ವಿಜಯಪುರ: ಅವರಾರೂ ಶಾಸಕ, ಸಚಿವ ಆಗಬೇಕೆಂಬ ಆಸೆ ಹೊತ್ತವರಲ್ಲ, ಅವರಾರೂ ಖಾಸಗಿ ವೈದ್ಯಕೀಯ ಕಾಲೇಜು ಕಟ್ಟಬೇಕೆಂದುಕೊಂಡವರಲ್ಲ, ಅವರಾರೂ ಕೋಟ್ಯಾಧೀಶರಲ್ಲ, ಅವರಾರೂ ಕಳ್ಳರೂ ಅಲ್ಲ, ದರೋಡೆಕೋರರೂ ಅಲ್ಲ, ಕೊಲೆಗಾರರಲ್ಲ; ಅವರೆಲ್ಲರೂ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ತರಬೇಕೆಂಬ ಜನಪರ ಕಾಳಜಿಯಿಂದ ಹೋರಾಟಕ್ಕಿಳಿದವರು.

ಮನೆ, ಮಠ ತೊರೆದು ಚಳಿಯನ್ನು ಲೆಕ್ಕಿಸದೇ ನೂರು ದಿನಗಳಿಂದ ಆಹೋರಾತ್ರಿ ಧರಣಿ ನಡೆಸಿದರು. ‘ಲಪೂಟರು’, ‘ಪೇಮೆಂಟ್ ಗಿರಾಕಿಗಳು’ ಎಂದು ಅವಮಾನಿಸಿದರೂ ಹಿಂದೆ ಸರಿಯದೇ ಮುನ್ನುಗ್ಗಿದವರು.

ಸರ್ಕಾರದ ಕಣ್ತೆರೆಸಲು ಧರಣಿ ಸತ್ಯಾಗ್ರಹ, ಜನ ಜಾಥಾ, ಪಂಜಿನ ಮೆರವಣಿಗೆ, ಪತ್ರ ಚಳವಳಿ, ಸಹಿ ಸಂಗ್ರಹ, ಮಾನವ ಸರಪಳಿ, ರಂಗೋಲಿ ಚಳವಳಿ ನಡೆಸಿದವರು. ಇಷ್ಟಕ್ಕೂ ಸರ್ಕಾರ ಕಿವಿಗೊಡದೇ ಇದ್ದಾಗ ಗಮನ ಸೆಳೆಯಲು ಜನಪ್ರತಿನಿಧಿಗಳ ಮನೆಗೆ ಮುತ್ತಿಗೆ ಹಾಕಿ, ಮನವಿ ಸಲ್ಲಿಸಲು ಮುಂದಾಗಿ ಬಂಧಿತರಾಗಿ ಜೈಲು ಪಾಲಾಗಿದ್ದಾರೆ.

ಸುಳ್ಳು ಕೇಸು ಹಾಕಿಸಿಕೊಂಡು, ಜೈಲು ಪಾಲಾದವರಾರಾರೂ ಭವಿಷ್ಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಆಗಬೇಕು, ನೌಕರನಾಗಬೇಕು, ವೈದ್ಯಕೀಯ ಸೀಟು ಗಿಟ್ಟಿಸಬೇಕು, ಇಲ್ಲವೇ ಡೊನೇಷನ್ ಹೊಡೆಯಬೇಕು, ಮನೆ ಮೇಲೆ ಮಹಲು ಕಟ್ಟಬೇಕು ಎಂದುಕೊಂಡವರಲ್ಲ, ಕ್ರೆಡಿಟ್ಗಾಗಿ ಹೋರಾಟ ನಡೆಸಿದವರಲ್ಲ.

ಹಿಂದುಳಿದ ತಮ್ಮ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ತರಬೇಕು, ಜಿಲ್ಲೆಯ ವಿದ್ಯಾರ್ಥಿಗಳಿಗೆ ತಮ್ಮೂರಲ್ಲೇ ವೈದ್ಯಕೀಯ ಶಿಕ್ಷಣ ಕೈಗೆಟುಕುವಂತಾಗಬೇಕು, ಅನ್ಯ ಜಿಲ್ಲೆ, ರಾಜ್ಯಗಳ ವಿದ್ಯಾರ್ಥಿಗಳು ನಮ್ಮ ಜಿಲ್ಲೆಗೆ ಬಂದು ಕಲಿತು ಹೋಗಬೇಕು, ಇಲ್ಲಿಯ ವ್ಯಾಪಾರ, ವಹಿವಾಟು ವೃದ್ಧಿಸಬೇಕು, ನಾಲ್ಕು ಜನಕ್ಕೆ ಒಳಿತಾಗಬೇಕು ಎಂಬ ಕನಸುಕಂಡವರು.

