ತಿಮ್ಮಯ್ಯನದೊಡ್ಡಿ, ಮೈಸೂರಮ್ಮದೊಡ್ಡಿಯ ರೈತರು ಭಯದಿಂದ ಜೀವನ ನಡೆಸುತ್ತಿದ್ದೇವೆ. ಕಳೆದ ಒಂದು ವಾರದಿಂದ ಚಿರತೆಯ ಕಾಟ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಗ್ರಾಮಗಳಿಗೆ ಬಸ್ ಸೌಲಭ್ಯ ನೀಡದಿದ್ದರೆ ಮುಂದಿನ ಚುನಾವಣೆಯನ್ನು ಬಹಿಷ್ಕರಿಸಲಾಗುವುದು.
ರಮೇಶ್ ನಾಯಕ್, ಮೈಸೂರಮ್ಮದೊಡ್ಡಿಯ ನಿವಾಸಿ
ಅರಣ್ಯ ವ್ಯಾಪ್ತಿಯಲ್ಲಿ ಒಂದು ಮೊಲ ಸತ್ತರೆ ಇಡೀ ಅರಣ್ಯ ಇಲಾಖೆಯೇ ಇಲ್ಲಿರುತ್ತದೆ. ಆದರೆ ರೈತರ ರಾಸುಗಳಿಗೆ ಏನಾದರೂ ತೊಂದರೆಯಾದರೆ ಯಾರೂ ತಿರುಗಿ ನೋಡುವುದಿಲ್ಲ. ಕಾಡು ಪ್ರಾಣಿಗಳೊಂದಿಗೆ ಸಂಘರ್ಷ ತಡೆಯಲು ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಆದ್ಯತೆ ನೀಡಬೇಕು.
ಮಂಜುನಾಥ ನಾಯಕ್, ಸ್ಥಳೀಯ ನಿವಾಸಿ
ನಾನು ಅಂಗವಿಕಲ. ನನ್ನ ಪತ್ನಿ ಕೂಲಿ ಮಾಡುತ್ತಾಳೆ. ಕಳೆದ ಮೂರು ದಿನಗಳ ಹಿಂದೆ ಒಂದು ರಾಸು ಸತ್ತು ಹೋಗಿದೆ. ಚಿರತೆಯ ದಾಳಿಯಿಂದಾಗಿ ಮತ್ತೊಂದು ರಾಸು ಉಳಿಯುವುದು ಅನುಮಾನ. ಇಂತಹ ಪರಿಸ್ಥಿತಿಯಲ್ಲಿ ನಾವು ಜೀವನ ನಡೆಸುವುದೇ ಕಷ್ಟವಾಗಿದೆ.
ಚಿನ್ನಯ್ಯ, ತಿಮ್ಮಯ್ಯನದೊಡ್ಡಿ ನಿವಾಸಿ
ಚಿರತೆಯ ಕಾಟದಿಂದಾಗಿ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ವಿದ್ಯಾರ್ಥಿಗಳು, ಕೆಲಸಗಳಿಗೆ ಹೋಗುವವರಿಗೆ ಹೆಚ್ಚು ತೊಂದರೆಯಾಗಿದೆ. ಇಷ್ಟೆಲ್ಲಾ ಘಟನೆಗಳಾದರೂ ಅರಣ್ಯ ಇಲಾಖೆಯ ಬೋನ್ ಇಡದಿರುವುದು ವಿಪರ್ಯಾಸ