ದೇವರಹಿಪ್ಪರಗಿ: ಬಾದ್ಮಿ ಅಮಾವಾಸ್ಯೆ ಅಂಗವಾಗಿ ಮಂಗಳವಾರ ಚೌಡೇಶ್ವರಿ ದೇವಿ ಜಾತ್ರೆಯು ಭಕ್ತಿಭಾವದೊಂದಿಗೆ ಜರುಗಿತು.

ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆಯಿಂದಲೇ ಪೂಜಾ ವಿಧಿವಿಧಾನ ನಡೆಯಿತು. ಹರಕೆ ಹೊತ್ತ ಮಹಿಳೆಯರು ಉಡಿ ತುಂಬಿದರು. ಪ್ರಸಾದ ವಿತರಿಸಲಾಯಿತು.

ಸಂಜೆ, ಅರ್ಚಕರು ದೇವಿಯ ಮುಖವಾಡ ಧರಿಸಿ, ಪ್ರಮುಖ ಬೀದಿಗಳಲ್ಲಿ ಡೊಳ್ಳುವಾದ್ಯದೊಂದಿಗೆ ಹೆಜ್ಜೆಹಾಕಿದರು. ಸದಯ್ಯನಮಠದ ಗಂಗಾಸ್ಥಳ ತಲುಪಿದ ಮೆರವಣಿಗೆ, ದೇವಸ್ಥಾನಕ್ಕೆ ಮರಳಿತು. ಕೋಲಿ, ಕಬ್ಬಲಿಗ, ತಳವಾರ ಸಮುದಾಯದವರು ಬಡಿಗೆ ಹಿಡಿದು ಓಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಮಂಗಳೇಶ ಕಡ್ಲೇವಾಡ, ಶಿವಾನಂದ ಕುಂಬಾರ, ಕಾಶಿನಾಥ ಸೌದಿ, ಬಸವರಾಜ ಕುಂಬಾರ, ಶೇಖಪ್ಪ ವಾಡೇದಮನಿ, ಸಿದ್ದು ಕುಂಬಾರ, ಸಂಪತ್ ಜಮಾದಾರ, ಕಾಶೀನಾಥ ಕುಂಬಾರ, ಚಿದಾನಂದ ಕುಂಬಾರ, ಭೀಮರಾಯ ಕುಂಬಾರ, ಗಿರಿಮಲ್ಲ ಕುಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.