ದೇನೆ.
ಅಶೋಕ ಮನಗೂಳಿ ಶಾಸಕ ಸಿಂದಗಿ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.