ವಿಜಯಪುರ: ಸಿ.ಎಸ್.ಆರ್ ಮತ್ತು ದಾನಿಗಳ ಅನುದಾನ, ಸರ್ಕಾರಿ ಅನುದಾನದಡಿ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 18 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಪ್ರಸಕ್ತ 2025-26 ಶೈಕ್ಷಣಿಕ ವರ್ಷದಿಂದ ಉನ್ನತಿಕರಿಸಿ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಸ್ಥಳೀಯ ಶಾಸಕರು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಕ್ಕೆ ಸ್ಪಂದಿಸಿ ಸರ್ಕಾರಿ ಈ ಶಾಲೆಗಳ ಉನ್ನತಿಕರಣಕ್ಕೆ ಕ್ರಮ ಕೈಗೊಂಡಿದೆ. ಇದರಲ್ಲಿ ಬಬಲೇಶ್ವರ ಮತಕ್ಷೇತ್ರದ ಆರು, ಸಿಂದಗಿ ತಾಲ್ಲೂಕಿನ ಎಂಟು, ಮುದ್ದೇಬಿಹಾಳ ತಾಲ್ಲೂಕಿನ ಎರಡು, ಬಸವನಬಾಗೇವಾಡಿ ಮತ್ತು ಇಂಡಿ ತಾಲ್ಲೂಕಿನ ತಲಾ ಒಂದು ಶಾಲೆಗಳನ್ನು ಪ್ರೌಢಶಾಲೆಗೆ ಉನ್ನತಿಕರಿಸಿ ಆದೇಶ ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಕೈಗಾರಿಕಾ ಇಲಾಖೆಯ ಸಿ.ಎಸ್.ಆರ್ ಅನುದಾನದಡಿ ಬಬಲೇಶ್ವರ ಮತ್ತು ತಿಕೋಟಾ ತಾಲ್ಲೂಕಿನ ಹೊನವಾಡದಲ್ಲಿರುವ ಸರ್ಕಾರಿ ಎಂ.ಪಿ.ಎಸ್, ಕಾತ್ರಾಳದ ಹಿರಿಯ ಪ್ರಾಥಮಿಕ ಶಾಲೆ, ರಾಜ್ಯ ಸರ್ಕಾರಿ ಅನುದಾನದಡಿ ಸಿದ್ದಾಪೂರ(ಅ) ಸರ್ಕಾರಿ ಜಿ.ಎಚ್.ಪಿ.ಎಸ್ ಶಾಲೆ, ನಿಡೋಣಿಯ ಸರ್ಕಾರಿ ಎಚ್.ಪಿ.ಎಸ್, ತಿಗಣಿಬಿದರಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಕೋಟ್ಯಾಳದ ಎಚ್.ಪಿ.ಎಸ್ ಶಾಲೆ ಪ್ರೌಢಶಾಲೆಗಳಾಗಿ ಉನ್ನತಿಕರಣವಾಗಲಿವೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಅನುದಾನದಡಿ ಸಿಂದಗಿ ತಾಲ್ಲೂಕಿನ ಸಿಂದಗಿ ಪಟ್ಟಣದ ಸರ್ಕಾರಿ ಕೆ.ಜಿ.ಎಚ್.ಪಿ.ಎಸ್ ಶಾಲೆ, ಬೊಮ್ಮನಜೋಗಿ ಎಲ್.ಟಿ-1 ಸರ್ಕಾರಿ ಜಿ.ಎಚ್.ಪಿ.ಎಸ್ ಶಾಲೆ, ಕೋರವಾರದ ಕೆ.ಬಿ.ಎಚ್.ಪಿ.ಎಸ್ ಶಾಲೆ, ನಾಗರಹಳ್ಳಿಯ ಸರ್ಕಾರಿ ಕೆ.ಬಿ.ಎಚ್.ಪಿ.ಎಸ್ ಶಾಲೆ, ಚಿಕ್ಕಸಿಂದಗಿಯ ಸರ್ಕಾರಿ ಕೆ.ಬಿ.ಎಚ್.ಪಿ.ಎಸ್ ಶಾಲೆ, ಆಹೇರಿಯ ಸರ್ಕಾರಿ ಎಂ.ಪಿ.ಎಸ್ ಶಾಲೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಗುಂದಗಿಯ ಸರ್ಕಾರಿ ಕೆ.ಬಿ.ಎಚ್.ಪಿ.ಎಸ್ ಶಾಲೆ ಮತ್ತು ಮಾದನಹಳ್ಳಿಯ ಸರ್ಕಾರಿ ಕೆ.ಬಿ.ಎಚ್.ಪಿ.ಎಸ್ ಶಾಲೆಗಳು ಪ್ರೌಢಶಾಲೆಗಳಾಗಿ ಉನ್ನತಿಕರಣವಾಗಲಿವೆ ತಿಳಿಸಿದ್ದಾರೆ.

ರಾಜ್ಯ ಸರ್ಕಾರಿದ ಅನುದಾನದಡಿ ಮುದ್ದೇಬಿಹಾಳ ತಾಲ್ಲೂಕಿನ ಶಿವಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗಡಿಸೋಮನಾಳ ಗ್ರಾಮದ ಸರ್ಕಾರಿ ಎಚ್.ಪಿ.ಎಸ್ ಶಾಲೆಗಳು ಪ್ರೌಢಶಾಲೆಗಳಾಗಿ ಉನ್ನತಿಕರಣವಾಗಲಿವೆ ಎಂದರು.

ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿಯ ಸರ್ಕಾರಿ ಯು.ಬಿ.ಎಚ್.ಪಿ.ಎಸ್ ಶಾಲೆಯನ್ನು ರಾಜ್ಯ ಸರ್ಕಾರದ ಅನುದಾನದಡಿ ಮತ್ತು ಇಂಡಿ ತಾಲ್ಲೂಕಿನ ತೆಗ್ಗಿಹಳ್ಳಿಯ ಸರ್ಕಾರಿ ಎಚ್.ಪಿ.ಎಸ್ ಶಾಲೆಯನ್ನು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಉನ್ನತಿಕರಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.