ವಿಜಯಪುರ: ‘ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ, ನಮ್ಮ ದೇಶವನ್ನು ಒಡೆದು ಮುಸಲ್ಮಾನರಿಗೆ ಪಾಕಿಸ್ತಾನವನ್ನು ಮಾಡಿಕೊಟ್ಟ, ಆದರೂ ಗಾಂಧೀಜಿಗೆ ರಾಷ್ಟ್ರಪಿತ ಅನ್ನುತ್ತೇವೆ, ನಮ್ಮ ದೇಶದ ಬೀದಿ, ಬೀದಿಗಳಲ್ಲಿ ಮೂರ್ತಿಗಳನ್ನು ಸ್ಥಾಪನೆ ಮಾಡಿದ್ದೇವೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇರೆಗೆ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಅಲ್ಲಾಭಕ್ಷ ಡೋಗರಿಸಾಬಾ ಬಢೇಘರ್ ಎಂಬುವವರು ಇಲ್ಲಿನ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಅವರ ಮಾನಹರಣ ಮಾಡಿ, ದೇಶದಲ್ಲಿ ಅಶಾಂತಿ ಹುಟ್ಟಿಸುವ ಪಿತೂರಿ ನಡೆಸಿರುವ ಯತ್ನಾಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ವಿಜಯಪುರ ನಗರದ ಆದರ್ಶನಗರದಲ್ಲಿ ಮೇ 12ರಂದು ನಡೆದ ಬಸವೇಶ್ವರ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯತ್ನಾಳ ಸುದ್ದಿ ಮಾಧ್ಯಮಗಳ ಜೊತೆ ಮಾತನಾಡುವಾಗ ಗಾಂಧೀಜಿಗೆ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಂಧನಕ್ಕೆ ಆಗ್ರಹ:

ಮಹಾತ್ಮ ಗಾಂಧಿ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿ, ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಯತ್ನಾಳ ಅವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಗಂಗಾಧರ ಸಂಬಣ್ಣಿ, ವೈಜನಾಥ ಕರ್ಪೂರಮಠ, ಡಾ. ರವಿಕುಮಾರ ಬಿರಾದಾರ, ಎಂ.ಸಿ.ಮುಲ್ಲಾ, ಫಯಾಜ ಕಲಾದಗಿ, ಜಮೀರ ಭಕ್ಷಿ, ಪರಶುರಾಮ ಹೊಸಮನಿ, ಶಕೀಲ ಬಾಗಮಾರೆ, ಮಹಾದೇವ ರಾವಜಿ, ಮೈನೂದ್ದೀನ್ ಬೀಳಗಿ, ಗಂಗುಬಾಯಿ ದುಮಾಳೆ, ಭಾರತಿ ನಾವಿ, ರಾಜಶ್ರೀ ಚೋಳಕೆ, ಅಸ್ಪಾಕ್ ಮನಗೂಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.