‘ಸೀನಾ ಹಾಗೂ ಭೀಮಾ ನದಿಗಳ ಪ್ರವಾಹದಿಂದ ಜಿಲ್ಲೆಯ 11 ತಾಲ್ಲೂಕುಗಳ 877 ಗ್ರಾಮಗಳಿಗೆ ತೊಂದರೆ ಉಂಟಾಗಿದೆ. ದಕ್ಷಿಣ ಹಾಗೂ ಉತ್ತರ ಸೋಲಾಪುರ ಅಕ್ಕಲಕೋಟ ಮಾಢಾಕರಮಳಾ ಮಂಗಳವೇಡ ಪಂಢರಪುರ ಸಾಂಗೋಲಾ ಮಾಳಸಿರಸ ಇತರೆ ತಾಲ್ಲೂಕುಗಳಲ್ಲೂ ಸಮಸ್ಯೆಯಾಗಿದೆ. ಒಟ್ಟು 4.28 ಲಕ್ಷ ರೈತರಿಗೆ ನಷ್ಟ ಉಂಟಾಗಿದೆ. ಇವರಿಗೆ ನೆರವಾಗುವುದು ಸರ್ಕಾರದ ಆದ್ಯತೆಯಾಗಿದೆ’ ಎಂದು ಕೃಷಿ ಸಚಿವ ದತ್ತಾತ್ರೇಯ ಭರ್ಣೆ ಹೇಳಿದರು.