ಸರ್ಕಾರಿ ಜಿಲ್ಲಾಸ್ಪತ್ರೆ ಬಲಿಷ್ಠ, ಬಂಡವಾಳಿಗರ ಕೈಗೆ ಸಿಕ್ಕು ಬಡವರಿಗೆ ಆರೋಗ್ಯ, ಶಿಕ್ಷಣ ಗಗನಕುಸುಮವಾಗದಿರಲಿ, ಸರ್ಕಾರಿ ಆಸ್ಪತ್ರೆ, ಕಾಲೇಜಿನಲ್ಲಿ ಜಿಲ್ಲೆಯ ಜನತೆಗೆ ಗುಣಮಟ್ಟದ ಚಿಕಿತ್ಸೆ ಉಚಿತವಾಗಿ ಸಿಗಲಿ ಎಂಬ ಆಶಯದೊಂದಿಗೆ ಧರಣಿ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರಿ ಮಣಿಸಲು ಮುಂದಾಗಿ ಈಗ ಜೈಲು ಪಾಲಾಗಿರುವ ಹಿರಿಯ ಪತ್ರಕರ್ತ, ಸಾಹಿತಿ ಅನಿಲ್ ಹೊಸಮನಿ, ರೈತ ಮುಖಂಡ ಅರವಿಂದ ಕುಲಕರ್ಣಿ, ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಭೋಗೇಶ ಸೋಲಾಪುರ, ಸಿದ್ದರಾಮ ಹಳ್ಳೂರ ಹಾಗೂ ಹುಳಶ್ಯಾಳದ ಸಂಗನ ಬಸವ ಸ್ವಾಮೀಜಿ ಅವರು ಕಳೆದ ಒಂಬತ್ತು ದಿನಗಳಿಂದ ಜೈಲಿನ ಕಂಬಿ ಎಣೆಸುತ್ತಿದ್ದು, ಇವರ ಬಿಡುಗಡೆಗೆ ಇಡೀ ಜಿಲ್ಲೆ ಕಾತರಿಸುತ್ತಿದೆ.

ಈಗಾಗಲೇ ಬಿಡುಗಡೆಯಾಗಿರುವ ಗಿರೀಶ ಕಲಘಟಗಿ, ಅಕ್ರಂ ಮಾಶಾಳಕರ, ಜಗದೇವ ಸೂರ್ಯವಂಶಿ, ಭರತ್ಕುಮಾರ್ ಎಚ್.ಟಿ, ಸಿದ್ದಲಿಂಗ ಬಾಗೇವಾಡಿ, ವಿನೋದ ಖೇಡ, ಮಲ್ಲಿಕಾರ್ಜುನ ತಳವಾರ, ಶಿವಬಾಳಮ್ಮ, ಲಲಿತಾ ಬಿಜ್ಜರಗಿ, ಸುರೇಶ ರಜಪೂತ, ಲಾಯಪ್ಪ ಇಂಗಳೆ, ಗೀತಾ ಎಚ್., ಕಾವೇರಿ ರಜಪೂತ, ಮಲ್ಲಿಕಾರ್ಜುನ ಎಚ್.ಟಿ., ಜ್ಯೋತಿ ಮಿಣಜಗಿ, ಮೀನಾಕ್ಷಿ ಸಿಂಗೆ, ಕಾಮಿನಿ ಕಸವೆ, ಸುನೀತಾ ಮೋರೆ, ಸುನಂದಾ ರಾಠೋಡ, ಸವಿತಾ ಮಾದರ, ರೇಣುಕಾ ಕೋಟ್ಯಾಳ ಸೇರಿದಂತೆ 21 ಜನರ ವಿರುದ್ಧ ಆದರ್ಶ ನಗರ ಠಾಣೆ ಪೊಲೀಸರು ದಾಖಲಿಸಿಕೊಂಡಿರುವ ಕೊಲೆ ಯತ್ನ, ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ದೂರನ್ನು ಸರ್ಕಾರ ರದ್ದುಗೊಳಿಸಬೇಕಿದೆ ಎಂಬುದು ಜಿಲ್ಲೆಯ ಪ್ರಜ್ಞಾವಂತ ಜನತೆಯ ಆಗ್ರಹವಾಗಿದೆ.

ಜನಪರ ಹೋರಾಟಗಾರರು ಜೈಲಿನಲ್ಲಿದ್ದರೂ ಜಿಲ್ಲೆಗೆ ಬರುತ್ತಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರನ್ನು ಸ್ವಾಗತಿಸಿ, ಸಂಭ್ರಮಿಸಲು ಇಡೀ ಜಿಲ್ಲೆಯ ಜನರು ಮುಂದಾಗಿದ್ದಾರೆ.

‘ಜೈಲಿನಲ್ಲಿರುವವರನ್ನು ತಕ್ಷಣ ಬಿಡುಗಡೆ ಮಾಡಬೇಕು, ಅವರ ವಿರುದ್ಧ ಇರುವ ಕೇಸು ರದ್ದುಗೊಳಿಸಬೇಕು, ಆದಷ್ಟು ಶೀಘ್ರ ವೈದ್ಯಕೀಯ ಕಾಲೇಜುಗೆ ಭೂಮಿ ಪೂಜೆ ನೆರವೇರಿಸಬೇಕು’ ಎಂಬ ಜಿಲ್ಲೆಯ ಜನರ ಒಕ್ಕೊರಲ ಬೇಡಿಕೆಯನ್ನು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲೆಯ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಹಾಗೂ ಇನ್ನುಳಿದ ಜನಪ್ರತಿನಿಧಿಗಳ ಮುಂದೆ ಇಟ್ಟಿದ್ದಾರೆ. ಜನರ ಬೇಡಿಕೆಗೆ ಜನನಾಯಕರು ಸ್ಪಂದಿಸುವರೇ ಎಂಬುದು ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.