ವಿಜಯಪುರ: ಆಲಮಟ್ಟಿ ಜಲಾಶಯದ ಮುಂಭಾಗದ ರೈಲ್ವೆ ಸೇತುವೆ ಕೆಳಗೆ ಕೃಷ್ಣಾ ನದಿಯಲ್ಲಿ ಯುಗಾದಿ ಪಾಡ್ಯದ ಅಂಗವಾಗಿ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನೀರು ಪಾಲಾಗಿದ್ದಾರೆ.

ಮೂವರಲ್ಲಿ ಒಬ್ಬ ಯುವಕನ ಶವ ಪತ್ತೆಯಾಗಿದ್ದು, ನಾಪತ್ತೆಯಾದ ಇನ್ನಿಬ್ಬರಿಗಾಗಿ ಹುಡುಕಾಟ ನಡೆದಿದೆ.

ಮೂವರು ಬಾಗಲಕೋಟೆ ತಾಲ್ಲೂಕಿನ ಇಲ್ಯಾಳ ಗ್ರಾಮದವರು.

ಸೋಮಶೇಖರ ಬೊಮ್ಮಣ್ಣ ದೇವರಮನಿ (15) ಶವ ಪತ್ತೆಯಾಗಿದೆ. ಕೃಷ್ಣಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮಲ್ಲಪ್ಪ ಬಸಪ್ಪ ಬಗಲಿ (15), ಪರನಗೌಡ ಮಲ್ಲಪ್ಪ ಬೀಳಗಿ (17) ಕಾಣೆಯಾಗಿದ್ದು, ಅವರಿಗಾಗಿ ಕೃಷ್ಣಾ ನದಿಯಲ್ಲಿ ಹುಡುಕಾಟ ನಡೆದಿದೆ.

ಘಟನೆ ನಡೆದ ತಕ್ಷಣ ಮೀನುಗಾರರು ಕಾಣೆಯಾದವರ ಹುಡುಕಾಟ ನಡೆಸಿದರು. ಒಬ್ಬ ಯುವಕನ ಶವ ಹೊರಗೆ ತೆಗೆದರು. ಕಾಣೆಯಾದವರ ಹುಡುಕಾಟಕ್ಕಾಗಿ ಬಾಗಲಕೋಟೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.

ಘಟನೆ ಆಲಮಟ್ಟಿ ಜಲಾಶಯದ ಕೃಷ್ಣಾ ನದಿಯ ಬಲಭಾಗದ ಬಾಗಲಕೋಟೆ ತಾಲ್ಲೂಕಿನ ಸೀತಿಮನಿ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಬಾಗಲಕೋಟೆ ಸಿಪಿಐ ಎಚ್. ಆರ್. ಪಾಟೀಲ ಭೇಟಿ ನೀಡಿದ್ದಾರೆ.

ಯುಗಾದಿ ಪಾಡ್ಯದ ನಿಮಿತ್ತ ಬಾಲಕರು ಕೃಷ್ಣಾ ನದಿಗೆ ಸ್ನಾನಕ್ಕೆ ಬಂದಿದ್ದರು. ನದಿ ನೀರಿನ ಆಳ ಗೊತ್ತಿಲ್ಲದೇ ಒಬ್ಬ ಮೊದಲು ಬಿದ್ದಿದ್ದು, ನಂತರ ಇನ್ನಿಬ್ಬರು ಅವನ ರಕ್ಷಣೆಗಾಗಿ ನದಿಗೆ ಇಳಿದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.